Advertisement
ಪೂರ್ವಾಹ್ನ 10ರಿಂದ ಸಂಘದ ಪ್ರಾದೇಶಿಕ ಸಮಿತಿಗಳಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ಜರಗಲಿದ್ದು, ಪೂರ್ವಾಹ್ನ 11ರಿಂದ ಸಂಘದ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಎಂಆರ್‌ಐ ಹಾಸ್ಪಿಟಾಲಿಟಿ ಆ್ಯಂಡ್ ಇನ್‌ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಇದರ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಕೆ. ಪ್ರಕಾಶ್ ಶೆಟ್ಟಿ ಅವರು ಆರ್ಥಿಕ ಸಹಾಯ ಮೇಳವನ್ನು ಉದ್ಘಾಟಿಸಲಿದ್ದಾರೆ.
Related Articles
Advertisement
ವಿಶೇಷ ಸಮಾಜ ಸೇವೆಸುಮಾರು 92 ವರ್ಷಗಳ ಸುದೀರ್ಘ ಇತಿಹಾಸ ಇರುವ ನಗರದ ಪ್ರತಿಷ್ಠಿತ ಹಿರಿಯ ಸಂಸ್ಥೆ ಬಂಟರ ಸಂಘವು ತನ್ನ ಸಾಮಾಜಿಕ ಕಳಕಳಿಯ ಯೋಜನೆಗಳಿಂದ ಬಂಟ ಸಮುದಾಯದ ಮನೆ-ಮನಗಳನ್ನು ಬೆಳಗುವ ನಿಟ್ಟಿನಲ್ಲಿ ವಿಶೇಷ ಕಾರ್ಯ ನಿರ್ವಹಿಸುತ್ತಿರುವ ಜೊತೆಗೆ ವಿಶ್ವದ ಬಂಟರ ಸಂಘಟನೆಗಳಲ್ಲಿ ಮಾದರಿ ಸಂಸ್ಥೆಯಾಗಿ ಬೆಳೆದು ನಿಂತಿದೆ. ಶಿಕ್ಷಣ ಒಂದೇ ಎಲ್ಲ ಸಮಸ್ಯೆಗಳಿಗೆ ಪರಿಹಾರ ಎನ್ನುವ ಘೋಷ ವಾಕ್ಯದೊಂದಿಗೆ ಪ್ರತಿಭೆ ಇದ್ದೂ ಆರ್ಥಿಕವಾಗಿ ಹಿಂದುಳಿದಿರುವ ಶಿಕ್ಷಣ ವಂಚಿತ ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಿ, ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸುತ್ತಿದೆ. ವಿಕಲ ಚೇತನರಿಗೆ, ಆರ್ಥಿಕವಾಗಿ ಹಿಂದುಳಿದ ಸಮಾಜದ ಅಸಹಾಯಕ ಬಂಟ ವಿಧವೆಯರಿಗೆ ಸಹಾಯ ನೀಡುತ್ತಾ ಬರುತ್ತಿದೆ. ಸುಮಾರು ಹದಿನೈದು ವರ್ಷಗಳಿಂದ ನಿರಂತರವಾಗಿ ಆರ್ಥಿಕ ಸಹಾಯ ಮೇಳವನ್ನು ಆಯೋಜಿಸುತ್ತಾ ಬರುತ್ತಿದೆ. ಇತ್ತೀಚೆಗಿನ ದಿನಗಳಲ್ಲಿ ಸುಮಾರು ಒಂದೂವರೆ ಕೋ. ರೂ. ಗಳಷ್ಟು ನಿಧಿಯನ್ನು ವಿತರಿಸಲಾಗುತ್ತಿದೆ. ಪ್ರತಿ ವರ್ಷ ಸುಮಾರು 6 ಸಾವಿರಕ್ಕಿಂತರೂ ಅಧಿಕ ಬಂಟ ಬಾಂಧವರು ಪಾಲ್ಗೊಳ್ಳುತ್ತಿದ್ದಾರೆ. ಅಧ್ಯಕ್ಷರ ನೂತನ ಯೋಜನೆ ಸಂಘದ ಅಧ್ಯಕ್ಷರಾಗಿ ಪದ್ಮನಾಭ ಎಸ್. ಪಯ್ಯಡೆ ಅವರು ಪದವಿ ಪಡೆದ ಸಂದರ್ಭ ದಲ್ಲಿ ಘೋಷಿಸಿದಂತೆ ಈ ವರ್ಷ ಹೊಸ ಯೋಜನೆಯೊಂದನ್ನು ಆರಂಭಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ ಸುಮಾರು 100 ವಿದ್ಯಾರ್ಥಿಗಳನ್ನು ಪ್ರಾಥಮಿಕ ಹಂತದಿಂದಲೇ ದತ್ತು ಸ್ವೀಕರಿಸಿ ಪ್ರತಿ ವಿದ್ಯಾರ್ಥಿಯ ವಾರ್ಷಿಕ ಶಿಕ್ಷಣದ ಖರ್ಚು ಸುಮಾರು 25 ಸಾವಿರ ರೂ. ಗಳನ್ನು ನೀಡುವ ಯೋಜನೆಗೆ ಪೂರಕವೆಂಬಂತೆ ಸುಮಾರು ನೂರು ದಾನಿಗಳು ತಮ್ಮ ಸ್ವಇಚ್ಛೆಯಿಂದ ಮುಂದೆ ಬಂದಿದ್ದು, ಪ್ರತಿಯೋರ್ವ ದಾನಿ ತಲಾ ಒಂದು ಮತ್ತು ಅದಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಲು ಮುಂದಾಗಿದ್ದಾರೆ.
ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಅವರು ಹಾಗೂ ಪದಾಧಿಕಾರಿಗಳಮಾರ್ಗದರ್ಶನದೊಂದಿಗೆ, ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಉಳೂ¤ರು ಮೋಹನ್‌ದಾಸ್ ಶೆಟ್ಟಿ ಮತ್ತು ಪದಾಧಿಕಾರಿಗಳ ನೇತೃತ್ವದಲ್ಲಿ ಈ ಬಾರಿ ವಿಧವಾ ಮಾಸಾಶನ ಮತ್ತು ವಿಕಲ ಚೇತನರಿಗೆ ನೀಡುವ ನಾಲ್ಕು ಸಾವಿರ ರೂ. ಮೊತ್ತವನ್ನು ಏಳು ಸಾವಿರ ರೂ. ಗಳಿಗೆ ಏರಿಸಲಾಗಿದೆ. ಜತೆಗೆ ಪ್ರಮಾಣ ಪತ್ರ ನೀಡುವ ಹೊಸ ಸ್ಕೀಮ್‌ವೊಂದನ್ನು ಆರಂಭಿಸಲಾಗಿದೆ. ದಾನಿಗಳ ಸಹಕಾರ
ಈ ಬಾರಿಯ ವಾರ್ಷಿಕ ಬಂಟ ಸಾಧಕ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಮುತ್ಸದ್ಧಿ ಸಂಘದ ಮಾಜಿ ಅಧ್ಯಕ್ಷ ಹಾಗೂ ಮಾಜಿ ವಿಶ್ವಸ್ತ ಎಂ. ಡಿ. ಶೆಟ್ಟಿ ಅವರು ತಮ್ಮ ಪ್ರಶಸ್ತಿ ಗೌರವ ಮೊತ್ತ ಒಂದು ಲಕ್ಷ ರೂ.ಗಳನ್ನು ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಗೆ ದೇಣಿಗೆಯಾಗಿ ನೀಡಿದ್ದಾರೆ. ಜಾಗತಿಕ ಬಂಟರ ಸಂಘ ಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಸಮಿತಿಗೆ ವಿಶೇಷ ದೇಣಿಗೆಯನ್ನು ನೀಡಿ ಸಹಕರಿಸಿದ್ದಾರೆ. ದಾನಿಗಳಾದ ಪ್ರಕಾಶ್ ಶೆಟ್ಟಿ ಬಂಜಾರ, ಸುಧೀರ್ ವಿ. ಶೆಟ್ಟಿ, ಪ್ರಭಾಕರ ಜೆ. ಶೆಟ್ಟಿ ಅವರು ಪ್ರತಿ ವರ್ಷದಂತೆ ನಿಗದಿತ ಮೊತ್ತವನ್ನು ದೇಣಿಗೆ ರೂಪದಲ್ಲಿ ನೀಡಿ ಸಹಕರಿಸುತ್ತಾ ಬಂದಿದ್ದಾರೆ. ಈ ಬಾರಿ ಬಂದಿರುವ ಎಲ್ಲ ಅರ್ಜಿಗಳ ಪುನರ್ ಪರಿಶೀಲನೆಗಾಗಿ ಭಾಸ್ಕರ್ ಶೆಟ್ಟಿ ಕಾರ್ನಾಡ್ ಇವರ ಮುಂದಾಳತ್ವದಲ್ಲಿ ನೂತನ ಸಮಿತಿಯು ಕಾರ್ಯಪ್ರವೃತ್ತವಾಗಿದ್ದು, ಕಿಶೋರ್ ಕುಮಾರ್ ಕುತ್ಯಾರ್, ಶಿವಪ್ರಸಾದ್ ಶೆಟ್ಟಿ, ಗೌತಮ್ ಶೆಟ್ಟಿ, ಪ್ರಸನ್ನ ಶೆಟ್ಟಿ, ಸಂಘದ ಮಹಾಪ್ರಬಂಧಕ ಪ್ರವೀಣ್ ಶೆಟ್ಟಿ, ಪ್ರಬಂಧಕ ಸುಕುಮಾರ್ ಶೆಟ್ಟಿ, ಸಂಘದ ಸಿಬಂದಿಗಳು ಬಹಳಷ್ಟು ಶ್ರಮಿಸಿದ್ದಾರೆ.