Advertisement
ಈ ಕುರಿತು ಪ್ರತಿಕ್ರಿಯಿಸಿದ ಬಾತ್ರಾ, “ಈಗಿನ ಯೋಜನೆಯಂತೆ ನಮ್ಮ ಮೊದಲ ಬ್ಯಾಚ್‌ನ ಕ್ರೀಡಾಪಟುಗಳನ್ನು ಜುಲೈ 17ರಂದು ಕಳುಹಿ ಸಲಾಗುತ್ತದೆ. ಇದಕ್ಕೆ ಪೂರಕವಾದ ಸಿದ್ಧತೆಗಳನ್ನು ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ ನಡೆಸುತ್ತಿದೆ. ಆದರೆ ಕ್ವಾರಂಟೈನ್ ಹಾಗೂ ತರಬೇತಿಯ ಕಾರಣಗಳಿಂದಾಗಿ ಒಂದೆರಡು ದಿನ ಮೊದಲೇ ಕಳುಹಿಸುವ ಪ್ರಯತ್ನ ಕೂಡ ನಡೆಸುತ್ತಿದ್ದೇವೆ. ಈ ಕುರಿತು ಟೋಕಿಯೊದಲ್ಲಿರುವ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ’ ಎಂದಿದ್ದಾರೆ.
ಟೋಕಿಯೊಗೆ ತೆರಳುವ ಭಾರತದ 26 ಸದಸ್ಯರ ಆ್ಯತ್ಲೆಟಿಕ್ಸ್ ತಂಡ ಪ್ರಕಟಗೊಂಡಿದೆ. ದ್ಯುತಿ ಚಂದ್, ಎಂ.ಪಿ. ಜಬೀರ್, ಗುರುಪ್ರೀತ್ ಸಿಂಗ್, ಅನ್ನು ರಾಣಿ ಮೊದಲಾದ ಸ್ಟಾರ್ ಆ್ಯತ್ಲೀಟ್ಸ್ ಇದರಲ್ಲಿದ್ದಾರೆ. 4×400 ಮೀ. ರಿಲೇಯಲ್ಲಿ ಪುರುಷರ ತಂಡ ಹಾಗೂ ಮಿಶ್ರ ತಂಡ ಸ್ಪರ್ಧಿಸಲಿದೆ. 16 ಕ್ರೀಡಾಪಟುಗಳು ವೈಯಕ್ತಿಕ ಸ್ಪರ್ಧೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.
ಜು. 31ರಿಂದ ಆ್ಯತ್ಲೆಟಿಕ್ಸ್ ಸ್ಪರ್ಧೆ ಆರಂಭವಾಗಲಿದೆ.