ವಿಶಾಖಪಟ್ಟಣ: ಸಿಕಂದರಾಬಾದ್-ವಿಶಾಖಪಟ್ಟಣಮ್ ನಡುವಿನ ʼವಂದೇ ಭಾರತ್ʼ ರೈಲು ಓಡಾಟ ಪ್ರಾರಂಭವಾಗಿ ಕೇವಲ ಒಂದು ತಿಂಗಳಲ್ಲೇ ಪ್ರಯಾಣಿಕನೊಬ್ಬ ರೈಲಿನಲ್ಲಿ ನೀಡುವ ಆಹಾರದ ಕಳಪೆ ಗುಣಮಟ್ಟದ ಬಗ್ಗೆ ಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ.
ಫೆ.3ರಂದು ಪತ್ರಕರ್ತರೊಬ್ಬರು ಆಹಾರದ ಕಳಪೆ ಗುಣಮಟ್ಟದ ಬಗೆಗಿನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. 49 ಸೆಕೆಂಡಿನ ವಿಡಿಯೋದಲ್ಲಿ ಅವರು ಕರಿದ ತಿಂಡಿಯೊಂದನ್ನು ಹಿಂಡಿದಾಗ ಭಾರೀ ಎಣ್ಣೆ ಸುರಿದಿದ್ದನ್ನು ತೋರಿಸಿದ್ದಾರೆ.
ಅವರ ಈ ಪೋಸ್ಟ್‌ಗೆ ತಕ್ಷಣವೇ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ʼಸರ್, ಸಂಬಂಧಿತ ಅಧಿಕಾರಿಯಲ್ಲಿ ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲು ತಿಳಿಸಲಾಗಿದೆʼ ಎಂದಿದೆ.