Advertisement

Junior ವಿಶ್ವಕಪ್‌ ಹಾಕಿ ಕ್ವಾರ್ಟರ್‌ ಫೈನಲ್‌ಗೆ ಭಾರತ

10:33 PM Dec 09, 2023 | Team Udayavani |

ಕೌಲಾಲಂಪುರ: “ಸಿ’ ವಿಭಾಗದ ಮುಖಾಮುಖಿಯಲ್ಲಿ ಕೆನಡಾವನ್ನು 10-1 ಅಂತರದಿಂದ ಬಗ್ಗುಬಡಿದ ಭಾರತ ತಂಡ ಪುರುಷರ ಜೂನಿಯರ್‌ ವಿಶ್ವಕಪ್‌ ಹಾಕಿ ಪಂದ್ಯಾವಳಿಯ ಕ್ವಾರ್ಟರ್‌ ಫೈನಲ್‌ ತಲುಪಿದೆ.

Advertisement

ಮಂಗಳವಾರದ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತ ತಂಡ ನೆದರ್ಲೆಂಡ್ಸ್‌ ವಿರುದ್ಧ ಸೆಣಸಲಿದೆ. ಡಚ್ಚರ ಪಡೆ “ಡಿ’ ವಿಭಾಗದ ಅಗ್ರಸ್ಥಾನಿಯಾಗಿದೆ.
ಆಕ್ರಮಣಕಾರಿಯಾಗಿ ಆಟ ಆರಂಭಿಸಿದ ಭಾರತ ಗೋಲುಗಳ ಸುರಿಮಳೆಗೈಯುತ್ತ ಸಾಗಿತು. ಆದಿತ್ಯ ಅರ್ಜುನ್‌, ರೋಹಿತ್‌, ಅಮನ್‌ದೀಪ್‌ ಲಾಕ್ರಾ ತಲಾ ಎರಡು; ವಿಷ್ಣುಕಾಂತ್‌, ರಾಜೀಂದರ್‌, ಕುಶ್ವಾಹ ಸೌರಭ್‌ ಆನಂದ್‌ ಮತ್ತು ಉತ್ತಮ್‌ ಸಿಂಗ್‌ ತಲಾ ಒಂದು ಗೋಲು ಹೊಡೆದರು. ಕೆನಡಾದ ಏಕೈಕ ಗೋಲು 20ನೇ ನಿಮಿಷದಲ್ಲಿ ಜೂಡ್‌ ನಿಕೋಲ್ಸನ್‌ ಅವರಿಂದ ದಾಖಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next