Advertisement
ಆದರೆ, “ಡೆಲಿವರಿ’ ಮಾತ್ರ ಇನ್ನೂ ಆಗಿಲ್ಲ! ಈಗಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಅದು ಆಗುವ ಸಾಧ್ಯತೆಯೂ ಕಡಿಮೆ. ಈ ಹಿಂದೆ ಬಿಜೆಪಿ ಹಾಗೂ ಜೆಡಿಎಸ್ ಎರಡೂ ಪಕ್ಷಗಳು ಅರ್ಕಾವತಿ ಡಿನೋಟಿಫಿಕೇಷನ್ ಹಗರಣದ ವಿರುದ್ಧ ಹೋರಾಟ ಮಾಡಿದ್ದವು. ಆದರೆ, ಇಂದು ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್,ಜೆಡಿಎಸ್ ಒಂದಾಗಿ ಆಡಳಿತದ ಚುಕ್ಕಾಣಿ ಹಿಡಿದಿವೆ.
Related Articles
Advertisement
ಹಾಗಾಗಿ, ವರದಿ ಬಹಿರಂಗಪಡಿಸಲು ಹಿಂದೇಟು ಹಾಕುತ್ತಿದ್ದಾರೆಂದು ಆಗ ಪ್ರತಿ ಪಕ್ಷ ನಾಯಕರಾಗಿದ್ದ ಜಗದೀಶ ಶೆಟ್ಟರ್ ಆರೋಪಿಸಿದ್ದರು. ಸರ್ಕಾರವೇ ಆಯೋಗ ರಚನೆ ಮಾಡಿರುವುದರಿಂದ ವರದಿ ನಿರೀಕ್ಷಿತ. ಹಾಗೊಮ್ಮೆದಾಖಲೆಗಳನ್ನು ಪರಿಶೀಲಿಸಿ ಸತ್ಯಾಂಶಗಳ ಆಧಾರದಲ್ಲಿ ವರದಿ ನೀಡಿದ್ದರೆ ನ್ಯಾ. ಕೆಂಪಣ್ಣ ಅವರನ್ನು ಬಹಿರಂಗವಾಗಿ ಅಭಿನಂದಿಸುತ್ತೇನೆಂದು ಈಗ ಮುಖ್ಯಮಂತ್ರಿ ಆಗಿರುವ ಕುಮಾರಸ್ವಾಮಿ ಆಗ ಹೇಳಿದ್ದರು. ಈ ನಡುವೆ ಯಾರನ್ನೂ ಹೊಣೆಗಾರರ ನ್ನಾಗಿ ಅಥವಾ ತಪ್ಪಿತಸ್ಥರನ್ನಾಗಿ ಮಾಡುವ ಅಧಿಕಾರ ಆಯೋಗಕ್ಕೆ ಕೊಟ್ಟಿಲ್ಲ. ಆದ್ದರಿಂದ “ಕ್ಲೀನ್‌ಚಿಟ್’ ಅನ್ನುವುದು ಅಪ್ರಸ್ತುತ ಎಂದು ಆಯೋಗದ ಅಧಿಕಾರಿಗಳು ಹೇಳಿದ್ದರು. ಯಾವ ಸರ್ಕಾರದ ಅವಧಿಯಲ್ಲಿ ವರದಿ
ಸಲ್ಲಿಕೆಯಾಗಿರುತ್ತದೋ, ಆ ಸರ್ಕಾರದ ಅವಧಿ ಯಲ್ಲಿ ವರದಿ ಬಗ್ಗೆ ಯಾವುದೇ ಕ್ರಮ ಆಗಿರಲಿಲ್ಲದಿದ್ದರೆ, ಮುಂಬರುವ ಸರ್ಕಾರದ ಮೇಲೆ ವರದಿ ಮಂಡನೆ ಮತ್ತು ಜಾರಿಯ ಜವಾಬ್ದಾರಿ ಬೀಳುತ್ತದೆ ಎಂದು ಕಾನೂನು ತಜ್ಞರು ಹೇಳುತ್ತಾರೆ. ಹೀಗಾಗಿ ನ್ಯಾ. ಕೆಂಪಣ್ಣ ಆಯೋಗದ ವರದಿ ಒಪ್ಪಿಕೊಳ್ಳುವ, ಅನುಪಾಲನ ವರದಿ ಯೊಂದಿಗೆ ಅದನ್ನು ಸದನದಲ್ಲಿ ಮಂಡಿಸುವ ಹೊಣೆ ಈಗ ಸಮ್ಮಿಶ್ರ ಸರ್ಕಾರದ ಮೇಲಿದೆ. ಸಮ್ಮಿಶ್ರ ಸರ್ಕಾರ ದಲ್ಲಿ ಕಾಂಗ್ರೆಸ್ ಮೈತ್ರಿ ಪಕ್ಷ ಆಗಿರುವುದರಿಂದ ಅದರ ಸಾಧ್ಯತೆ ತೀರಾ ಕಡಿಮೆ. ಏನಿದು ನ್ಯಾ. ಕೆಂಪಣ್ಣ ವರದಿ?
ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಳ್ಳಲಾದ ಜಮೀನಿನ ಪೈಕಿ 981 ಎಕರೆ ಜಮೀನು ಡಿನೋಟಿಫಿಕೇಷನ್ ಮಾಡಲಾಗಿದ್ದು, ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದಾರೆಂದು ಪ್ರತಿಪಕ್ಷಗಳು
ಆರೋಪಿಸಿದ್ದವು. ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದ ಸರ್ಕಾರ ನ್ಯಾ.ಕೆಂಪಣ್ಣ ಆಯೋಗ ನೇಮಿಸಿತ್ತು. 2017ರ ಆ.23ಕ್ಕೆ 4 ಸಂಪುಟಗಳಲ್ಲಿ ಸುಮಾರು 9 ಸಾವಿರ ಪುಟಗಳ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. – ರಫೀಕ್ ಅಹ್ಮದ್