Advertisement

ಜೂ. 21: ಎಸ್‌ಡಿಎಂನ 40 ಸಾವಿರ ಕುಟುಂಬಗಳಿಂದ ಯೋಗ ಪ್ರದರ್ಶನ

10:23 AM Jun 17, 2020 | mahesh |

ಬೆಳ್ತಂಗಡಿ: ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಶ್ರೀ ಧ.ಮಂ. ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯದ ವತಿಯಿಂದ 6ನೇ ವಿಶ್ವ ಯೋಗ ದಿನಾಚರಣೆ ಅಂಗವಾಗಿ “ನನ್ನ ಜೀವನ-ಯೋಗ ಜೀವನ’, “ಮನೆಯೇ ಮೊದಲ ಯೋಗ ಚಾವಡಿ’ ಎಂಬ ವಿಭಿನ್ನ ಶೀರ್ಷಿಕೆಯಡಿ ಜೂ.21ರಂದು ಬೆಳಗ್ಗೆ 7ರಿಂದ 8 ಗಂಟೆಯ ವರೆಗೆ ವಿಶ್ವದಾದ್ಯಂತ 40 ಸಾವಿರ ಕುಟುಂಬಗಳಿಂದ ಏಕಕಾಲದಲ್ಲಿ ಯೋಗ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ| ಪ್ರಶಾಂತ್‌ ಶೆಟ್ಟಿ ಹೇಳಿದ್ದಾರೆ.

Advertisement

ವಿಶ್ವದೆಲ್ಲೆಡೆ ಪಸರಿಸಿರುವ ಶ್ರೀ ಧ.ಮಂ. ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯದ ವಿದ್ಯಾರ್ಥಿಗಳು, ಹಳೇ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕ ವೃಂದದವರನ್ನು ಒಳಗೊಂಡ 40 ಸಾವಿರಕ್ಕೂ ಹೆಚ್ಚಿನ ಮನೆಗಳಲ್ಲಿ ವಿಶ್ವ ಯೋಗ ದಿನಾಚರಣೆಯು ಸಂಭ್ರಮಿಸಲಿದೆ ಎಂದವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಆಡಳಿತಕ್ಕೆ ಒಳಪಡುವ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಶಾಂತಿವನ ಮತ್ತು ಸೌಖ್ಯವನ, ಪರೀಕ -ಉಡುಪಿ ಇಲ್ಲಿನ 20 ಸಾವಿರಕ್ಕೂ ಹೆಚ್ಚು ಸಾಧಕರು ಯೋಗಾಭ್ಯಾಸದ ಮೂಲಕ ವಿಶ್ವ ಯೋಗ ದಿನದಲ್ಲಿ ಸೇರಿಕೊಳ್ಳುವರು ಎಂದು ತಿಳಿಸಿದರು.

ಧ.ಮಂ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ| ಶಶಿಕಾಂತ ಜೈನ್‌ ಮಾತನಾಡಿ, 1991ರಲ್ಲಿ ಶಾಂತಿವನ ಟ್ರಸ್ಟ್‌ ರಾಜ್ಯದ 9 ಜಿಲ್ಲೆಗಳಲ್ಲಿ ಶಾಲಾ ಮಕ್ಕಳಿಗೆ ಯೋಗ ತರಬೇತಿಯನ್ನು ನೀಡಿದೆ. ಸುಮಾರು 3 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಫಲಾನುಭವಿಗಳಾಗಿದ್ದಾರೆ. ಆ ಎಲ್ಲ ವಿದ್ಯಾರ್ಥಿಗಳು ಮತ್ತು 4,850 ಯೋಗ ಶಿಕ್ಷಕರು ವಿಶ್ವ ಯೋಗ ದಿನ ಆಚರಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಡೀನ್‌ಗಳಾದ ಡಾ| ಶಿವಪ್ರಸಾದ್‌ ಶೆಟ್ಟಿ, ಡಾ| ಸುಜಾತಾ, ಡಾ| ಗೀತಾ ಹಾಗೂ ಸದಸ್ಯರಾದ ಉದಯ ಸುಬ್ರಮಣ್ಯ, ಡಾ| ಆಶ್ವಿ‌ನ್‌, ಡಾ| ಅರುಣ್‌, ಸರಕಾರದ ವಿಶ್ವ ಯೋಗ ದಿನಾಚರಣೆ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next