Advertisement

ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಆರೋಪ ಮಾಡಿದ ಜಡ್ಜ್

12:36 AM Aug 30, 2019 | Team Udayavani |

ಪಾಟ್ನಾ: ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಪಾಟ್ನಾ ಹೈಕೋರ್ಟ್‌ ನ್ಯಾಯಮೂರ್ತಿ ರಾಕೇಶ್‌ ಕುಮಾರ್‌ ಹೇಳಿದ್ದಾರೆ. ಹೈಕೋರ್ಟ್‌ನಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದು ಬಹಿರಂಗ ರಹಸ್ಯ ಎಂದು ನಿವೃತ್ತ ಐಎಎಸ್‌ ಅಧಿಕಾರಿಯೊಬ್ಬರಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಬಳಿಕ ನೀಡಿದ ಆದೇಶದಲ್ಲಿ ಅವರು ಅಭಿಪ್ರಾಯಪಟ್ಟಿದ್ದಾರೆ. ಇದರ ಜತೆಗೆ ಬಿಹಾರದಲ್ಲಿನ ಕೆಳ ಹಂತದ ನ್ಯಾಯಾಲಯಗಳಲ್ಲಿನ ಪರಿಸ್ಥಿತಿ ಕೂಡ ಅದಕ್ಕೆ ಹೊರತಾಗಿಲ್ಲ ಎಂದಿದ್ದಾರೆ.

Advertisement

ಅದರ ಪರಿಣಾಮವಾಗಿ ಮುಖ್ಯ ನ್ಯಾಯಮೂರ್ತಿ ಎ.ಪಿ.ಶಾಹಿ ನೇತೃತ್ವದ 11 ಸದಸ್ಯರ ನ್ಯಾಯಪೀಠ ಅವರಿಗೆ ನಿಗದಿ ಮಾಡಲಾಗಿದ್ದ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಲು ನಿರ್ಧರಿಸಿದೆ ಮತ್ತು ಅದಕ್ಕೆ ಸಂಬಂಧಿಸಿದಂತೆ ಸೂಚನೆಯನ್ನೂ ರವಾನಿಸಲಾಗಿದೆ. ಎಲ್ಲದಕ್ಕಿಂತ ಪ್ರಮುಖವಾಗಿ ಬುಧವಾರ ಅವರು ನೀಡಿದ್ದ ಆದೇಶವನ್ನೂ ರದ್ದುಗೊಳಿಸುವ ಆದೇಶವನ್ನೂ ಮುಖ್ಯ ನ್ಯಾಯಮೂರ್ತಿ ನೇತೃತ್ವದ ನ್ಯಾಯಪೀಠ ಆದೇಶ ನೀಡಿದೆ. ನ್ಯಾ. ರಾಕೇಶ್‌ಕುಮಾರ್‌ ಅವರಿಗೆ ಇಂಥ ಆದೇಶ ನೀಡಲು ವ್ಯಾಪ್ತಿಯೇ ಇಲ್ಲ ಎಂದು ನ್ಯಾಯಪಠ ಅಭಿಪ್ರಾಯಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next