Advertisement

ಕೇರಳದಲ್ಲಿ ಬಂಧನವಾಗಿದ್ದ ಕಾಫಿನಾಡಿನ ನಕ್ಸಲ್ ಶ್ರೀಮತಿಗೆ 14 ದಿನ ನ್ಯಾಯಾಂಗ ಬಂಧನ

11:52 AM Feb 17, 2024 | Team Udayavani |

ಚಿಕ್ಕಮಗಳೂರು: ಕರಪತ್ರ ಹಂಚಿಕೆ, ಸರ್ಕಾರಿ ಆಸ್ತಿ ನಷ್ಟ, ವಿದ್ವಂಸಕ ಕೃತ್ಯಕ್ಕೆ ಕ್ಕೆ ಸಂಚು ರೂಪಿಸಿದ ಆರೋಪದಲ್ಲಿದ್ದ ಕೇರಳದಲ್ಲಿ ಬಂಧನಕ್ಕೊಳಗಾಗಿದ್ದ ಚಿಕ್ಕಮಗಳೂರಿನ ನಕ್ಸಲ್ ಶ್ರೀಮತಿಗೆ ಎನ್.ಆರ್.ಪುರ ನ್ಯಾಯಾಲಯದಿಂದ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Advertisement

ಶ್ರೀಮತಿ ಮೇಲೆ ಕರಪತ್ರ ಹಂಚಿಕೆ, ಬ್ಯಾನರ್ ಕಟ್ಟಿದ್ದು, ಸರ್ಕಾರಿ ಆಸ್ತಿ ನಷ್ಟ, ವಿದ್ವಂಸಕ ಕೃತ್ಯದ ಸಂಚು, ಆಯುಧಗಳನ್ನ ಬಳಕೆ, ಟೆಂಟ್ ಹಾಕಿದ್ದು, ಗನ್‌ ತೋರಿಸಿ ಬೆದರಿಸಿ ಸುಲಿಗೆ ಪೊಲೀಸರಿಗೆ ಸಹಕಾರ ಮಾಡದಂತೆ ಬೆದರಿಕೆ ಸೇರಿದಂತೆ ಸುಮಾರು 9ಕ್ಕೂ ಹೆಚ್ಚು ಪ್ರಕರಣಗಳು ಶ್ರೀಮತಿ ಮೇಲಿತ್ತು ಎನ್ನಲಾಗಿದೆ.

ಅದರಂತೆ ಶ್ರೀಮತಿ ಅವರನ್ನು ಕೇರಳದಲ್ಲಿ ಬಂಧಿಸಿ ಕಾರ್ಕಳ ಪೊಲೀಸರ ವಶಕ್ಕೆ ಒಪ್ಪಿಸಲಾಗಿತ್ತು ಇದೀಗ ಕಾರ್ಕಳ ಪೊಲೀಸರಿಂದ ಶೃಂಗೇರಿ ಪೊಲೀಸರು ವಶಕ್ಕೆ ಪಡೆದು ಎನ್.ಆರ್.ಪುರ ಕೋರ್ಟ್ ಗೆ ಹಾಜರುಪಡಿಸಿದ್ದರು ಈ ವೇಳೆ ಶ್ರೀಮತಿಯನ್ನು 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇದನ್ನೂ ಓದಿ: ಟ್ರಕ್‌ – ಎಸ್‌ ಯುವಿ ಅಪಘಾತ: 18 ತಿಂಗಳ ಮಗು,ಒಂದೇ ಕುಟುಂಬದ ನಾಲ್ವರು ವೈದ್ಯರು ಮೃತ್ಯು

Advertisement

Udayavani is now on Telegram. Click here to join our channel and stay updated with the latest news.

Next