Advertisement

ಜೆಡಿಎಸ್‌ ಜೆಪಿ ಭವನ ಉದ್ಘಾಟನೆ ನಾಳೆ

12:25 PM Mar 14, 2017 | |

ಬೆಂಗಳೂರು: ನಗರದ ಶೇಷಾದ್ರಿಪುರಂನಲ್ಲಿ ನಿರ್ಮಾಣಗೊಂಡಿರುವ ನಾಲ್ಕು ಅಂತಸ್ತಿನ ಜೆಡಿಎಸ್‌ ರಾಜ್ಯ ಕಚೇರಿ “ಜೆಪಿ’ ಭವನ ಬುಧವಾರ ಉದ್ಘಾಟನೆಗೊಳ್ಳಲಿದೆ. ಅಂದು ಮುಂಜಾನೆ ಹೋಮ- ಹವನದ ನಂತರ ಕಚೇರಿ ಉದ್ಘಾಟನೆ ನಡೆಯಲಿದ್ದು, ಅಂದು ರಾಜ್ಯ ಬಜೆಟ್‌ ಮಂಡನೆಯೂ ಇರುವುದರಿಂದ ಎಲ್ಲ ಶಾಸಕರಿಗೂ ಹಾಜರಿರುವಂತೆ ಸೂಚನೆ ನೀಡಲಾಗಿದೆ. ಕಚೇರಿ ಉದ್ಘಾಟನಾ ಕಾರ್ಯಕ್ರಮದ ನಂತರ ಶಾಸಕರು ಅಲ್ಲಿಂದಲೇ ನೇರವಾಗಿ ಬಜೆಟ್‌ ಅಧಿವೇಶನಕ್ಕೆ ಆಗಮಿಸಲಿದ್ದಾರೆ. 

Advertisement

ಕಚೇರಿ ಉದ್ಘಾಟನೆ ದಿನ ಬೃಹತ್‌ ಸಮಾವೇಶ ಆಯೋಜಿಸಲು ಉದ್ಧೇಶಿ ಸಲಾಗಿತ್ತಾದರೂ ಕುಮಾರಸ್ವಾಮಿಯವರ ಅನಾರೋಗ್ಯ ಹಾಗೂ ಅದೇ ದಿನ ರಾಜ್ಯ ಬಜೆಟ್‌ ಅಧಿವೇಶನ ಇರುವುದರಿಂದ ಮುಂದೂಡಲಾಗಿದೆ. ಈ ಮಧ್ಯೆ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಪಕ್ಷದ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಸೋಮವಾರ ನೂತನ ಕಚೇರಿಗೆ ಭೇಟಿ ನೀಡಿ ಸಿದ್ಧತೆ ವೀಕ್ಷಿಸಿದರು.

ಐಟಿ ಕಂಪೆನಿಯಂತಿರುವ ಕಟ್ಟಡ:ಜೆಡಿಎಸ್‌ನ ನೂತನ ಕಟ್ಟಡ ಐಟಿ-ಬಿಟಿ ಕಂಪನಿಗಳ “ಹೈಟೆಕ್‌’ನಂತಿದ್ದು, ಮೇಜು, ಕುರ್ಚಿ ಸೇರಿದಂತೆ ಒಳಾಂಗಣ ವಿನ್ಯಾಸಕ್ಕೆ ಚೀನಾದಿಂದ ಉಪಕರಣ ತರಿಸಲಾಗಿದೆ. ಬೃಹತ್‌ ಸಭಾಂಗಣ, ಶಾಸಕರು, ಪಾಲಿಕೆ ಸದಸ್ಯರ ಸಭೆಗೆ ದೊಡ್ಡ ಹಾಲ್‌ ಇದೆ. ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರು ಖುದ್ದು ಆಸಕ್ತಿ ವಹಿಸಿ ಕಟ್ಟಡ ನಿರ್ಮಾಣ ಮಾಡಿಸಿದ್ದಾರೆ. ಕಾರ್ಯಕರ್ತರಿಗಾಗಿ ರಿಯಾಯಿತಿ ದರದಲ್ಲಿ ಊಟ-ತಿಂಡಿ ದೊರೆಯುವ ಕ್ಯಾಂಟೀನ್‌ ವ್ಯವಸ್ಥೆ ಸಹ ಕಲ್ಪಿಸಲು ನಿರ್ಧರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next