Advertisement
ಜಸ್ಟಿನ್ ಟ್ರುಡೊ ಮತ್ತು ಸೋಫಿ ಅವರು ಸುದೀರ್ಘ ಸಂಭಾಷಣೆಯ ನಂತರ ಬೇರ್ಪಡಲು ನಿರ್ಧರಿಸಿದ್ದಾರೆ ಎಂದು Instagram ನಲ್ಲಿ ಪೋಸ್ಟ್ ಮಾಡಿ ತಿಳಿಸಿದ್ದಾರೆ. ಇದಲ್ಲದೆ, ಪ್ರಧಾನಿ ಕಾರ್ಯಾಲಯ ಹೊರಡಿಸಿದ ಹೇಳಿಕೆಯಲ್ಲಿ, ಇಬ್ಬರೂ ಕಾನೂನು ಪ್ರತ್ಯೇಕ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಹೇಳಲಾಗಿದೆ.. ಇದರೊಂದಿಗೆ ಇವರಿಬ್ಬರ ಹದಿನೆಂಟು ವರ್ಷಗಳ ದಾಂಪತ್ಯ ಜೀವನ ಅಂತ್ಯಗೊಂಡಂತಾಗಿದೆ.
ಜಸ್ಟಿನ್ ಟ್ರುಡೊ ಮೇ 28, 2005 ರಂದು ಮಾಂಟ್ರಿಯಲ್‌ನಲ್ಲಿ ವಿವಾಹವಾದರು. ಕಳೆದ ವರ್ಷ ವಿವಾಹ ವಾರ್ಷಿಕೋತ್ಸವದ ನಂತರ, ಸೋಫಿ ತಮ್ಮ ನಡುವೆ ಎಲ್ಲವೂ ಸರಿಯಾಗಿ ನಡೆಯುತ್ತಿಲ್ಲ ಎಂದು ಹೇಳಿದರು. ಮೇ ತಿಂಗಳಲ್ಲಿ ನಡೆದ ಕಿಂಗ್ ಚಾರ್ಲ್ಸ್ III ರ ಪಟ್ಟಾಭಿಷೇಕದಲ್ಲಿ PM ಟ್ರುಡೊ ಮತ್ತು ಅವರ ಪತ್ನಿ ಒಟ್ಟಿಗೆ ಕಾಣಿಸಿಕೊಂಡರು. 48 ವರ್ಷದ ಸೋಫಿ ಕ್ವಿಬೆಕ್‌ನಲ್ಲಿ ದೂರದರ್ಶನ ವರದಿಗಾರ್ತಿಯೂ ಆಗಿದ್ದಾರೆ. ಅವರು 51 ವರ್ಷದ ಜಸ್ಟಿನ್ ಟ್ರುಡೊ ಅವರೊಂದಿಗೆ ಮೂರು ಚುನಾವಣೆಗಳಿಗೆ ಪ್ರಚಾರವನ್ನೂ ಮಾಡಿದ್ದಾರೆ. ದಂಪತಿಗೆ ಮೂವರು ಮಕ್ಕಳು:
ಟ್ರುಡೊ ದಂಪತಿಗೆ ಜೇವಿಯರ್ ಮತ್ತು ಹ್ಯಾಡ್ರಿಯನ್ ಮತ್ತು ಮಗಳು ಎಲಾ-ಗ್ರೇಸ್ ಮೂವರು ಮಕ್ಕಳಿದ್ದಾರೆ. ಮಕ್ಕಳ ಹಿತದೃಷ್ಟಿ ಮುಖ್ಯವಾಗಿದ್ದು ಮುಂದಿನ ವಾರ ಜಸ್ಟಿನ್ ಟ್ರುಡೋ ಅವರು ತಮ್ಮ ವಿಚ್ಛೇದನದ ಕುರಿತು ಮಾತನಾಡುವ ಸಾಧ್ಯತೆ ಇದೆ ಎನ್ನಲಾಗಿದ್ದು ಇದೇ ವೇಳೆ ದಂಪತಿ ತಮ್ಮ ಮಕ್ಕಳನ್ನು ಬೆಳೆಸುವ ಬಗ್ಗೆಯೂ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
Related Articles
Advertisement