ಮುಂಬೈ: “ಮಹಾರಾಷ್ಟ್ರ ಜನರ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿ-ಶಿಂಧೆ ನೇತೃತ್ವದ ಶಿವಸೇನೆ ಮೈತ್ರಿಕೂಟದ ಸರ್ಕಾರದೊಂದಿಗೆ ಕೈಜೋಡಿಸಿದ್ದೇವೆ’ ಎಂದು ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಹೇಳಿದರು.
ಬೀಡ್‌ನಲ್ಲಿ ನಡೆದ ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಮತನಾಡಿದ ಅವರು, “ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ. ಹಾಗೆಯೇ ಯಾರೂ ಶಾಶ್ವತವಾಗಿ ಮಿತ್ರರೂ ಅಲ್ಲ’ ಎಂದರು.
“ಪ್ರತಿಪಕ್ಷಗಳು ಸುಳ್ಳುಸುದ್ದಿಗಳನ್ನು ಹರಡಿಸುತ್ತವೆ ಮತ್ತು ಜನರಿಗೆ ತಪ್ಪಾದ ಮಾಹಿತಿಯನ್ನು ನೀಡುತ್ತವೆ. ಈರುಳ್ಳಿ ವಿಷಯದಲ್ಲೂ ಹೀಗೆಯೇ ಆಯಿತು.
ರಾಜ್ಯ ಕೃಷಿ ಸಚಿವ ಧನಂಜಯ ಮುಂಡೆ ಅವರು ಈ ಸಂಬಂಧ ಗರಿಷ್ಠ ಸಹಾಯ ಮಾಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಳಿ ಮನವಿ ಮಾಡಿದರು.
ಕೂಡಲೇ ಕೆಜಿಗೆ 24 ರೂ.ಗಳಂತೆ ಎರಡು ಲಕ್ಷ ಮೆಟ್ರಿಕ್ ಟನ್ ಈರುಳ್ಳಿಯನ್ನು ರಾಜ್ಯಕ್ಕೆ ಕೇಂದ್ರ ಸರ್ಕಾರ ಕಳುಹಿಸಿತು’ ಎಂದು ಅಜಿತ್ ಪವಾರ್ ವಿವರಿಸಿದರು.
ಕೆಲವು ದಿನಗಳ ಹಿಂದೆ ಇದೇ ಬೀಡ್ ಜಿಲ್ಲೆಯಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಬೃಹತ್ ಸಮಾವೇಶ ನಡೆಸಿದ್ದರು.