Advertisement

ಪತ್ರಕರ್ತರು ಸಮಾಜದ ಪ್ರತಿಬಿಂಬ: ರಾಜುಗೌಡ

12:50 PM Nov 12, 2021 | Team Udayavani |

ಸುರಪುರ: ಸಂವಿಧಾನದ ನಾಲ್ಕನೇ ಅಂಗವಾಗಿರುವ ಪತ್ರಿಕಾ ರಂಗ ಶ್ರೇಷ್ಠವಾದದ್ದು. ಅನೇಕ ಸವಾಲುಗಳ ಮಧ್ಯೆ ಜನರಿಗೆ ಮಾಹಿತಿ ನೀಡುವ ಕಾರ್ಯ ಪತ್ರಕರ್ತರು ಮಾಡುತ್ತಾರೆ. ಪತ್ರಕರ್ತರು ಸೇವೆ ಅಮೂಲ್ಯವಾದದ್ದು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಅಧ್ಯಕ್ಷ, ಶಾಸಕ ರಾಜುಗೌಡ ಹೇಳಿದರು.

Advertisement

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ಗುರುವಾರ ಪತ್ರಕರ್ತರ ಸಂಘದಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಅಶೋಕ ಸಾಲವಾಡ ಅವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಪತ್ರಕರ್ತರು ಸರ್ಕಾರ ಮತ್ತು ಸಮಾಜದ ಪ್ರತಿಬಿಂಬ ಹಾಗೂ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ಪತ್ರಕರ್ತರು ಕನ್ನಡಿ ಇದ್ದಂತೆ. ನಾವು ಮಾಡುವ ಒಳ್ಳೆಯ ಮತ್ತು ಕೆಟ್ಟ ಕೆಲಸ ಇದ್ದ ರೀತಿಯಲ್ಲಿ ಸಮಾಜಕ್ಕೆ ತಿಳಿಸುವ ಕೆಲಸ ಮಾಡುತ್ತಾರೆ. ಹಲವಾರು ಮಾರ್ಗದರ್ಶ ಮಾಡುತ್ತಾರೆ. ಸಮಾಜದಲ್ಲಿ ದಿಕ್ಸೂಚಿಯಾಗಿ ಸೇವೆ ನೀಡುತ್ತಾರೆ ಎಂದರು.

ಪ್ರಾಮಾಣಿಕತೆ, ನಿಷ್ಠುರತೆ, ದಿಟ್ಟತನದ ಪತ್ರಕರ್ತರು ಇಂದು ಅನೇಕ ಸವಾಲು ಎದುರಿಸಬೇಕಾದ ಸ್ಥಿತಿ ಇದೆ. ಇಂದಿನ ದಿನಮಾನದಲ್ಲಿ ಪತ್ರಕರ್ತರ ಜೀವನ ಬಹಳ ಕಷ್ಟದ ಜೀವನವಾಗಿದೆ. ಇದು ನನಗೆ ಗೊತ್ತು. ಕೈಯಲ್ಲಿ ಪೆನ್ನು ಹಿಡಿದು ಬರೆಯಬೇಕು ಎಂಬ ಹಂಬಲವಿರುತ್ತದೆ. ಆದರೆ, ಜೀವನದ ನಾನಾ ಸಮಸ್ಯೆಗಳು ಅವರಿಗೆ ಎದುರಾಗುತ್ತವೆ. ಉತ್ತಮ ಪತ್ರಕರ್ತರನ್ನು ಗುರುತಿಸಿ ಬೆನ್ನು ತಟ್ಟುವ ಕೆಲಸ ಎಲ್ಲರಿಂದ ಆಗಬೇಕು. ಸಮಾಜಮುಖೀ ಪತ್ರಕರ್ತರಿಗೆ ಸಮಾಜದಲ್ಲಿ ಬೆಲೆ ಇದ್ದೇ ಇರುತ್ತದೆ ಎಂದರು.

ಡಿವೈಎಸ್‌ಪಿ ಡಾ| ಬಿ. ದೇವರಾಜ್‌ ಮಾತನಾಡಿ, ಪತ್ರಿಕೆಗಳು ಸಮಾಜದ ಬೆಳವಣಿಗೆಯ ಕನ್ನಡಿ. ಸಮಾಜ ತಿದ್ದುವ ಶಕ್ತಿ ಪತ್ರಿಕೆಗಳಿಗಿದೆ. ಸಮಾಜದಲ್ಲಿ ಪತ್ರಿಕೆ ಮತ್ತು ಪತ್ರಕರ್ತರಿಗೆ ಮಹತ್ತರ ಗೌರವವಿದೆ. ಸಮಾಜಕ್ಕೆ ಅವರ ಕೊಡುಗೆ ಅನನ್ಯ ಎಂದರು.

Advertisement

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇಂದೂಧರ ಸಿನ್ನೂರ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಶೋಕ ಸಾಲವಾಡಗಿ, ಜೆಡಿಎಸ್‌ ರಾಜ್ಯ ಸಂಘಟನಾ ಕಾರ್ಯದರ್ಶಿ ಉಸ್ತಾದ್‌ ವಜಾಹತ್‌ ಹುಸೇನ್‌ ಮಾತನಾಡಿದರು. ಪತ್ರಕರ್ತರ ಸಂಘದ ಅಧ್ಯಕ್ಷ ಸಿದ್ಧಯ್ಯ ಪಾಟೀಲ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಮೇಲಪ್ಪ ಗುಳಗಿ, ವೆಂಕೋಬ ದೊರೆ, ಡಾ| ಬಿ.ಎಂ. ಹಳ್ಳಿಕೋಟಿ, ಅಹ್ಮದ್‌ ಪಠಾಣ, ರಾಘವೇಂದ್ರ ಭಕ್ರಿ ಸೇರಿದಂತೆ ವಿವಿಧ ಸಂಘಟನೆಗಳು, ರಾಜಕೀಯ ಮುಖಂಡರು, ಕಾರ್ಯಕರ್ತರು ಇದ್ದರು. ಶ್ರೀಹರಿ ಆದೋನಿ ಪ್ರಾರ್ಥಿಸಿದರು. ಗವಿಸಿದ್ದೇಶ ಹೊಗರಿ ಸ್ವಾಗತಿಸಿದರು. ಅಮರಯ್ಯಸ್ವಾಮಿ ಜಾಲಬೆಂಚಿ ನಿರೂಪಿಸಿದರು. ಕ್ಷೀರಲಿಂಗಯ್ಯ ಹಿರೇಮಠ ವಂದಿಸಿದರು.ಸುರಪುರದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ಸುಸಜ್ಜಿತ ಪತ್ರಿಕಾ ಭವನ ನಿರ್ಮಾಣ ಮಾಡಲಾಗುವುದು. ತಪ್ಪದೇ ಪತ್ರಕರ್ತರ ಬೇಡಿಕೆ ಈಡೇರಿಸುತ್ತೇನೆ. ಸುಮಾರು ನಲವತ್ತು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ಸೇವೆ ಮಾಡುತ್ತಿರುವ ಪತ್ರಕರ್ತ ಅಶೋಕ ಸಾಲವಾಡಗಿ ಸರಳ, ಸಜ್ಜನ ಮನುಷ್ಯ. ರಾಜ್ಯೋತ್ಸವ ಪ್ರಶಸ್ತಿ ಅವರ ಸೇವೆಗೆ ಸಂದ ಗೌರವ. ಜೀವನದಲ್ಲಿ ಅವರಿಗೆ ಇನ್ನಷ್ಟು ಪ್ರಶಸ್ತಿಗಳು ಬರಲಿ. ರಾಜುಗೌಡ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next