Advertisement

ಜಾನ್ಸನ್ &ಜಾನ್ಸನ್ : ಎರಡು ಪ್ರತ್ಯೇಕ ಸಂಸ್ಥೆಗಳಾಗಿ ವಿಭಜಿಸಲು ತೀರ್ಮಾನ

07:32 PM Nov 12, 2021 | Team Udayavani |

ಹೊಸದಿಲ್ಲಿ: ಜಾನ್ಸನ್ ಮತ್ತು ಜಾನ್ಸನ್ ಕಂಪನಿ ತನ್ನ ವೈದ್ಯಕೀಯ ಸಾಧನ ಮತ್ತು ಔಷಧಿ ವ್ಯಾಪಾರದಿಂದ ಬ್ಯಾಂಡ್- ಏಡ್ ಗಳು ಮತ್ತು ಲಿಸ್ಟರಿನ್ ಮಾರಾಟ ಮಾಡುವ ವಿಭಾಗವನ್ನು ಪ್ರತ್ಯೇಕಿಸಿ ಎರಡು ಕಂಪನಿಗಳಾಗಿ ವಿಭಜಿಸಲು ಮುಂದಾಗಿದೆ.

Advertisement

1886 ರಲ್ಲಿ ಸ್ಥಾಪಿಸಲಾದ ಅಮೇರಿಕನ್ ಬಹುರಾಷ್ಟ್ರೀಯ ಕಂಪನಿ ವೈದ್ಯಕೀಯ ಸಾಧನಗಳು, ಔಷಧಗಳು ಮತ್ತು ಇತರ ಗ್ರಾಹಕೋಪಯೋಗಿ ಸರಕುಗಳನ್ನು ಅಭಿವೃದ್ಧಿಪಡಿಸುತ್ತದೆ.

ಪ್ರಿಸ್ಕ್ರಿಪ್ಷನ್ ಔಷಧಿಗಳು ಮತ್ತು ವೈದ್ಯಕೀಯ ಸಾಧನಗಳನ್ನು ಮಾರಾಟ ಮಾಡುವ ಕಂಪನಿಯಾಗಿರುವ ಜಾನ್ಸನ್ & ಜಾನ್ಸನ್ ಅನ್ನು ಅದರ ಹೆಸರಾಗಿ ಇರಿಸುತ್ತದೆ ಎಂದು ಕಂಪನಿ ಶುಕ್ರವಾರ ತಿಳಿಸಿದೆ.

ಹೊಸ ಗ್ರಾಹಕ ಆರೋಗ್ಯ ಕಂಪನಿಯು ನ್ಯೂಟ್ರೋಜೆನಾ, ಅವೀನೋ, ಟೈಲೆನಾಲ್, ಲಿಸ್ಟರಿನ್, ಜಾನ್ಸನ್ ಮತ್ತು ಬ್ಯಾಂಡ್-ಏಡ್ ಸೇರಿದಂತೆ ಇತರ ಬ್ರಾಂಡ್‌ಗಳನ್ನು ಹೊಂದಲಿದೆ. ಹೊಸ ಕಂಪನಿಯ ಹೆಸರನ್ನು ಬಹಿರಂಗಪಡಿಸಲಾಗಿಲ್ಲ

ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದ್ದು , ಆದರೆ ಮುಂದಿನ ಎರಡು ವರ್ಷಗಳಲ್ಲಿ ವಿಭಜನೆ ನಡೆಯುತ್ತದೆ ಎಂದು ಕಂಪನಿಯು ನಿರೀಕ್ಷಿಸಿದೆ.

Advertisement

ಮೂರು ಪ್ರತ್ಯೇಕ ಕಂಪನಿಗಳಾಗಿ ವಿಭಜಿಸಲು ಯೋಜಿಸುತ್ತಿದೆ ಎಂದು ಜನರಲ್ ಎಲೆಕ್ಟ್ರಿಕ್ ಹೇಳಿದ ಕೆಲವೇ ದಿನಗಳಲ್ಲಿ ಜಾನ್ಸನ್ ಮತ್ತು ಜಾನ್ಸನ್ ಕಂಪನಿಯಿಂದ ಈ ಪ್ರಕಟಣೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next