ಭುವನೇಶ್ವರ: ಕಿರಿಯರ ವಿಶ್ವಕಪ್ ಹಾಕಿಯಲ್ಲಿ ಹಾಲಿ ಚಾಂಪಿಯನ್ ಭಾರತ ಆಘಾತ ಅನುಭವಿಸಿದೆ. ಸೆಮಿಫೈನಲ್‌ನಲ್ಲಿ ಜರ್ಮನಿ ವಿರುದ್ಧ 2-4 ಗೋಲುಗಳ ಅಂತರದಿಂದ ಸೋಲನುಭವಿಸಿದೆ. ಇನ್ನೊಂದು ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಗೆದ್ದ ಆರ್ಜೆಂಟೀನಾ ಫೈನಲ್‌ನಲ್ಲಿ ಜರ್ಮನಿಯನ್ನು ಎದುರಿಸಲಿದೆ.
ಭಾರತ ಪಂದ್ಯದ ಎರಡನೇ ಅವಧಿಯಲ್ಲಿ ಮತ್ತು 4ನೇ ಅವಧಿಯ ಕೊನೆಯ ನಿಮಿಷದಲ್ಲಿ ಗೋಲು ಬಾರಿಸಿತು. ಉತ್ತಮ್ ಸಿಂಗ್ ಹಾಗೂ ಬಾಬ್ಬಿ ಸಿಂಗ್ ಧಾಮಿ ಈ ಸಾಧನೆ ಮಾಡಿದರು.
ಜರ್ಮನಿ ಪಂದ್ಯದ 2ನೇ ಅವಧಿಯಲ್ಲಿ 4 ಗೋಲುಗಳನ್ನು ಬಾರಿಸಿ ಮುನ್ನಡೆ ಸಾಧಿಸಿತ್ತು. ಈ ಅಬ್ಬರವನ್ನು ತಡೆದುಕೊಳ್ಳಲು ಭಾರತಕ್ಕೆ ಕೊನೆಯವರೆಗೂ ಆಗಲೇ ಇಲ್ಲ. ಇಲ್ಲಿಗೆ ಹಾಲಿ ಚಾಂಪಿಯನ್ ಭಾರತದ ಆಟ ನಿರಾಶೆಯಲ್ಲಿ ಮುಕ್ತಾಯವಾಗಿದೆ.
ಇದನ್ನೂ ಓದಿ:ಟ್ರಾಫಿಕ್ ಪೊಲೀಸರ ಮೇಲೆ ದಾಳಿ ನಡೆಸಿದ್ದು ನಾವೇ: ಐಸಿಸ್
ಇನ್ನೊಂದು ಪಂದ್ಯದಲ್ಲಿ ಅರ್ಜೆಂಟೀನ 3-1ರಿಂದ ಪೆನಾಲ್ಟಿ ಶೂಟೌಟ್‌ನಲ್ಲಿ ಫ್ರಾನ್ಸ್ ತಂಡವನ್ನು ಸೋಲಿಸಿತು. ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ಗೋಲು ಬಾರಿಸಲು ವಿಫಲವಾಗಿದ್ದವು.