Advertisement

ಲಯನ್ಸ್‌ ಕ್ಲಬ್‌ ನಿಂದ ಜುಲೈ 12-14: ಕುಂದಾಪುರದಲ್ಲಿ ಹಲಸು, ಕೃಷಿ ಮೇಳ

03:42 PM Jul 09, 2024 | Team Udayavani |

ಕುಂದಾಪುರ: ಲಯನ್ಸ್‌ ಕ್ಲಬ್‌ ಕುಂದಾಪುರ ಕ್ರೌನ್‌ ವತಿಯಿಂದ ಹಲಸು ಮತ್ತು ಕೃಷಿ ಮೇಳ ಜು.12ರಿಂದ ಜು.14ರವರೆಗೆ ಆಯೋಜಿಸಲಾಗಿದೆ ಎಂದು ಲಯನ್ಸ್‌ ಕ್ಲಬ್‌ ಕುಂದಾಪುರ ಕ್ರೌನ್‌ ಅಧ್ಯಕ್ಷ ಜನನಿ ದಿನಕರ ಶೆಟ್ಟಿ ಹೇಳಿದರು.

Advertisement

ಅವರು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕುಂದಾಪುರ ಪರಿಸರದ ಜನರಿಗೆ ಹಾಗೂ ಕೃಷಿಕರಿಗೆ ಉಪಯೋಗವಾಗುವ ದೃಷ್ಟಿಯಿಂದ ಹಾಗೂ ಸಣ್ಣ ಸಣ್ಣ ಕೃಷಿ ಮತ್ತು ಗೃಹ ಕೈಗಾರಿಕೆ ಉತ್ಪನ್ನ ತಯಾರಿಸುವ ಮತ್ತು ಮಾರಾಟ ಮಾಡುವವರಿಗೆ ಒಂದೇ ಸೂರಿನಡಿ, ಕೃಷಿ ಉತ್ಪನ್ನ ಹಾಗೂ ಹಲಸಿನ ಮತ್ತು ಮಾವಿನ ವಿಶೇಷ ಆಹಾರ ಹಾಗೂ ಕೃಷಿ ಯಂತ್ರೋಪಕರಣ ಮತ್ತು ಸಾವಯವ ಉತ್ಪನ್ನಗಳ ಮಾರಾಟ ಹಾಗೂ ಪ್ರದರ್ಶನ ಆಯೋಜಿಸಲಾಗಿದೆ ಎಂದರು.

ಲಯನ್ಸ್‌ ಕ್ಲಬ್‌ ಕುಂದಾಪುರ ಕ್ರೌನ್‌ ಸ್ಥಾಪಕಾಧ್ಯಕ್ಷ ಕಿರಣ್‌ ಕುಂದಾಪುರ, ಕೃಷಿ ಮೇಳದ ವಿಶೇಷ ಕುರಿತು ಮಾಹಿತಿ ನೀಡಿ, ತೋಟಗಾರಿಕಾ ಇಲಾಖೆ, ಅರಣ್ಯ ಇಲಾಖೆ, ಕೃಷಿ ಇಲಾಖೆ, ಹಲೊ ಗೆಳೆಯರು ನಂದಿಬೆಟ್ಟು ಇವರ ಸಹಯೋಗದೊಂದಿಗೆ ಕುಂದಾಪುರ ನಗರದಲ್ಲಿ ನೆಹರು ಮೈದಾನದಲ್ಲಿ ಪ್ರಥಮ ಬಾರಿಗೆ ಹಲಸು ಹಾಗೂ ಕೃಷಿ ಮೇಳ ಆಯೋಜಿಸಲಾಗಿದೆ.

ಜು.12ರಿಂದ ಜು.14 ರವಿವಾರದ ತನಕ ಬೆಳಗ್ಗೆ 9 ರಿಂದ ರಾತ್ರಿ 8ರ ತನಕ ಹಲಸು ಮೇಳ, ಕೃಷಿ ಮೇಳ ಆಯೋಜಿಸಲಾಗಿದೆ. ಹಲಸಿನ ವಿವಿಧ ತಾಜಾ ತಿಂಡಿಗಳು ಹಲಸಿನ ಹಾಗೂ ವಿವಿಧ ಜಾತಿಯ ಹಣ್ಣಿನ ಗಿಡಗಳು, ಹೂವಿನ ಗಿಡಗಳು, ತರಕಾರಿ ಬೀಜಗಳು, ಸಾವಯವ ಗೊಬ್ಬರ, ಇಳಕಲ್‌ ಸೀರೆ, ಆಯುರ್ವೇದಿಕ್‌ ವಸ್ತುಗಳು, ಸಾವಯವ ಗೊಬ್ಬರ ಸಾವಯವ ಉತ್ಪನ್ನಗಳು ಇರಲಿವೆ ಎಂದರು.

Advertisement

ಲಯನ್ಸ್‌ ಕಾರ್ಯದರ್ಶಿ ಶ್ರೀಧರ ಮರವಂತೆ, ಅತ್ಯಾಧುನಿಕ ಯಂತ್ರೋಪಕರಣ ಮತ್ತು ಕೃಷಿ ಸಲಕರಣೆ, ಎಲ್ಲ ಬಗೆಯ ಹಣ್ಣಿನ ಹಾಗೂ ಹೂವಿನ ಗಿಡಗಳು ಮತ್ತು ಅಡಿಕೆ ಗಿಡಗಳು, ಖಾದಿ ಮತ್ತು ಕೈಮಗ್ಗದ ಬಟ್ಟೆಗಳು, ಆಯುರ್ವೇದ ಉತ್ಪನ್ನಗಳು, ಕೋಶಾಧಿಕಾರಿ ಜಗದೀಶ್‌ ವಾಸುದೇವ್‌, ಮೂರು ದಿನಗಳಲ್ಲಿ 40 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಸಂಸದರು, ಶಾಸಕರು, ಸಹಾಯಕ ಕಮಿಷನರ್‌ ಭಾಗ ವಹಿಸಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next