Advertisement

ಮಾಜಿ ಪತ್ನಿ ಅಂಬರ್ ಹರ್ಡ್ ವಿರುದ್ಧ ಮಾನನಷ್ಟ ಮೊಕದ್ದಮೆ ಗೆದ್ದ ಜಾನಿ ಡೆಪ್

08:31 AM Jun 02, 2022 | Team Udayavani |

ವರ್ಜೀನಿಯಾ: ಹಲವು ವಾರಗಳಿಂದ ವಿಶ್ವದ ಗಮನ ಸೆಳೆದಿದ್ದ ಜಾನಿ ಡೆಪ್-ಅಂಬರ್ ಹರ್ಡ್ ವಿಚಾರಣೆ ಅಂತ್ಯವಾಗಿದೆ.  “ಪೈರೇಟ್ಸ್ ಆಫ್ ದಿ ಕೆರಿಬಿಯನ್” ಸ್ಟಾರ್ ಜಾನಿ ಡೆಪ್ ಅವರು ತನ್ನ ಮಾಜಿ ಪತ್ನಿ ಅಂಬರ್ ಹರ್ಡ್ ವಿರುದ್ಧದ ಮಾನನಷ್ಟ ಮೊಕದ್ದಮೆಯನ್ನು ಗೆದ್ದಿದ್ದಾರೆ.

Advertisement

ಬುಧವಾರ ಜಾಣಿ ಡೆಪ್ 10 ಮಿಲಿಯನ್‌ ಅಮೇರಿಕನ್ ಡಾಲರ್ ಗಿಂತಲೂ ಹೆಚ್ಚಿನ ಮೊತ್ತದ ಮಾನನಷ್ಟ ಮೊಕದ್ದಮೆಯನ್ನು ಗೆದ್ದರು. ಹರ್ಡ್ ವಿರುದ್ಧದ ಮಾನನಷ್ಟ ಮೊಕದ್ದಮೆಯಲ್ಲಿ ಇಬ್ಬರು ಸ್ಟಾರ್ ಗಳ ಹಳಸಿದ ಸಂಬಂಧದ ಬಗ್ಗೆ ಗ್ರಾಫಿಕ್ ಸಾಕ್ಷ್ಯವನ್ನು ಒಳಗೊಂಡ ಆರು ವಾರಗಳ ವಿಚಾರಣೆಯ ತೀರ್ಪು ಬುಧವಾರ ನೀಡಲಾಯಿತು.

ವರ್ಜೀನಿಯಾದಲ್ಲಿ ಏಳು-ವ್ಯಕ್ತಿಗಳ ತೀರ್ಪುಗಾರರು ನೀಡಿದ ತೀರ್ಪನ್ನು ಜಾನಿ ಡೆಪ್ ಈ ನಿರ್ಧಾರವನ್ನು ಸಮರ್ಥನೆ ಎಂದು ಚಿತ್ರಿಸಿದ್ದಾರೆ ಮತ್ತು ಅವರ ಮಾಜಿ ಪತ್ನಿ ಹರ್ಡ್ ಇದು “ನಿರಾಶೆ” ಎಂದು ಹೇಳಿದರು.

ಬಹುಚರ್ಚಿತ ಮಾನಹಾನಿ ಪ್ರಕರಣವು ಮಾಜಿ ದಂಪತಿಗಳ ತೊಂದರೆಗೀಡಾದ ದಾಂಪತ್ಯವನ್ನು ಬಹಿರಂಗಪಡಿಸಿತು. ಫೇರ್‌ಫ್ಯಾಕ್ಸ್ ಕೌಂಟಿ ಸರ್ಕ್ಯೂಟ್ ಕೋರ್ಟ್‌ನಲ್ಲಿ ಆರು ವಾರಗಳ ವಿಚಾರಣೆಯು ಡೆಪ್ ಮತ್ತು ಹರ್ಡ್ ನಡುವಿನ ವಿವಾದಾತ್ಮಕ ಕದನವಾಗಿ ಮಾರ್ಪಟ್ಟಿತು. ಹರ್ಡ್ ಮತ್ತು ಡೆಪ್ ಇಬ್ಬರೂ ತಮ್ಮ ಸಂಬಂಧದ ಉದ್ದಕ್ಕೂ ದೈಹಿಕ ಕಿರುಕುಳದ ಬಗ್ಗೆ ಪರಸ್ಪರ ಆರೋಪಿಸಿದ್ದರು.

ಇದನ್ನೂ ಓದಿ:ಸಾಧನೆಗೆ ಅಡ್ಡಿಯಾಗದ ನ್ಯೂನತೆ: ಕರುಳು ಕಾಯಿಲೆಯಿದ್ದರೂ 580 ಅಂಕ ಪಡೆದ ಬಗ್ವಾಡಿಯ ಶ್ರಾವ್ಯಾ

Advertisement

ಜಾನಿ ಡೆಪ್ ಮತ್ತು ಅಂಬರ್ ಹರ್ಡ್ 2009 ರಲ್ಲಿ ದಿ ರಮ್ ಡೈರಿಯ ಸೆಟ್‌ಗಳಲ್ಲಿ ಭೇಟಿಯಾಗಿದ್ದರು. ಕೆಲವು ವರ್ಷಗಳ ಕಾಲ ಡೇಟಿಂಗ್ ಮಾಡಿದ ಅವರು 2015 ರಲ್ಲಿ ವಿವಾಹವಾದರು. ಆದರೆ 2016 ರಲ್ಲಿ ಹರ್ಡ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಡೆಪ್ ತಮ್ಮ ಮದುವೆಯ ಸಮಯದಲ್ಲಿ ಡ್ರಗ್ಸ್ ಅಥವಾ ಮದ್ಯ ಸೇವಿಸಿ ದೈಹಿಕವಾಗಿ ಕಿರುಕುಳ ನೀಡಿದ್ದರು ಎಂದು ಹರ್ಡ್ ಆರೋಪಿಸಿದರು. ಆದರೆ ಡೆಪ್ ಈ ಆರೋಪಗಳನ್ನು ನಿರಾಕರಿಸಿದರು. ಅಲ್ಲದೆ ಹರ್ಡ್ ಈ ಸುಳ್ಳು ಆರೋಪದ ಮೂಲಕ ಆರ್ಥಿಕ ಪರಿಹಾರವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ” ಎಂದು ಹೇಳಿದರು.

2018 ರಲ್ಲಿ ಅಂಬರ್ ಹರ್ಡ್ ವಾಷಿಂಗ್ಟನ್ ಪೋಸ್ಟ್‌ನಲ್ಲಿ ಬರೆದ ಅಂಕಣದ ಕಾರಣಕ್ಕೆ ಆಕೆಯ ವಿರುದ್ದ ಜಾನಿ ಡೆಪ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಅಂಕಣದಲ್ಲಿ “ನಾನು ಲೈಂಗಿಕ ಹಿಂಸೆಯ ವಿರುದ್ಧ ಮಾತನಾಡಿದ್ದೇನೆ ಮತ್ತು ನಮ್ಮ ಸಂಸ್ಕೃತಿಯ ಕ್ರೋಧವನ್ನು ಎದುರಿಸಿದ್ದೇನೆ. ಅದು ಬದಲಾಗಬೇಕು” ಎಂದು ಹರ್ಡ್ ಬರೆದುಕೊಂಡಿದ್ದರು. ಅಂಕಣದಲ್ಲಿ ಅವು ಡೆಪ್ ಹೆಸರು ಉಲ್ಲೇಖಿಸಿರಲಿಲ್ಲ ಆದರೆ ತಾನು ಕೌಟುಂಬಿಕ ದೌರ್ಜನ್ಯದಿಂದ ಬದುಕುಳಿದವಳು ಎಂದು ಹರ್ಡ್ ಹೇಳಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next