ಮಾಡಲೂ ತೋಚದೆ ಕಂಗಾಲಾಗಿ ನಿಂತಿದ್ದೆ. ಆಗಲೇ, ಮುಸುಕಿದ್ದ ಮಂಜಿನ ಮಧ್ಯೆ ಯಾವುದೋ ಸ್ಕೂಟಿ ನನ್ನತ್ತ ಬರುತ್ತಿರುವುದು ಕಂಡಿತು.
Advertisement
ನೋಡಿದ್ರೆ ಅದು ನೀನು! ನಿನ್ನ ಮೊಗವನ್ನು ಕಂಡಾಕ್ಷಣ ಫ್ರೆಶ್ ನೆಸ್ ಅಂತಾರಲ್ಲ; ಅಂಥ ಭಾವವೊಂದು ಮನವನ್ನು ತುಂಬಿಕೊಂಡಿತು. ವಾರದ ಹಿಂದೆ ಹುಸಿ ಕೋಪದಿಂದ ಮುನಿಸಿಕೊಂಡು ಹೋಗಿದ್ದವಳು, ಈಗ ದಿಢೀರನೆ ಪ್ರತ್ಯಕ್ಷಳಾಗಿದ್ದುಕಂಡು ನನ್ನ ಮನಸ್ಸು ಒಳಗೊಳಗೆ ಕುಣಿದು ಕುಪ್ಪಳಿಸಿತು.
ಮಂಜಿನ ಗಾಳಿಯನ್ನು ಸೀಳಿ ಹೋಗುವಾಗ ಚಳಿ ಇಮ್ಮಡಿಯಾಗುತಿದ್ದರೂ ನೀ ಕೊಟ್ಟ ಸ್ವೆಟರ್ ಬೆಚ್ಚನೆಯ ಅನುಭವ ನೀಡಿತ್ತು. ಹಾಗೆಯೇ ತಂಗಾಳಿಯಲ್ಲಿ ಮಿಂದು ನನ್ನ ಮುಖಕ್ಕೆ ತಾಕುತಿದ್ದ ನಿನ್ನ ಮುಂಗುರುಳು ನನ್ನನ್ನು ಪರವಶಗೊಳಿಸಿ ನಾನೆಲ್ಲೋ ತೇಲಿ ಹೋದೆ. ಎಕ್ಸಾಮ್ ಸೆಂಟರ್ ಕಣ್ಣಿಗೆ ಬೀಳುತ್ತಲೇ, ಈ ಸುಂದರ ಪಯಣ ಬೇಗನೆ ಮುಗಿಯುತಲ್ಲ ಎನ್ನುವ ಬೇಸರ ನನ್ನದಾಗಿತ್ತು. ನೀನೋ- ಸ್ಕೂಟಿಯಿಂದ ನಾನು ಕೆಳಗಡೆ ಇಳಿದೊಡನೆಯೇ ಕೈ ಕುಲುಕಿ “ಆಲ್ ದಿ ಬೆಸ್ಟ್” ಎಂದು ವಿಶ್ ಮಾಡಿ ಬೇರೇನೂ
ಮಾತಾಡದೆ ಭರ್ರನೆ ಹೊರಟುಹೋದೆಯೆಲ್ಲ, ನನ್ನ ಹೃದಯದ ಕತೆ ಹೇಗಾಗಿರಬೇಡ ಹೇಳು? ನಿಂಗೊತ್ತಾ, ಎಕ್ಸಾಮ್ ಹಾಲ್ ನಲ್ಲಿ ನಿನ್ನದೇ ಗುಂಗಲ್ಲಿದ್ದರೂ ಊಹೆಗೆ ಮೀರಿ ಪರೀಕ್ಷೆಯನ್ನು ಮಸ್ತ್ ಬರೆದಿದ್ದೀನಿ. – ಶಿವರಾಜ್ ಬಿ. ಎಲ್.