Advertisement

70 ವರ್ಷ ಬಳಿಕ ಭೂಮಿ ಸಮೀಪಕ್ಕೆ ಬರಲಿದೆ ಗುರು

01:28 AM Sep 26, 2022 | Team Udayavani |

ಉಡುಪಿ: ಭೂಮಿಗೆ ಸಮೀಪದಲ್ಲಿ ಗುರು ಗ್ರಹ ತನ್ನ ಪಥದಲ್ಲಿ ಹಾದು ಹೋಗುತ್ತಿದೆ. ಈ ಗ್ರಹ ವರ್ಷಕ್ಕೊಮ್ಮೆ ಭೂಮಿಗೆ ಸಮೀಪದಲ್ಲಿ ಹಾದು ಹೋದರೂ ಕಳೆದ 70 ವರ್ಷದ ಅನಂತರ ಇದೆ ಮೊದಲು ಎನ್ನುತ್ತಾರೆ ಖಗೋಳ ತಜ್ಞರು.

Advertisement

ಸೆ. 26ರಂದು ಗುರು ಗ್ರಹ ವಾರ್ಷಿಕ ಸಮೀಪ ಬರಲಿದೆ. ಇದನ್ನು ಖಗೋಳ ವಿಜ್ಞಾನದಲ್ಲಿ “ಜುಪಿಟರ್‌ ಅಪೊಸಿಷನ್‌’ ಎನ್ನುತ್ತಾರೆ. ಸೂರ್ಯನ ಸುತ್ತ ದೀರ್ಘ‌ವೃತ್ತದಲ್ಲಿ ಸುತ್ತುವ ಭೂಮಿ ಹಾಗೂ ಗುರುಗ್ರಹ 13 ತಿಂಗಳಿಗೊಮ್ಮೆ ಸಮೀಪಿಸುತ್ತವೆ.

ಹೀಗಾದಾಗ ಸೂರ್ಯಾಸ್ತವಾದೊಡನೆ ಪೂರ್ವ ಆಕಾಶದಲ್ಲಿ ಗುರು ಉದಯವಾಗಿ ರಾತ್ರಿಪೂರ್ತಿ ಕಾಣಿಸುತ್ತದೆ. ಈ ವರ್ಷ ಗುರು ಗ್ರಹವು ಭೂಮಿಯಿಂದ 59.1 ಕೋಟಿ ಕಿ.ಮೀ. ದೂರದಲ್ಲಿದೆ. ಇನ್ನೂ ಆರು ತಿಂಗಳಲ್ಲಿ ಭೂಮಿ ಯಿಂದ 94 ಕೋಟಿ ಕಿ.ಮೀ. ದೂರದ ಅಂತರವಿರಲಿದೆ. ಪ್ರಸ್ತುತ ಸಂಜೆ ಪೂರ್ವ ಆಕಾಶದಲ್ಲಿ ಗುರು ಗ್ರಹ ಹೊಳೆಯುವುದನ್ನು ಬರಿಗಣ್ಣಿನಿಂದ ವೀಕ್ಷಿಸಬಹುದು. ಮತ್ತೆ ಎರಡು ವಾರ ಕಾಲ ಇದು ಇರಲಿದೆ. ದೂರದರ್ಶಕದಲ್ಲಿ ಸುಂದರವಾಗಿ ಗೋಚರವಾಗುತ್ತದೆ ಎಂದು ಖಗೋಳ ಶಾಸ್ತ್ರಜ್ಞ ಡಾ| ಎ.ಪಿ. ಭಟ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next