Advertisement

ದ್ವೇಷ ಭಾಷಣದ ವೀಡಿಯೋ ವೀಕ್ಷಿಸಿದ ನ್ಯಾಯಾಧೀಶರು; ಎಲ್ಲರ ವಿರುದ್ಧ FIR ದಾಖಲಿಸಲು ಸೂಚನೆ

11:04 AM Feb 27, 2020 | Nagendra Trasi |

ನವದೆಹಲಿ: ದ್ವೇಷದ ಭಾಷಣ ಮಾಡಿದ ಎಲ್ಲರ ವಿರುದ್ಧ ಕೂಡಲೇ ಎಫ್ ಐಆರ್ ದಾಖಲಿಸುವಂತೆ ದೆಹಲಿ ಹೈಕೋರ್ಟ್ ಬುಧವಾರ ದೆಹಲಿ ಪೊಲೀಸರಿಗೆ ಖಡಕ್ ಸಂದೇಶ ರವಾನಿಸಿದೆ. ಇಂತಹ ಪ್ರಕರಣಗಳಲ್ಲಿ ವಿಳಂಬ ನೀತಿ ಅನುಸರಿಸಿದ ಪೊಲೀಸರ ವಿರುದ್ಧ ಹೈಕೋರ್ಟ್ ಚಾಟಿ ಬೀಸಿದೆ.

Advertisement

ಉದ್ವಿಗ್ನ ಸ್ಥಿತಿಗೆ ಕಾರಣವಾದ ದ್ವೇಷದ ಭಾಷಣಗಳ ವೀಡಿಯೋ ವೀಕ್ಷಣೆ ನಂತರ ಹೈಕೋರ್ಟ್ ಈ ಆದೇಶ ನೀಡಿದೆ. ದೆಹಲಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಬಿಜೆಪಿ ಮುಖಂಡರಾದ ಕಪಿಲ್ ಮಿಶ್ರಾ, ಅನುರಾಗ್ ಠಾಕೂರ್, ಅಭಯ್ ವರ್ಮಾ ಹಾಗೂ ಪರ್ವೇಶ್ ವರ್ಮಾನ ದ್ವೇಷದ ಭಾಷಣ ವೀಡಿಯೋವನ್ನು ತೆರೆದ ಕೋರ್ಟ್ ನಲ್ಲಿಯೇ ಪ್ರಸಾರ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next