Advertisement
ಅವಿಭಕ್ತ ಕುಟುಂಬಗಳಲ್ಲಿ ಜನಸಂಖ್ಯೆ ಕೂಡ ಬೃಹತ್ ಗಾತ್ರದಲ್ಲಿ ಇರುತ್ತದೆ. ಇದು ಪಿತೃ ಪ್ರಧಾನ ಕುಟುಂಬವಾಗಿರಬಹುದು ಅಥವಾ ಮಾತೃ ಪ್ರಧಾನ ಕುಟುಂಬವಾಗಿರಬಹುದು. ಒಂದು ಕುಟುಂಬದಲ್ಲಿ ಕುಟುಂಬದ ಹಿರಿಯ ಪುರುಷ ಸದಸ್ಯ ಮುಖ್ಯಸ್ಥನಾಗಿದ್ದು, ಈ ಕುಟುಂಬದ ಸಂಪೂರ್ಣ ಜವಾಬ್ದಾರಿಗಳಾದ ಹಣಕಾಸು, ಮದುವೆ, ಹಬ್ಬಗಳು,ಶಿಕ್ಷಣ ಮುಂತಾದ ಎಲ್ಲ ಸೌಲಭ್ಯಗಳಿಗೆ ಬಗೆಗಿನ ನಿರ್ಧಾರವನ್ನು ಅವನು ತೆಗೆದುಕೊಳ್ಳುತ್ತಾನೆ.ಅದೇ ಮಾತೃ ಪ್ರಧಾನ ಈ ಎಲ್ಲ ಜವಾಬ್ದಾರಿಯನ್ನು ಹಿರಿಯ ಮಹಿಳೆ ತೆಗೆದುಕೊಳ್ಳುತ್ತಾಳೆ.
Related Articles
Advertisement
ಅವಿಭಕ್ತ ಕುಟುಂಬದಲ್ಲಿ ಮನೆ ತುಂಬಾ ಮಕ್ಕಳು ಇರುವುದರಿಂದ ಎಲ್ಲರೊಂದಿಗೆ ಹೊಂದಾಣಿಕೆ, ಮುಕ್ತವಾಗಿ ಬೆರೆಯುವುದು, ಉತ್ತಮ ಅಭ್ಯಾಸಗಳು,ಆಟ -ಪಾಠ, ಉತ್ತಮ ನಡವಳಿಕೆಯನ್ನು ಕಲಿಯಲು ಸಹಾಯಕವಾಗುತ್ತದೆ. ಆದರೆ ವಿಭಕ್ತ ಕುಟುಂಬದಲ್ಲಿ ಮಗು ಒಂಟಿಯಾಗಿರುವುದರಿಂದ ಮಾನಸಿಕ ಖನ್ನತೆಯಿಂದ ಬಳಲುವ ಸಾಧ್ಯತೆ ಅಧಿಕವಾಗಿರುತ್ತದೆ. ಕೆಲವೊಂದು ಬಾರಿ ಅವಿಭಕ್ತ ಕುಟುಂಬದಲ್ಲಿ ಮಕ್ಕಳೊಂದಿಗೆ ಜಗಳ ಕೂಡ ವೈರತ್ವಕ್ಕೆ ತಿರುಗುವ ಸಾಧ್ಯತೆ ಕೂಡ ಇರುತ್ತದೆ.
ಅವಿಭಕ್ತ ಕುಟುಂಬದಲ್ಲಿ ಕೆಲವೊಂದು ಸೋದರತ್ವದಲ್ಲಿ ಮದುವೆ ಮಾಡಿಸುವ ಅಭ್ಯಾಸ ಇರುತ್ತದೆ. ಇದು ಹುಟ್ಟುವ ಮಕ್ಕಳಿಗೆ ಬುದ್ಧಿಮಾಂದ್ಯತೆಯನ್ನು ಉಂಟುಮಾಡುವ ಸಾಧ್ಯತೆ ಕೂಡ ಇರುತ್ತದೆ.ಇಲ್ಲಿ ಮದುವೆ ಐದರಿಂದ ಆರು ಮದುವೆಗಳು ಒಮ್ಮೆಲೆ ಸಂಭವಿಸುತ್ತದೆ. ವಧು-ವರ ಅಭಿಪ್ರಾಯಗಳಿಗೆ ಕೆಲವೊಂದು ಬಾರಿ ಗಣನೆಗೆ ತೆಗೆದುಕೊಳ್ಳದೇ ಇರುವುದು ಕೂಡ ನೋಡಬಹುದು. ಇದರಿಂದ ಬೇರೆ ಬೇರೆ ಸಮಸ್ಯೆಗಳು ಸೃಷ್ಟಿಯಾಗುತ್ತದೆ.
ಅವಿಭಕ್ತ ಕುಟುಂಬದಲ್ಲಿ ಹಣಕಾಸು ವಿಚಾರದಲ್ಲಿ ಸಂಬಂಧಿಕರು ಸಹಾಯ ಮಾಡುತ್ತಾರೆ. ಆದರೆ ವಿಭಕ್ತ ಕುಟುಂಬದಲ್ಲಿ ಹೀಗೆ ಆಗುವುದಿಲ್ಲ, ಹಣಕಾಸು ಸಮಸ್ಯೆಗಳು ಎದುರಾದರೆ ಇಡೀ ಕುಟುಂಬವೇ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ. ಆದರೆ ಸಕಾರಾತ್ಮಕವಾಗಿ ನೋಡುವುದಾದರೆ ಮನುಷ್ಯ ಸ್ವಾವಲಂಬಿಯಾಗಿ ಬದುಕಲು ಸಾಧ್ಯವಾಗುತ್ತದೆ. ವಿಭಕ್ತ ಕುಟುಂಬ ವಾಗಲಿ,ಅವಿಭಕ್ತ ಕುಟುಂಬವಾಗಲಿ, ಒಂದೊಂದು ವಿಚಾರದಲ್ಲಿ ಅದು ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ ಅದನ್ನು ಪರಿಶೀಲಿಸಿ ನೋಡಲು ಕಷ್ಟ ಆಗುತ್ತದೆ.
– ದೇವಿಶ್ರೀ ಶಂಕರಪುರ
ಆಳ್ವಾಸ್ ಕಾಲೇಜು, ಮೂಡುಬಿದಿರೆ