ಬೆಂಗಳೂರು: ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ಸುಮಾರು 15ಕ್ಕೂ ಹೆಚ್ಚು ಜನರನ್ನು ಬಂಧಿಸಿ, ವಿಚಾರಣೆ ಮಾಡುವ ಕೆಲಸ ನಡೆಯುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಪ್ರವೀಣ್ ಮನೆಯ ಬಳಿಯೇ ಕೇರಳ ಗಡಿಯಿದೆ. ಅಲ್ಲಿಂದ ಇಲ್ಲಿಗೆ ಬಂದು ದಷ್ಕೃತ್ಯ ಮಾಡಿ ಹೋಗುವುದು ಬಹಳ ವರ್ಷಗಳಿಂದ ನಡೆಯುತ್ತಿದೆ. ಕೇರಳ ಹಾಗೂ ಕರ್ನಾಟಕ ಪೊಲೀಸರು ಜಂಟಿ ಕಾರ್ಯಚಾರಣೆ ಮಾಡಿದರೆ ಮಾತ್ರ, ಕೊಲೆಗಡುಕರಿಗೆ ಶಿಕ್ಷೆ ಆಗುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕ ಪೊಲೀಸರು ಕೆಲಸ ಮಾಡುತ್ತಿದ್ದಾರೆ ಎಂದರು.
ಜನೋತ್ಸವ ಕಾರ್ಯಕ್ರಮವನ್ನು ರದ್ದು ಮಾಡಿ ಸಿಎಂ ಬೊಮ್ಮಾಯಿ ಅವರನ್ನು ನಾನು ಅಭಿನಂದಿಸುತ್ತೇನೆ. ಸೂತಕದ ಮನೆಯಲ್ಲಿ ನಾವು ಏನು ಮಾಡಬಾರದಿತ್ತು ಅದೇ ನಿರ್ಣಯ ವನ್ನು ಸಿಎಂ ಮಾಡಿದ್ದಾರೆ ಎಂದರು.
ಇದನ್ನೂ ಓದಿ:ಬಿಜೆಪಿಗೆ ಬಿಸಿ ತುಪ್ಪವಾದ ಕರಾವಳಿ ಹಿಂದುತ್ವ: ತನ್ನದೇ ಅಸ್ತ್ರ ತಿರುಮಂತ್ರ ಆಗಿದ್ದು ಹೇಗೆ?
ಮಂಗಳೂರು ವಾತಾವರಣ ಬಹಳ ಶಾಂತಿಯುತವಾಗಿದೆ. ಅಲ್ಲಿನ ಜನರು ತುಂಬಾ ಬುದ್ದಿವಂತರು. ಆಕ್ರೋಶ ಕೂಡ ಹೊರಗೆ ಹಾಕುತ್ತಾರೆ. ವ್ಯವಸ್ಥೆ ಹಾಳು ಮಾಡದ ರೀತಿ ಸಹಕರಿಸುತ್ತಾರೆ ಇದು ಅವರ ಸಂಸ್ಕೃತಿ. ಇವತ್ತು ಯಾವುದೇ ಗಲಾಟೆಗಳು ನಡೆದಿಲ್ಲ. ಆದರೂ ಕೂಡ ಪೊಲೀಸರು ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಿದ್ದಾರೆ. ನಾನು ಕೂಡ ಮಂಗಳೂರಿಗೆ ಹೋಗುವ ಕಾರ್ಯಕ್ರಮ ಹಾಕಿದ್ದೇನೆ. ಸಿಎಂ ಕೂಡ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತಾರೆ ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿದರು.