Advertisement

“ಸಮುದಾಯ ಬಲಪಡಿಸಲು ಕೈಜೋಡಿಸಿ’

06:05 AM Sep 08, 2017 | Team Udayavani |

ಮಹಾನಗರ: ಸಮುದಾಯದ ಎಲ್ಲ ಸದಸ್ಯರು ಸಮುದಾಯವನ್ನು ಬಲಗೊಳಿಸಲು ಕೆಲಸ ಮಾಡಬೇಕು ಮತ್ತು ಆಸ್ಪತ್ರೆ ಸಹಿತ ಅಗತ್ಯ ಸಂಸ್ಥೆಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಮಹಾಮಂಡಲದ ಉಪಾಧ್ಯಕ್ಷ ಪೀತಾಂಬರ ಹೆರಾಜೆ ಹೇಳಿದರು. 

Advertisement

ಬಿಲ್ಲವ ಸಂಘ ಕುವೈಟ್‌ನ ಎರಡನೇ ವರ್ಷದ ವಿದ್ಯಾರ್ಥಿ ವೇತನ ವಿತರಣೆ ಮತ್ತು ಪ್ರೇರಣಾ ಕಾರ್ಯಕ್ರಮವು ಸುರತ್ಕಲ್‌ನ ಶ್ರೀ ಗುರು ಚಾರಿಟೆಬಲ್‌ ಟ್ರಸ್ಟ್‌  ಸಹಯೋಗದೊಂದಿಗೆ ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಯಲ್ಲಿ ಜರಗಿದ್ದು, ಈ ಸಂದರ್ಭ ಅವರು ಮಾತನಾಡಿದರು. ಬಿಲ್ಲವ ಸಂಘ ಕುವೈಟ್‌ ಅಧ್ಯಕ್ಷ ರಘು ಪೂಜಾರಿ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದರು.

ಅಡ್ವೆ ರವೀಂದ್ರ ಪೂಜಾರಿ, ಟ್ರಸ್ಟ್‌ ಅಧ್ಯಕ್ಷ ಚಂದ್ರಶೇಖರ್‌ ನಾನಿಲ್‌ ಮುಖ್ಯ ಅತಿಥಿಯಾಗಿದ್ದರು. ರಂಜನ್‌ ಮೂಲ್ಕಿ, ಎಚ್‌. ಕೆ. ರವೀಂದ್ರ, ವಾಸು ಪೂಜಾರಿ, ಬಿಲ್ಲವ ಸಂಘ ಕುವೈಟ್‌ನ ಸಲಹೆಗಾರ ಸತೀಶ್‌ ಕುಂದರ್‌, ಆಂತರಿಕ ಲೆಕ್ಕ ಪರಿಶೋಧಕ ಷಣ್ಮುಖ ಪೂಜಾರಿ ಉಪಸ್ಥಿತರಿದ್ದರು. ಪ್ರತಿಭಾ ಕುಳಾಯಿ ಅವರು ಪ್ರೇರಣಾತ್ಮಕ ಭಾಷಣದ ಮೂಲಕ ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ಆದ್ಯತೆ ನೀಡಬೇಕು ಎಂದರು. ರೋಹಿತ್‌ ಸನಿಲ್‌ ಸ್ವಾಗತಿಸಿದರು.
ಸತೀಶ್‌ ಕುಂದರ್‌ ಅವರು ಕುವೈಟ್‌ ಬಿಲ್ಲವ ಸಂಘದ ಮಾಹಿತಿ ನೀಡಿದರು.

ಸ್ನಾತಕೋತ್ತರ ಪದವಿ, ಎಂಜಿ ನಿಯರಿಂಗ್‌, ಡಿಪ್ಲೊಮಾ, ಕಾನೂನು, ಪದವಿ ಹಾಗೂ ಪದವಿಪೂರ್ವ, ವಿಶ್ವ ವಿದ್ಯಾಲಯ ಮತ್ತು ವಾಣಿಜ್ಯ ಶಿಕ್ಷಣವನ್ನು ಅಭ್ಯಸಿಸುವ ಅರ್ಹ ವಿದ್ಯಾರ್ಥಿಗಳಿಗೆ 6.1 ಲಕ್ಷ ರೂ. ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಅತಿ ಥಿಗಳ ಜತೆ ರೋಹಿತ್‌ ಸನಿಲ್‌, ಗೌತಮ್‌ ಸುವರ್ಣ, ಮನೋಜ್‌ ಅಂಚನ್‌, ವಿಜಯ್‌ ಕಾವೂರು, ರಶ್ಮಿ ನಾಗರಾಜ್‌, ಮನೋಜ್‌ ಬಂಗೇರ, ಪ್ರವೀಣ್‌ ಕೋಟ್ಯಾನ್‌ ಕೊಡ್ಕಲ್‌, ವಿವೇಕ್‌ ರಾವ್‌ ಅವರು ವಿತರಿಸಿದರು.

ಕಳೆದ ವರ್ಷದಿಂದ ಪ್ರೇಕ್ಷಕರಾಗಿ ಈ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದ  ಜ್ಯೋತಿ ಬಂಗೇರ, ಈ ಕಾರ್ಯಕ್ರಮದಿಂದ ಪ್ರಭಾವಿತರಾಗಿ ಅಂಗವೈಕಲ್ಯ ಹೊಂದಿ ರುವ ಓರ್ವ ವಿದ್ಯಾರ್ಥಿನಿಗೆ ಹೆಚ್ಚುವರಿ ವಿದ್ಯಾರ್ಥಿ ವೇತನವನ್ನು ನೀಡಿದರು.  

Advertisement
Advertisement

Udayavani is now on Telegram. Click here to join our channel and stay updated with the latest news.

Next