Advertisement
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಬಲ್ ಇಂಜಿನ್ ಸರ್ಕಾರ ಎಂದರೆ ಎರಡೂ ಸರ್ಕಾರಗಳು ಅಭಿವೃದ್ಧಿಯತ್ತ ಸಾಗುತ್ತಿವೆ ಎನ್ನುವುದಲ್ಲ. ನಾನು ದೆಹಲಿಯಲ್ಲಿ ಪ್ರಧಾನಿ ಇದ್ದೇನೆ. ಕರ್ನಾಟಕದ ಮುಖ್ಯಮಂತ್ರಿ ನನ್ನ ಕೈಗೊಂಬೆ ಎಂಬುದು ಅವರ ಭಾವನೆ ಎಂದು ವ್ಯಂಗ್ಯವಾಡಿದರು.ಪ್ರಧಾನಮಂತ್ರಿ ಹಾಗೂ ಕೇಂದ್ರ ಗೃಹಮಂತ್ರಿ ಇಲ್ಲಿಯೇ ಠಿಕಾಣಿ ಹೂಡಿದಂತೆ ಪ್ರಚಾರ ನಡೆಸುತ್ತಿದ್ದಾರೆ. ಇದು ಡೆಲ್ಲಿ ಇಂಜಿನ್ ಸರ್ಕಾರವಲ್ಲ, ಬೆಂಗಳೂರು ಇಂಜಿನ್ ಸರ್ಕಾರಕ್ಕಾಗಿ ನಡೆದಿರುವ ಚುನಾವಣೆ. ಈ ಚುನಾವಣೆ ಬಗ್ಗೆ ರಾಜ್ಯದ ಜನತೆಗೆ ಸ್ಪಷ್ಟ ಅರಿವಿದೆ. ಭ್ರಷ್ಟಾಚಾರದಿಂದ ರೋಸಿ ಹೋದ ಜನರು ಕಾಂಗ್ರೆಸ್‌ನ ಗ್ಯಾರಂಟಿಗಳ ಮೇಲೆ ಭರವಸೆ ಇಟ್ಟು ಈ ಬಾರಿ ಸಿಂಗಲ್ ಇಂಜಿನ್ ಸರ್ಕಾರಕ್ಕೆ ಮಣೆ ಹಾಕಲಿದ್ದಾರೆ ಎಂದರು.
ಬಜರಂಗಬಲಿಯೇ ಬೇರೆ, ಬಜರಂಗ ದಳವೇ ಬೇರೆ. ಅದೇ ರೀತಿ ಜೈ ಶ್ರೀರಾಮ ಬೇರೆ, ಶ್ರೀರಾಮಸೇನೆಯೇ ಬೇರೆ. ನಾವೂ ಕೂಡ ಆಂಜನೇಯನ ಭಕ್ತರು. ಈಗ ನಾವು ನಿಷೆೇಧಿಸುತ್ತಿರುವುದು ಒಂದು ಸಂಘಟನೆಯನ್ನಷ್ಟೇ ಎಂದ ಅವರು, ಆಗ ಶ್ರೀರಾಮಸೇನೆ ನಿಷೇಧಿಸಿದರೂ ಗೋವಾ ಸರ್ಕಾರದ ವಿರುದ್ಧ ಚಕಾರವೆತ್ತದ ಬಿಜೆಪಿಗರು ಇಂದು ದುರುದ್ದೇಶಪೂರಕವಾಗಿ ಇದನ್ನು ವಿರೋಧಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಈ ಹಿಂದೆ ಚಿಕ್ಕಮಗಳೂರಿನಲ್ಲಿ ಲೋಕಸಭೆಗೆ ಸ್ಪರ್ಧಿಸಿದ್ದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಂದ ಕರ್ನಾಟಕಕ್ಕೆ ಸಂಜೀವಿನಿ ಸಿಕ್ಕಿತ್ತು. ಈಗ ರಾಹುಲ್ ಗಾಂಧಿ ಅವರ ಭಾರತ ಜೋಡೊ ಯಾತ್ರೆಯಿಂದ ಕಾಂಗ್ರೆಸ್‌ಗೆ ಸಂಜೀವಿನಿ ಸಿಕ್ಕಿದ್ದು ಹೊಸ ಹುಮ್ಮಸ್ಸು ಬಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಬೀಸುತ್ತಿದ್ದು, ಸ್ಪಷr ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು