ನೆಲಮಂಗಲ: ರಾಜಕಾರಣಿಗಳು ಚುನಾವಣೆ ಹೆಸರಿನಲ್ಲಿ ರಾಜಕಾರಣವನ್ನು ದ್ವೇಷಕ್ಕೆ ಪರಿವರ್ತನೆ ಮಾಡಬಾರದು. ಚುನಾವಣೆ ಫಲಿತಾಂಶದ ಮರುಕ್ಷಣವೇ ಅಭಿವೃದ್ಧಿಗೆ ಪರಸ್ಪರ ಸಹಕರಿಸಬೇಕು ಎಂದು ಶಾಸಕ ಡಾ.ಕೆ.ಶ್ರೀನಿವಾಸ್‌ಮೂರ್ತಿ ಎಂದರು. ನಗರದ ಪವಾಡ ಶ್ರೀಬಸವಣ್ಣದೇವರಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ಪತ್ರಿಕಾ ವಿತರಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪತ್ರಕರ್ತರು ಕ್ಷೇತ್ರದಲ್ಲಿನ ಸಾಕಷ್ಟು ಸಮಸ್ಯೆ ಬೆಳಕಿಗೆ ತರುವ ಮೂಲಕ ಅಭಿವೃದ್ಧಿಗೆ ಸಹಕರಿಸುತ್ತಿರುವುದು ಸ್ವಾಗತಾರ್ಹ ಎಂದರು.
ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಮಾತನಾಡಿ, ಪತ್ರಕರ್ತರು ಜಾತ್ಯತೀತ, ಪಕ್ಷಾತೀತವಾಗಿ ಸೇವೆ ಸಲ್ಲಿಸಿದಾಗ ಮಾತ್ರ ವೃತ್ತಿಯಲ್ಲಿ ತೃಪ್ತಿಯನ್ನು ಹೊಂದಲು ಸಾಧ್ಯ. ಗುಂಪುಗಾರಿಕೆ ಮಾಡುವುದರಿಂದ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು. ಸಮಾಜಕ್ಕೆ ಪತ್ರಕರ್ತರು ಸಲ್ಲಿಸುವ ಸೇವೆ ಅವಿಸ್ಮರಣೀಯ.
ಇದನ್ನೂ ಓದಿ:- ಜಾರು ಬಂಡೆಯ ಮೇಲೆ ಮಕ್ಕಳ ಓದು!
ಪರ್ತಕತ್ರರು ಯಾವುದೇ ಜಾತಿ, ಸಮುದಾಯ ಓಲೈಸುವುದು ಅಥವಾ ಅವರೊಂದಿಗೆ ಗುರಿತಿಸಿಕೊಳ್ಳ ಬಾರದು. ಪಕ್ಷಪಾತಿಯಾದವರುಪ್ರಾಮಾಣಿಕ ವಾಗಿ ಪತ್ರಕರ್ತರಾಗಲು ಸಾಧ್ಯವಿಲ್ಲ, ನಿಷ್ಪಕ್ಷಪಾತದಿಂದ ಕಾರ್ಯನಿರ್ವಹಿಸಿದರೆ ಮಾತ್ರ ನಿಜವಾದ ಪರ್ತಕತ್ರರಾಗಲು ಸಾಧ್ಯ ಎಂದರು. ಮಾಧ್ಯಮಗಳು ಕಳೆದ 50ವರ್ಷದ ಹಿಂದೆ ಹೇಗಿತ್ತು.ಪ್ರಸ್ತುತ ಆಧುನಿಕತೆ ತಾಂತ್ರಿಕತೆ ಯಿಂದ ಯಾವ ಹಂತಕ್ಕೆ ತಲುಪಿದೆ ಎಂಬು ದನ್ನು ಪ್ರತಿಯೊಬ್ಬರೂ ಅರಿತುಕೊಳ್ಳ ಬೇಕು. ಬದಲಾಗುತ್ತಿರುವ ಬೆಳವಣಿಗೆಗಳಿಂದ ಸತ್ಯಾಸತ್ಯತೆ ಅರಿಯದಂತಾಗಿರುವುದು ದುರಾದೃಷ್ಟಕರ ಎಂದರು.
ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಮಾಜಿ ಶಾಸಕ ಎಂ.ವಿ.ನಾಗರಾಜ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ.ಹೊಂಬಯ್ಯ, ತಹಶೀಲ್ದಾರ್ ಕೆ.ಮಂಜುನಾಥ್, ಡಿವೈಎಸ್‌ಪಿ ಜಗದೀಶ್, ಟಿಎಚ್‌ಒ ಡಾ.ಹರೀಶ್, ಸಂಘದ ಜಿಲ್ಲಾಧ್ಯಕ್ಷ ಮಂಡಿಬೆಲೆ ರಾಜಣ್ಣ, ತಾಲೂಕು ಅಧ್ಯಕ್ಷ ಪ್ರಮೋದ್ ಕುಮಾರ್, ಗೌರವಾಧ್ಯಕ್ಷ ಜಿ.ಕೆ. ಸುಗ್ಗರಾಜು, ಶಿವಕುಮಾರ್, ಮುಖಂಡರು ಹಾಗೂ ಸಂಘದ ಪದಾಧಿಕಾರಿಗಳು ಇದ್ದರು.