Advertisement

ನ್ಯಾಯಾಧಿಕರಣ ಕಕ್ಷೆಯೊಳಗೇ ನಿರ್ಣಯ

06:40 AM Jan 27, 2018 | |

ಪಣಜಿ(ಶಿವೋಲಿ): ಮಹದಾಯಿ ನದಿ ನೀರು ಹಂಚಿಕೆ ವಿಷಯವನ್ನು ನ್ಯಾಯಾಧಿಕರಣದ ಕಕ್ಷೆಯ ಒಳಗೇ ನಿರ್ಣಯ ತೆಗೆದುಕೊಳ್ಳಲಾಗುವುದು. ಇದರಿಂದಾಗಿ ಮುಖ್ಯಮಂತ್ರಿ ಪರ್ರಿಕರ್‌ ಕರ್ನಾಟಕಕ್ಕೆ ಬರೆದ ಪತ್ರದ ಕುರಿತಂತೆ ಹೆಚ್ಚು ಮಾತನಾಡುವುದು ಸರಿಯಲ್ಲ.

Advertisement

ನ್ಯಾಯಾಧಿಕರಣದ ನಿರ್ಣಯವನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು ಎಂದು ಗೋವಾದ ಮಾಜಿ ಜಲಸಂಪನ್ಮೂಲ ಸಚಿವ ದಯಾನಂದ ಮಾಂದ್ರೇಕರ್‌ ಹೇಳಿದ್ದಾರೆ. 

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ ನದಿ ನೀರು ಹಂಚಿಕೆ ವಿಷಯವು ಇಂದಿನದಲ್ಲ. 2006ರಲ್ಲಿ ನ್ಯಾಯಾಧಿಕರಣದ ಸ್ಥಾಪನೆಯಾದರೂ ಮಹದಾಯಿ ನದಿ ನೀರು ಸಮಸ್ಯೆ ಅದಕ್ಕೂ ಹಿಂದಿನಿಂದಲೇ ಇತ್ತು. ಆದರೆ ಈ ಸಮಸ್ಯೆಯನ್ನು ಈ ಹಿಂದೆ ಯಾರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಈ ಹಿಂದಿನ ರಾಜಕಾರಣಿಗಳೇ ಮಹದಾಯಿ ಗೊಂದಲ ಸೃಷ್ಟಿಸಿದ್ದಾರೆ. ನಮಗೆ ಮಹದಾಯಿ ನದಿಯ ನೀರು ಬೇಡ ಎಂದು ಕಾಂಗ್ರೆಸ್‌ ಪಕ್ಷವು ಕರ್ನಾಟಕಕ್ಕೆ ಪತ್ರ ಬರೆದಿತ್ತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next