Advertisement

ದೇಶದ ಎಲ್ಲ ಧಾರ್ಮಿಕ ಕೇಂದ್ರಗಳ ಬಗ್ಗೆ ನ್ಯಾಯಾಂಗ ಆಡಿಟ್‌ ಆರಂಭ

07:28 PM Apr 22, 2020 | Team Udayavani |

ಹೊಸದಿಲ್ಲಿ: ದೇಶದ ಎಲ್ಲ ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳಲ್ಲಿನ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗೆ ನೀಡಿರುವ ದೂರುಗಳೇ ಈಗ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಾಗಲಿವೆ. ನೈರ್ಮಲ್ಯ, ಸ್ವತ್ತು, ಪ್ರವೇಶ ಹಾಗೂ ಖಾತೆಗಳಿಗೆ ಸಂಬಂಧಿಸಿದ ಎಲ್ಲ ದೂರುಗಳ ಬಗ್ಗೆ ಜಿಲ್ಲಾಧಿಕಾರಿ ತನಿಖೆ ನಡೆಸಬೇಕು ಮತ್ತು ಇದಕ್ಕೆ ಸಂಬಂಧಿಸಿದ ವರದಿಯನ್ನು ಹೈಕೋರ್ಟ್‌ಗಳಿಗೆ ಸಲ್ಲಿಸಬೇಕು. ಹೈಕೋರ್ಟ್‌ ಇವುಗಳನ್ನು ಪಿಐಎಲ್‌ ಎಂದು ಪರಿಗಣಿಸಬೇಕು ಎಂಬ ಸುಪ್ರೀಂಕೋರ್ಟ್‌ನ ಮಹತ್ವದ ಆದೇಶ ಈಗ ಕಾರ್ಯರೂಪಕ್ಕೆ ಬಂದಿದೆ.

Advertisement

ಸುಪ್ರೀಂಕೋರ್ಟ್‌ ಆದೇಶವು ದೇಗುಲಗಳಷ್ಟೇ ಅಲ್ಲ, ಮಸೀದಿಗಳು, ಚರ್ಚ್‌ಗಳು ಮತ್ತು ಇತರ ಧಾರ್ಮಿಕ ಹಾಗೂ ದತ್ತಿ ಸಂಸ್ಥೆಗಳಿಗೂ ಅನ್ವಯವಾಗುತ್ತದೆ. ಸಂದರ್ಶಕರು ಎದುರಿಸಿದ ಸಂಕಷ್ಟಗಳು, ಆಡಳಿತ ಮಂಡಳಿಯಲ್ಲಿನ ವಿವಾದ, ನೈರ್ಮಲ್ಯ ನಿರ್ವಹಣೆಯಲ್ಲಿ ಲೋಪ, ಭಕ್ತರು ನೀಡಿದ ಕಾಣಿಕೆಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳದಿರುವುದು ಮತ್ತು ಧಾರ್ಮಿಕ ಸಂಸ್ಥೆಗಳ ಸ್ವತ್ತು ರಕ್ಷಣೆಗೆ ಸಂಬಂಧಿಸಿದ ದೂರುಗಳನ್ನು ಜಿಲ್ಲಾಧಿಕಾರಿಗಳು ಪರಿಶೀಲನೆಗೆ ಪರಿಗಣಿಸಬೇಕು ಎಂದು ಕಳೆದ ತಿಂಗಳು ನ್ಯಾ| ಆದರ್ಶ ಕೆ. ಗೋಯೆಲ್‌ ಹಾಗೂ ನ್ಯಾ.ಎಸ್‌ ಅಬ್ದುಲ್‌ ನಜೀರ್‌ ಅವರನ್ನೊಳಗೊಂಡ ನ್ಯಾಯಪೀಠ ಆದೇಶಿಸಿತ್ತು. ಸದ್ಯ 20 ಲಕ್ಷಕ್ಕೂ ಹೆಚ್ಚು ದೇಗುಲಗಳು, ಮೂರು ಲಕ್ಷ ಮಸೀದಿಗಳು ಮತ್ತು ಸಾವಿರಕ್ಕೂ ಹೆಚ್ಚು ಚರ್ಚ್‌ಗಳು ದೇಶಾದ್ಯಂತ ಇದ್ದು, ಇವುಗಳ ಬಗ್ಗೆ ಇರುವ ದೂರುಗಳನ್ನು ನಿರ್ವಹಿಸುವುದು ನ್ಯಾಯಾಂಗಕ್ಕೆ ಸವಾಲಿನ ಕೆಲಸವಾಗಲಿದೆ ಎಂಬ ಕಾಳಜಿಯೂ ಇದೀಗ ವ್ಯಕ್ತವಾಗಿದೆ. ಈಗಾಗಲೇ ಭಾರಿ ಪ್ರಮಾಣದಲ್ಲಿ ಕೋರ್ಟ್‌ಗಳಲ್ಲಿ ಪ್ರಕರಣಗಳು ಬಾಕಿ ಇವೆ.

Advertisement

Udayavani is now on Telegram. Click here to join our channel and stay updated with the latest news.

Next