ಮಂಗಳೂರು: ಕಡಿಮೆ ವೆಚ್ಚದಲ್ಲಿ ಆರೋಗ್ಯ ಸೇವೆ ಪಡೆಯುವಂತಾಗಲು ನಗರದ ಕೆಎಂಸಿ ಆಸ್ಪತ್ರೆ ‘ಮಣಿಪಾಲ ಆರೋಗ್ಯ ಕಾರ್ಡ್’ ಪಡೆದುಕೊಳ್ಳುವ ಅವಕಾಶ ಕಲ್ಪಿಸುತ್ತಿದ್ದು, ನೋಂದಣಿಗೆ ಜು.29 ಕೊನೆಯ ದಿನವಾಗಿರುತ್ತದೆ. ಜೂ.11ರಿಂದಲೇ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಮುಖಾಂತರವೂ ನೋಂದಣಿ ಮಾಡಿಕೊಳ್ಳಬಹುದು. ವಾರ್ಷಿಕ 250 ರೂ. ನೀಡಿ 2019 ಜು. 31ವರೆಗೆ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ಕಾರ್ಡ್ ಪಡೆದವರು ಅತ್ತಾವರ ಹಾಗೂ ಬಲ್ಮಠದ ಕೆಎಂಸಿ ಆಸ್ಪತ್ರೆ, ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ, ಟಿಎಂಎ ಪೈ ಆಸ್ಪತ್ರೆ ಉಡುಪಿ ಹಾಗೂ ಕಾರ್ಕಳದ ಟಿಎಂಎ ಪೈ ರೋಟರಿ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆ ಪಡೆದುಕೊಳ್ಳಬಹುದು. ಮಂಗಳೂರು ಹಾಗೂ ಮಣಿಪಾಲದಲ್ಲಿರುವ ಡೆಂಟಲ್ ಆಸ್ಪತ್ರೆಗಳಲ್ಲೂ ಸೇವೆ ಲಭ್ಯ.
ಸೇವೆಗಳು ಯಾವುವು?
ಕಾರ್ಡ್‌ನ ಅವಧಿ ಒಂದು ವರ್ಷ ಇದ್ದು, ಈ ಅವಧಿಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿದರೆ ತೆರಬೇಕಾದ ಶುಲ್ಕದಲ್ಲಿ 50 ಶೇ. ಕಡಿತವಿದೆ ಲ್ಯಾಬ್, ಸ್ಕ್ಯಾನಿಂಗ್ ಇತ್ಯಾದಿಗಳ ಪರೀಕ್ಷಾ ಶುಲ್ಕದಲ್ಲಿ ಶೇ. 20 ಕಡಿತ ಇರಲಿದೆ. ಒಳರೋಗಿಯಾಗಿ ಸಾಮಾನ್ಯ ವಾರ್ಡ್‌ನಲ್ಲಿ ದಾಖಲಾಗಿ ಶಸ್ತ್ರಕ್ರಿಯೆ ಅಥವಾ ಸಹಜ ಹೆರಿಗೆಯಾದಲ್ಲಿ ಶುಲ್ಕದಲ್ಲಿ ಶೇ. 50 ಕಡಿತ ಇರಲಿದೆ. ಒಳರೋಗಿಯಾಗಿ ಸೆಮಿಪ್ರೈವೇಟ್ ವಾರ್ಡ್ ಅಥವಾ ಸ್ಪೆಷಲ್ ವಾರ್ಡ್‌ನಲ್ಲಿ ದಾಖಲಾಗಿದ್ದರೆ ಸೇವಾ ಶುಲ್ಕದಲ್ಲಿ ಶೇ. 20 ರಷ್ಟು ಕಡಿತ ಹಾಗೂ ಶಸ್ತ್ರಕ್ರಿಯೆಗೆ ಶೇ.10ರಷ್ಟು ಕಡಿತ ಇರಲಿದೆ
ಹೆಚ್ಚಿನ ಮಾಹಿತಿಗೆ 0824-2430555 ಸಂಪರ್ಕಿಸಬಹುದಾಗಿದೆ.