Advertisement

ಜೊಕೊ-ದೀಪಿಕಾ ಪಡುಕೋಣೆ ಡೇಟಿಂಗ್‌!

03:00 AM Jul 11, 2017 | Harsha Rao |

ಹೊಸದಿಲ್ಲಿ: ಕ್ರೀಡಾ ತಾರೆಗಳ ಹಾಗೂ ಸಿನಿಮಾ ತಾರೆಯರ ನಡುವೆ ಪ್ರೀತಿ ಪ್ರೇಮ ಪ್ರಣಯ ಹೊಸತೇನಲ್ಲ. ಆದರೆ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಮಟ್ಟಿಗೆ ಬಂದರೆ ಇದು ಸ್ವಲ್ಪ ಜಾಸ್ತಿಯೇ ಎನ್ನಬಹುದು! ಈ ನಟಿಯೊಂದಿಗೆ ಧೋನಿ, ಯುವರಾಜ್‌ ಸಿಂಗ್‌ ಹೆಸರು ಹಿಂದೆ ದೊಡ್ಡ ಮಟ್ಟದಲ್ಲಿ ಕಾಣಿಸಿಕೊಂಡಿತ್ತು. 

Advertisement

ಇದೀಗ ದೀಪಿಕಾ ಜತೆ ಬಲವಾಗಿ ಕೇಳಿ ಬಂದಿರುವ ಹೆಸರು ಟೆನಿಸ್‌ನ ಮಾಜಿ ವಿಶ್ವ ನಂ.1 ತಾರೆ ನೊವಾಕ್‌ ಜೊಕೋವಿಕ್‌ ಅವರದ್ದು. 2014ರಲ್ಲೇ ಈ ಬಗ್ಗೆ ಗುಸು ಗುಸು ಇದ್ದರೂ ಇದೀಗ ಜೊಕೊ ಮಾಜಿ ಗೆಳತಿ ನತಾಶಾ ಬೆಕ್ಲಾವಕ್‌ ನೇರಾನೇರ ಆರೋಪ ಮಾಡುವುದರೊಂದಿಗೆ ವಿಶ್ವಮಟ್ಟದಲ್ಲಿ ಸದ್ದು ಮಾಡಿದೆ.

ಮಾಜಿ ಗೆಳತಿ ಹೇಳಿದ್ದೇನು?
ಸರ್ಬಿಯಾದ ಜೊಕೋವಿಕ್‌ ಮಾಜಿ ಗೆಳತಿ, ಪಾಪ್‌ ಗಾಯಕಿ ನತಾಶಾ ಬೆಕ್ಲಾವಕ್‌ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ತನ್ನ ಮತ್ತು ಜೊಕೊ ನಡುವಿನ ಸಂಬಂಧ ಮುಗಿದ ಬಿದ್ದ ಅನಂತರ, ಜೊಕೊ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಜತೆಗೆ ಡೇಟಿಂಗ್‌ ನಡೆಸುತ್ತಿದ್ದರು ಎಂದು ನತಾಶಾ ಆರೋಪಿಸಿದ್ದಾರೆ.

2014ರಲ್ಲಿ ಪರಿಚಯ
ಜೊಕೋವಿಕ್‌-ದೀಪಿಕಾ ಮೊದಲು ಪರಿಚಿತರಾ ದದ್ದು 2014ರಲ್ಲಿ. ಮಹೇಶ್‌ ಭೂಪತಿ ಮಾಲಕತ್ವದ ಅಂತಾರಾಷ್ಟ್ರೀಯ ಪ್ರೀಮಿಯರ್‌ ಟೆನಿಸ್‌ ಲೀಗ್‌ನಲ್ಲಿ ಆಡಲು ಜೊಕೊ ಭಾರತಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಜೊಕೊ ಮತ್ತು ದೀಪಿಕಾ ಗೆಳೆತನ ಸಂಪಾದಿಸಿದ್ದರು.

ಇವರಿಬ್ಬರು ಗಾಸಿಪ್‌ಗೆ ಆಹಾರವಾಗಿದ್ದು 2016 ರಲ್ಲಿ. ದೀಪಿಕಾ ಹಾಲಿವುಡ್‌ ಚಿತ್ರ “ಎಕ್ಸ್‌ಎಕ್ಸ್‌ಎಕ್ಸ್‌’ ಚಿತ್ರದ ಶೂಟಿಂಗ್‌ಗಾಗಿ ಅಮೆರಿಕದಲ್ಲಿದ್ದರು. ಇದೇ ಸಂದರ್ಭದಲ್ಲಿ ಜೊಕೊ ಮತ್ತು ದೀಪಿಕಾ ರೆಸ್ಟೋರೆಂಟ್‌ವೊಂದರಲ್ಲಿ ಡಿನ್ನರ್‌ ಪಾರ್ಟಿ ಮಾಡಿರುವುದು, ಇಬ್ಬರು ಜತೆಯಾಗಿ ಓಡಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು. ಹೀಗಾಗಿ ಈ ಇಬ್ಬರ ನಡುವೆ ಡೇಟಿಂಗ್‌ ಇದೆ ಎನ್ನುವ ಸುದ್ದಿಗಳು ಸದ್ದು ಮಾಡಿದ್ದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next