Advertisement

ಸಾಹಿತಿ, ಪತ್ರಕರ್ತ ಶ್ರೀನಿವಾಸಜೋಕಟ್ಟೆ ಅವರ 38ನೇ ಕೃತಿ ಬಿಡುಗಡೆ

04:14 PM Jan 22, 2021 | Team Udayavani |

ಮುಂಬಯಿ: ಸಾಹಿತಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರ 38ನೇ ಕೃತಿ “ಸಮಾಜ ಬಂಧು ಆಯುರ್ವೇದ ಭೂಷಣ ಡಾಕ್ಟರ್‌ ಐ. ವಿ. ರಾವ್‌ ಜೋಕಟ್ಟೆ’ ಎಂಬ ಕೃತಿಯು ಜ. 24ರಂದು ಅಪರಾಹ್ನ 2.30ರಿಂದ ಕನ್ನಡ ಸಂಘ ಕಾಂತಾವರದ ಕೆ. ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನದಲ್ಲಿ ಜರಗುವ ಸಮಾರಂಭದಲ್ಲಿ ಬಿಡುಗಡೆಗೊಳ್ಳಲಿದೆ.

Advertisement

ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರ ಗ್ರಂಥಮಾಲೆಯ ನೂತನ ಕೃತಿಗಳಲ್ಲಿ ಇದು 305ನೇ ಕುಸುಮ ಆಗಿದೆ. ಮುದ್ದಣ ಸಾಹಿತ್ಯೋತ್ಸವ 2021 ಮತ್ತು ನಾಡಿಗೆ ನಮಸ್ಕಾರ ಗ್ರಂಥಮಾಲೆಯ ನೂತನ ನಾಲ್ಕು ಕೃತಿಗಳ ಅನಾವರಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ವಹಿಸಲಿದ್ದಾರೆ.

2020ನೇ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿಯನ್ನು ಡಾ| ಚಿಂತಾಮಣಿ ಕೊಡ್ಲೆಕೆರೆ ಅವರ “ಮೈಮರೆತು ಕುಣಿವೆ’ ಕೃತಿಗೆ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿ ಪುರಸ್ಕೃತರ ಅಭಿನಂದನೆಯನ್ನು ಡಾ| ರಾಜಶೇಖರ ಹಳೆಮನೆ, ಉಜಿರೆ ಮಾಡಲಿರುವರು. ಕೃತಿಗಳ ಬಿಡುಗಡೆಯನ್ನು ಎಂಸಿಸಿ ಬ್ಯಾಂಕ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಚಂದ್ರಶೇಖರ್‌ ಮಾಡಲಿದ್ದಾರೆ. ನಾಡಿಗೆ ನಮಸ್ಕಾರ ಗ್ರಂಥ ಮಾಲೆಯ ಸಂಪಾದಕ ಡಾ| ಬಿ. ಜನಾರ್ದನ್‌ ಭಟ್‌ ಉಪಸ್ಥಿತರಿರುವರು.

ಡಾ| ಐ. ವಿ. ರಾವ್‌ ಜೋಕಟ್ಟೆ

ಡಾ| ಐ. ವಿ. ರಾವ್‌ ಜೋಕಟ್ಟೆ ಅವರು ವೈದ್ಯ ಗುರು ಡಾ| ಎಂ. ಆರ್‌. ಭಟ್‌ ಅವರ ಶಿಷ್ಯ. ಕೇಳು ನಂಬಿಯಾರ್‌ ಮತ್ತು ಡಾ| ಎಂ. ಗೋಪಾಲಕೃಷ್ಣರಾಯರ ಜತೆಗೆ ಹಲವು ವರ್ಷ ದುಡಿದು ಆಯುರ್ವೇದದ ಸೂಕ್ಷ್ಮಗಳನ್ನು ಅರಿತು ಸಂಶೋಧನೆಗಳನ್ನು ಮಾಡುತ್ತಿದ್ದರು. ಕಲಿಯುಗ ಪತ್ರಿಕೆಯಲ್ಲಿ ಲೇಖನಗಳನ್ನು ಬರೆಯುತ್ತಿದ್ದರು. ಜಪ್ಪುನಲ್ಲಿ ಪ್ರೇಮ ಆಯುರ್ವೇದಿಕ್‌ ಫಾರ್ಮಸಿ ಮೂಲಕ ಆರೋಗ್ಯದ ಕಾಳಜಿಯನ್ನು ಜನರಲ್ಲಿ ಹುಟ್ಟಿಸುತ್ತಿದ್ದರು. ಐವತ್ತರ ದಶಕದಲ್ಲಿ ಕರ್ನಾಟಕ ಮತ್ತು ಕೇರಳ ಪ್ರಾಂತೀಯ ಗವರ್ನ್ ಮೆಂಟ್‌ ಟ್ರೈನ್‌ ಗ್ರಾಮ ವೈದ್ಯರ ಸಂಘ ಮಂಗಳೂರು ಇದರ ಕಾರ್ಯ ದರ್ಶಿಯಾಗಿದ್ದರು ಇವರ ಆನೆಕಾಲು ರೋಗ ಚಿಕಿತ್ಸೆಗೆ ಸಂಶೋಧಿಸಿದ ಔಷಧಕ್ಕೆ ಅಖೀಲ ಕರ್ನಾಟಕಆಯುರ್ವೇದ ಸಮ್ಮೇಳ  ನದಲ್ಲಿ ಚಿನ್ನದ ಪದಕ ದೊರೆತಿದೆ.

Advertisement

ಇದನ್ನೂ ಓದಿ:ನಮ್ಮದು ನ್ಯಾಯೋಚಿತ ಹೋರಾಟ: ಕನಕ ಶ್ರೀ

ಐವತ್ತರ ದಶಕದ ಕೊನೆಗೆ ಜೋಕಟ್ಟೆ ಎಂಬ ಕುಗ್ರಾಮಕ್ಕೆ ಆಗಮಿಸಿ ನಾಲ್ಕು ದಶಕಗಳ ಕಾಲ ಇಲ್ಲಿ ತಮ್ಮದೇ ಆದ ದುರ್ಗಾ ಕ್ಲಿನಿಕ್‌ ಮೂಲಕ ಆಯುರ್ವೇದ ಸೇವೆ, ಕೆಂಜಾರು ಗ್ರಾ.ಪಂ.ನ ವೈಸ್‌ ಚೇರ್ಮನ್‌ ಆಗಿ, ಯುವಕ ಮಂಡಲ ಜೋಕಟ್ಟೆಯ ಸ್ಥಾಪಕ ಸದಸ್ಯರಾಗಿಆಯುರ್ವೇದ  ಸೇವೆ ಮತ್ತು ಸಮಾಜಸೇವೆಯನ್ನು ಕೈಗೊಂಡಿದ್ದು, 1999ರಲ್ಲಿ ನಿಧನ ಹೊಂದಿದರು. ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಶ್ರೀರಾಮ ನಿರ್ಯಾಣ ತಾಳಮದ್ದಳೆಯನ್ನು ಧೀ ಶಕ್ತಿ ಮಹಿಳಾ ಯಕ್ಷ ಬಳಗ ಪುತ್ತೂರು ಪ್ರಸ್ತುತಪಡಿಸಲಿದ್ದಾರೆ ಎಂದು ಸಾಹಿತಿ ಡಾ| ನಾ. ಮೊಗಸಾಲೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next