Advertisement
ರಾಮಮೂರ್ತಿನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ 8 ದಿನಗಳ ಹಿಂದೆ ಅವರನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು.
ವಿಚಾರಣೆ ವೇಳೆ, ನಾನು ತನ್ನ ಕೈಕೆಳಗಿನ ಅಧಿಕಾರಿಗಳನ್ನು ನಂಬಿ ಸ್ಟ್ರಾಂಗ್ ರೂಮ್‌ನ ಕೀ ಕೊಟ್ಟಿದ್ದೆ. ಆದರೆ ಡಿವೈಎಸ್ಪಿ ಹಾಗೂ ಇತರ ಅಧಿಕಾರಿಗಳು ಅದನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಇದರಲ್ಲಿ ತನ್ನ ತಪ್ಪು ಇಲ್ಲ. ನಂಬಿ ಕೆಟ್ಟೆ ಎಂದ ಪೌಲ್, ಮತ್ತೂಂದೆಡೆ ಇಡೀ ಪ್ರಕರಣದ ತನಿಖೆ ನಡೆಸುವಂತೆ ಸರಕಾರಕ್ಕೆ ಸಲಹೆ ಕೊಟ್ಟಿದ್ದೇ ನಾನು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.