Advertisement

ಸೂಪರ್ ಹಿಟ್ ‘2018’  ನಿರ್ದೇಶಕರ ಜೊತೆ ಸೇರಿದ ಲೈಕಾ ಪ್ರೊಡಕ್ಷನ್

05:44 PM Jul 11, 2023 | Team Udayavani |

2018- ಮಲಯಾಳಂನಲ್ಲಿ ತೆರೆಕಂಡು ಸೂಪರ್‌ ಹಿಟ್‌ ಆದ ಸಿನಿಮಾ. ಜ್ಯೂಡಾ ಆ್ಯಂಥನಿ ಜೋಸೆಫ್ ಈ ಚಿತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಈಗ ಇವರಿಗೆ ದೊಡ್ಡ ಸಂಸ್ಥೆಯಿಂದ ಆಫ‌ರ್‌ ಸಿಕ್ಕಿದೆ. ಅದು ಲೈಕಾ ಪ್ರೊಡಕ್ಷನ್‌.

Advertisement

ಇಂಡಿಯನ್‌, ಖೈದಿ-150, ವಡಾ ಚೆನ್ನೈ, ದರ್ಬಾರ್‌, ಪೊನ್ನಿಯಿನ್‌ ಸೆಲ್ವನ್‌ನಂತಹ ಸೂಪರ್‌ ಹಿಟ್‌ ಚಿತ್ರಗಳನ್ನು ನಿರ್ಮಿಸಿರುವ ಇಂಡಿಯನ್‌ -2, ರಜನಿ ಜೊತೆ ಲಾಲ್‌ ಸಲಾಂ ಸೇರಿದಂತೆ ಹಲವು ಚಿತ್ರಗಳಿಗೆ ಹಣ ಸುರಿದಿರುವ ಸುಭಾಷ್‌ ಕರಣ್‌ ಈಗ 2018 ನಿರ್ದೇಶಕರ ಜೊತೆ ಕೈ ಜೋಡಿಸಿದ್ದಾರೆ.

ಕೇರಳದಲ್ಲಿ 2018ರಲ್ಲಿ ಪ್ರವಾಹ ಉಂಟಾದಾಗ ಮಾನವೀಯತೆ ಗೆದ್ದಿತ್ತು. ಈ ನೈಜ ಕಥೆಯು ಬೆಳ್ಳಿತೆರೆಯಲ್ಲಿ ಅದ್ಭುತವಾಗಿ ಮೂಡಿಬಂದಿದ್ದು, ಕೇರಳ ಚಿತ್ರೋದ್ಯಮದ ಇತಿಹಾಸದಲ್ಲಿ ಅತಿದೊಡ್ಡ ಬ್ಲಾಕ್‌ ಬಸ್ಟರ್‌ ಆಗಿದೆ. ಈ ನಿರ್ದೇಶಕರಿಗೆ ಈಗ ಲೈಕಾ ಸಿನಿಮಾ ಮಾಡುತ್ತಿವೆ. ಶೀಘ್ರದಲ್ಲಿಯೇ ಈ ಚಿತ್ರದ ತಾರಾಬಳಗ ಹಾಗೂ ತಾಂತ್ರಿಕವರ್ಗದ ಅಪ್‌ಡೇಟ್‌ ಹೊರ ಬೀಳಲಿದೆ

Advertisement

Udayavani is now on Telegram. Click here to join our channel and stay updated with the latest news.

Next