ಭುವನೇಶ್ವರ್: ನಂದನಕಾನನ್ ಮೃಗಾಲಯದಿಂದ ರಾಯಲ್ ಬೆಂಗಾಲ್ ಹುಲಿಯೊಂದು ಪಂಜರದಿಂದ ಹೊರ ಬಂದ ಪರಿಣಾಮ ಪ್ರವಾಸಿಗರಲ್ಲಿ ಆತಂಕ ಮೂಡಿಸಿದ್ದ ಘಟನೆ ಗುರುವಾರ ಒಡಿಶಾದಲ್ಲಿ ನಡೆದಿತ್ತು.
ಇದನ್ನೂ ಓದಿ:ಅಭಿಮಾನಿಗಳಿಂದ ಒತ್ತಾಯ ಬಂದರೆ ಅಭಿಷೇಕ್ ರಾಜಕೀಯ ಪ್ರವೇಶದ ಬಗ್ಗೆ ನೋಡೋಣ: ಸುಮಲತಾ
ಮೃಗಾಲಯದ ಅಧಿಕಾರಿಗಳ ಹೇಳಿಕೆ ಪ್ರಕಾರ, ರಾಯಲ್ ಬೆಂಗಾಲ್ ಹುಲಿ ಸೂರಜ್ ಪಂಜರದಿಂದ ತಪ್ಪಿಸಿಕೊಂಡು ಸಫಾರಿ ಪ್ರದೇಶದತ್ತ ಹೋಗಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಎಚ್ಚರಿಕೆಯ ಸಂದೇಶವನ್ನು ನೀಡಿ, ಎಲ್ಲಾ ಪ್ರವಾಸಿಗರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿ, ಎಲ್ಲಾ ದ್ವಾರಗಳನ್ನು ಮುಚ್ಚಲಾಗಿತ್ತು ಎಂದು ತಿಳಿಸಿದ್ದಾರೆ.
ಬಳಿಕ ತೀವ್ರ ಹುಟುಕಾಟದ ಬಳಿಕ ಸೂರಜ್ ಸಫಾರಿ ಪ್ರದೇಶದೊಳಗೆ ಓಡಾಡುತ್ತಿರುವುದು ಕಂಡು ಬಂದಿತ್ತು. ಬೋನಿನೊಳಗಿಂದ ಹೊರ ಬಂದ ಸೂರಜ್ ಗೆ ನಿರಾಳವಾಗಿತ್ತು. ಕೂಡಲೇ ಹುಲಿಯನ್ನು ಸೆರೆ ಹಿಡಿದು ಬೋನಿಗೆ ಹಾಕಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹುಲಿಯನ್ನು ಬೋನಿಗೆ ಹಾಕಿದ ಬಳಿಕ ಇದೀಗ ಆತಂಕ ದೂರವಾಗಿದ್ದು, ಪ್ರವಾಸಿಗರಿಗೆ ಮೃಗಾಲಯ ವೀಕ್ಷಿಸಲು ಅವಕಾಶ ನೀಡಲಾಗಿದೆ ಎಂದು ನಂದನ ಕಾನನ್ ಮೃಗಾಲಯದ ಉಪ ನಿರ್ದೇಶಕ ಸಂಜೀತ್ ಕುಮಾರ್ ತಿಳಿಸಿದ್ದಾರೆ.