ನವದೆಹಲಿ: ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಅವರ ಮನೆಯ ಹೊರಭಾಗದಲ್ಲಿ ದೊರಕಿರುವ ಬೆದರಿಕೆ ಪತ್ರಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಭೂಗತ ಪಾತಕಿ ಲಾರೆನ್ಸ್ ಬಿಷ್ಣೊಯಿಯನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:‘ರಕ್ಕಮ್ಮ’ನ ಮೊಗದಲ್ಲಿ 50 ಮಿಲಿಯನ್ ಖುಷಿ: ವಿಕ್ರಾಂತ್ ರೋಣ ಹಾಡು ಸೂಪರ್ ಹಿಟ್
“ಪಂಜಾಬಿ ಗಾಯಕ ಸಿಧು ಮೂಸೆವಾಲಾಗೆ ಗತಿ ಶೀಘ್ರದಲ್ಲಿಯೇ ನಿಮಗೂ ಆಗಲಿದೆ ಎಂದು ಪತ್ರದಲ್ಲಿ ನಟ ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಅವರ ಹೆಸರನ್ನು ಉಲ್ಲೇಖಿಸಿದ್ದು,. ಇಬ್ಬರಿಗೂ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ಆರೋಪಿಸಲಾಗಿದೆ.
‘’ಸಲ್ಮಾನ್ ಖಾನ್ ಮತ್ತು ಸಲೀಂ ಖಾನ್ ಇಬ್ಬರಿಗೂ ಶೀಘ್ರದಲ್ಲಿಯೇ ಮೂಸೆವಾಲಾ ರೀತಿ ದಾಳಿ ನಡೆಸಲಾಗುವುದು” ಎಂದು ಹಿಂದಿಯಲ್ಲಿ ಬರೆದ ಪತ್ರದಲ್ಲಿ ತಿಳಿಸಲಾಗಿದೆ. ಪ್ರತಿದಿನ ಜಾಗಿಂಗ್ ಗೆ ಬಂದಾಗ ಸಲೀಂ ಖಾನ್ ಅವರು ಕುಳಿತುಕೊಳ್ಳುತ್ತಿದ್ದ ಬೆಂಚ್ ಮೇಲೆ ಬೆದರಿಕೆ ಪತ್ರ ಲಭ್ಯವಾಗಿತ್ತು ಎಂದು ತಿಳಿಸಿದೆ.
ಕಳೆದ ತಿಂಗಳು ಪಂಜಾಬ್ ಗಾಯಕ ಸಿಧು ಮೂಸೆವಾಲಾ ಅವರನ್ನು ಹಾಡಹಗಲೇ ಗುಂಡಿಟ್ಟು ಹತ್ಯೆಗೈಯಲಾಗಿತ್ತು. ಮೂಸೆವಾಲಾ ಹತ್ಯೆಯನ್ನು ಕೆನಡಾ ಮೂಲದ ಗ್ಯಾಂಗ್ ಸ್ಟರ್ ಗೋಲ್ಡ ಬ್ರಾರ್ ಕೊಲೆಯ ಹೊಣೆ ಹೊತ್ತಿಕೊಂಡಿರುವುದಾಗಿ ವರದಿ ತಿಳಿಸಿದೆ.