ಜಾಯಿಂಟ್ ಅಕೌಂಟ್ಸ್, ಸಾಮಾನ್ಯ ಬ್ಯಾಂಕ್ ಅಕೌಂಟ್ ರೀತಿಯಲ್ಲಿಯೇ ಕಾರ್ಯನಿರ್ವಹಿಸುತ್ತದೆ. ಒಂದು ಪ್ರಮುಖ ವ್ಯತ್ಯಾಸವೆಂದರೆ, ಜಾಯಿಂಟ್ ಅಕೌಂಟ್ ಇಬ್ಬರು ಅಥವಾ ಅದಕ್ಕೂ ಹೆಚ್ಚಿನ ಮಂದಿಯ ಹೆಸರಿನಲ್ಲಿರುತ್ತದೆ. ಜಂಟಿ ಖಾತೆ, ಹಣವನ್ನು ಒಂದೆಡೆ ಸೇರಿಸಲು ಮತ್ತು ಪರಿಣಾಮಕಾರಿಯಾಗಿ ಉಳಿತಾಯ ಮಾಡಲು ನೆರವಾಗುತ್ತದೆ. ಸಮಾನ ಆಸಕ್ತಿಯ ಮಂದಿ, ಕುಟುಂಬಸ್ಥರು, ಜಾಯಿಂಟ್ ಅಕೌಂಟ್ ಅನ್ನು ಹೊಂದಬಹುದು. ಜಂಟಿ ಖಾತೆಯಲ್ಲಿ ನಡೆಯುವ ಹಣಕಾಸು ವ್ಯವಹಾರಗಳು, ಇತರೆ ಖಾತೆದಾರರಿಗೂ ತಿಳಿಯುವುದರಿಂದ, ಯಾವೆಲ್ಲಾ ರೀತಿಯಲ್ಲಿ ಹಣ ಖರ್ಚಾಗುತ್ತಿದೆ ಎನ್ನುವುದನ್ನು ಟ್ರ್ಯಾಕ್ ಮಾಡುವುದು ಸಾಧ್ಯವಾಗುತ್ತದೆ. ಜಂಟಿ ಖಾತೆ ಪ್ರಯೋಜನಕಾರಿಯಾಗಿದ್ದರೂ, ಕೆಲ ಸಂದರ್ಭದಲ್ಲಿ ಕೆಲ ಸದಸ್ಯರ ಹೆಸರನ್ನು ಕೈಬಿಡಬೇಕಾದ ಅನಿವಾರ್ಯತೆ ಎದುರಾಗುವುದುಂಟು. ಪ್ರೈಮರಿ ಖಾತೆದಾರನ ಹೆಸರನ್ನು ತೆಗೆಯಲು ಆಗುವುದಿಲ್ಲ. ಜಂಟಿ ಖಾತೆಯ ಸದಸ್ಯನ ಹೆಸರನ್ನು ಕೈಬಿಡುವ ಪ್ರಕ್ರಿಯೆ ಹೀಗಿದೆ…
ಅರ್ಜಿ ಸಲ್ಲಿಕೆ: ಮೊದಲ ಹಂತದಲ್ಲಿ ಬ್ಯಾಂಕ್ ಅಥವಾ ಬ್ಯಾಂಕ್ ಜಾಲತಾಣದಿಂದ ಹೆಸರು ಕೈಬಿಡುವ ಅರ್ಜಿಯನ್ನು ಪಡೆದುಕೊಳ್ಳಬೇಕು, ಇಲ್ಲವೇ ಡೌನ್ ಲೋಡ್ ಮಾಡಿಕೊಳ್ಳಬೇಕು. ಕೈಬಿಡಲಾಗುತ್ತಿರುವ ಹೆಸರಿನ ವ್ಯಕ್ತಿ ಸೇರಿದಂತೆ, ಜಂಟಿ ಖಾತೆಯಲ್ಲಿರುವ ಪ್ರತಿಯೊಬ್ಬ ಸದಸ್ಯನೂ ಅರ್ಜಿಯಲ್ಲಿ ಸಹಿ ಹಾಕಬೇಕು. ಮಾಹಿತಿ: ಹೆಸರನ್ನು ಕೈಬಿಡಲಾಗುತ್ತಿರುವ ವ್ಯಕ್ತಿಯ ಕುರಿತಾದ ಮಾಹಿತಿಯನ್ನು ನಮೂದಿಸಬೇಕು. ಒಂದು ವೇಳೆ ಆ ವ್ಯಕ್ತಿ ಮೈನರ್ ಆಗಿದ್ದರೆ, ಪೋಷಕರ (ಗಾರ್ಡಿಯನ್) ಹೆಸರನ್ನು ನಮೂದಿಸಬೇಕು.
ಕಾರ್ಯ ನಿರ್ವಹಣಾ ಶೈಲಿ ಬದಲಾವಣೆ: ಈ ಸಂದರ್ಭದಲ್ಲಿ ಜಂಟಿ ಖಾತೆಯ ಸದಸ್ಯರು ಖಾತೆಯ ಕಾರ್ಯ ನಿರ್ವಹಣಾ ಶೈಲಿಯನ್ನು ಬದಲಾಯಿಸಬಹುದು. ಸದಸ್ಯರು ಇಚ್ಛಿಸಿದಲ್ಲಿ ಜಂಟಿ ಖಾತೆಯನ್ನು ಪ್ರತ್ಯೇಕ ವೈಯಕ್ತಿಕ ಖಾತೆಗಳನ್ನಾಗಿ ಬದಲಾ ಯಿಸ ಬಹುದಾಗಿದೆ. ಅಥವಾ ಎಂದಿನಂತೆ ಜಂಟಿ ಖಾತೆಯಾ ಗಿಯೇ ಉಳಿಸಿ ಕೊಂಡು ಮುಂದು ವರಿಸಿಕೊಂಡು ಹೋಗಲೂಬಹುದು.
ಡೆಬಿಟ್ ಕಾರ್ಡ್: ಹೆಸರು ಕೈಬಿಡಲಾದ ವ್ಯಕ್ತಿ, ಬ್ಯಾಂಕ್ ನೀಡಲ್ಪಟ್ಟ ಎಟಿಎಂ ಕಾರ್ಡನ್ನು ಹಿಂದಿರುಗಿಸಬೇಕಾಗುತ್ತದೆ. ಇಲ್ಲವೇ ಜಂಟಿ ಖಾತೆಯ ಇತರೆ ಸದಸ್ಯರು ಒಟ್ಟಾಗಿ, ಎಟಿಎಂ ಕಾರ್ಡನ್ನು ನಾಶಪಡಿಸಿರುವುದಾಗಿ ಮುಚ್ಚಳಿಕೆ ಬರೆದುಕೊಡಬೇಕಾಗುತ್ತದೆ. ಹೊಸ ಚೆಕ್‌ಬುಕ್: ಹಳೆಯ ಚೆಕ್ ಬುಕ್ಕನ್ನು ಬ್ಯಾಂಕಿಗೆ ಹಿಂದಿರುಗಿಸಿ, ಹೊಸ ಚೆಕ್ ಬುಕ್ಕಿಗೆ ಜಂಟಿ ಖಾತೆಯ ಸದಸ್ಯರು ಅರ್ಜಿ ಸಲ್ಲಿಸಬಹುದು. ಅರ್ಜಿಯಲ್ಲಿ ಅಪ್‌ಡೇಟ್ ಆದ ಸದಸ್ಯರ ಹೆಸರುಗಳನ್ನಷ್ಟೇ ನಮೂದಿಸಬೇಕು. ಇದರಿಂದ ಅರ್ಜಿಯಲ್ಲಿ ನಮೂದಿಸಲಾದ ಹೆಸರು ಗಳನ್ನಷ್ಟೇ ಒಳಗೊಂಡ ಹೊಸ ಚೆಕ್‌ಬುಕ್ ಅನ್ನು ನೀಡಲಾಗುತ್ತದೆ.