ನವದೆಹಲಿ: ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಅವರ ತಾಯಿ ಮಾಧವಿ ರಾಜೆ ಸಿಂದಿಯಾ ಬುಧವಾರ (ಮೇ 15) ಬೆಳಗ್ಗೆ ಏಮ್ಸ್ ನಲ್ಲಿ ಕೊನೆಯುಸಿರೆಳೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:BJP ಮತ್ತೆ ಅಧಿಕಾರಕ್ಕೆ ಬಂದರೆ ದೇಶವನ್ನು 22 ಬಿಲಿಯನೇರ್‌ಗಳು ನಡೆಸುತ್ತಾರೆ: ರಾಹುಲ್
ಕಳೆದ ಕೆಲವು ದಿನಗಳಿಂದ ವೆಂಟಿಲೇಟರ್ ನಲ್ಲಿದ್ದ ಮಾಧವಿ ರಾಜೆ ಸಿಂದಿಯಾ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ ಎಂದು ವರದಿ ತಿಳಿಸಿದೆ.
ಮೂರು ತಿಂಗಳಿನಿಂದ ಸಿಂದಿಯಾ ಅವರು ಖಾಸಗಿ ಆಸ್ಪತ್ರೆಯಲ್ಲಿ ನ್ಯೂಮೋನಿಯಾ ಹಾಗೂ ಕೊಳೆತ ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.
ಗ್ವಾಲಿಯರ್ ರಾಜಮನೆತನದ ರಾಜಮಾತೆ ಮಾಧವಿ ರಾಜೇ ಸಿಂದಿಯಾ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕಳೆದ ಕೆಲವು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದರು. ಮಾಧವಿ ರಾಜೇ ಸಿಂದಿಯಾ ಅವರು ಪ್ರಭಾವಿ ರಾಜಕಾರಣಿ, ಸಂಸದ, ಕೇಂದ್ರ ಸಚಿವ ದಿ.ಮಾಧವರಾವ್ ಸಿಂದಿಯಾ ಅವರ ಪತ್ನಿ.
ಉತ್ತರಪ್ರದೇಶದ ಮೈನ್ ಪುರಿ ಬಳಿ 2001ರ ಸೆಪ್ಟೆಂಬರ್ 30ರಂದು ಸಂಭವಿಸಿದ್ದ ವಿಮಾನ ದುರಂತದಲ್ಲಿ ಮಾಧವರಾವ್ ಸಿಂದಿಯಾ ಅವರು ಸಾವನ್ನಪ್ಪಿದ್ದರು.