Advertisement

ಚಲನಚಿತ್ರಗಳಲ್ಲಿ ಪ್ರಣಯ ಗೀತೆಗಳು ಇಂದಿನ ಮಾರುಕಟ್ಟೆಯ ಅಗತ್ಯಗಳಲ್ಲ!

10:51 AM Jan 20, 2021 | Team Udayavani |

ಪಣಜಿ: ಇಂದಿನ ಜನಪ್ರಿಯ ಧಾರೆಯ ಚಲನಚಿತ್ರಗಳಲ್ಲಿ ಪ್ರಣಯಗೀತೆಗಳು ಪ್ರಸ್ತುತವೆನಿಸುತ್ತದೆಯೇ? ಅವುಗಳು ಇಲ್ಲದಿದ್ದರೆ ಚಿತ್ರ ಪರಿಪೂರ್ಣವಾಗದೇ? ಹಾಡು ಎನ್ನುವುದು ಕಥೆಯ ಭಾಗವಾಗಿ ಇರಬೇಕೇ? ಬೇಡವೇ?

Advertisement

ಈ ಚರ್ಚೆ, ಜಿಜ್ಞಾಸೆ ಹೊಸದೇನೂ ಅಲ್ಲ. ಈಗ ಮತ್ತೆ ಆರಂಭವಾಗಿದೆಯಂತೆ ಸರ್‌ಫೋಸ್‌ ಚಿತ್ರದ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಜಾನ್‌ ಮ್ಯಾಥ್ಯೂ ಮಥಾನ್‌ ಪ್ರಕಾರ. ಅವರು ಈ ಬಾರಿಯ ಇಂಡಿಯನ್‌ ಪನೋರಮಾದ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದರು.

ಚಿತ್ರೋತ್ಸವದ ಭಾಗವಾಗಿ, ‘ನಿಮಗೆ ಅದು ಸಿಕ್ಕಿತೇ?’ ಎಂಬ ವರ್ಚುಯಲ್‌ ಸರಣಿ ಸಂವಾದದಲ್ಲಿ ಪಾಲ್ಗೊಂಡಿದ್ದ ಅವರು, ‘ನನ್ನ ದೃಷ್ಟಿಯಲ್ಲಿ ಪ್ರಣಯ ಗೀತೆಗಳು ಪ್ರಸ್ತುತತೆಯನ್ನು ಕಳೆದುಕೊಂಡಿವೆ. ಅವುಗಳನ್ನು ಚಿತ್ರದಲ್ಲಿ ತುರುಕುವುದರಲ್ಲಿ ಯಾವುದೇ ಅರ್ಥವಿಲ್ಲ. ಅಂದು ಹಾಡುಗಳಿಗೆ ಅರ್ಥವಿತ್ತು, ಸಿನಿಮಾದಲ್ಲಿ ಸ್ಥಾನ ನೀಡಿದ್ದೆವು. ನಾನು ಸಿನಿಮಾ ಮಾಡಿದಾಗ ಸಂಗೀತ ಎನ್ನುವುದು ಇಡೀ ಚಲನಚಿತ್ರದ ಒಂದು ಪ್ರಮುಖವಾದ ಭಾಗವಾಗಿತ್ತು. ಆದಾಯದ ನೆಲೆಯಲ್ಲೂ ಸಹ. ಆದರೆ ಅದಕ್ಕಾಗಿ ಒಂದು ಸಿನಿಮಾದಲ್ಲಿ ಎರಡೆರಡು ಪ್ರಣಯ ಗೀತೆಗಳನ್ನು ತುರುಕುವುದನ್ನು ಒಪ್ಪುತ್ತಿರಲಿಲ್ಲ, ಇಂದಿಗೂ ಒಪ್ಪುವುದಿಲ್ಲ’ ಎಂದರು.

ಇದನ್ನೂ ಓದಿ:ರಿಷಭ್ ಶೆಟ್ರ ಬೆಲ್‌ ಬಾಟಂ-2 ಗೆ ತಾನ್ಯಾ ಹೋಪ್ ನಾಯಕಿ!

ಇಂದು ಪ್ರಣಯ ಗೀತೆಗಳು ಆ ಪ್ರಸ್ತುತತೆಯನ್ನು ಕಳೆದುಕೊಂಡಿದೆ. ಜತೆಗೆ ಮಾರುಕಟ್ಟೆಯ ಅಗತ್ಯವಾಗಿಯೂ ಉಳಿದಿಲ್ಲ. ಹಾಗಾಗಿ ಚಿತ್ರ ನಿರ್ದೇಶಕರು ಪ್ರಣಯ ಗೀತೆಗಳನ್ನು ಚಿತ್ರಗಳಿಗೆ ಹೊಂದಿಸುವ ಹಠವನ್ನು ಬಿಡಬೇಕು ಎಂದರು.

Advertisement

ನಾನು ನನ್ನ ಸಿನಿಮಾಗಳಿಗಾಗಿ ಇಡೀ ಭಾರತವನ್ನು ಸುತ್ತಿದ್ದೆ. ಬೇರೆ ಬೇರೆ ನೆಲೆಯ ಕಥಾವಸ್ತುಗಳು ಬೇಕಿತ್ತು. ಯಾವುದೇ ಸಿನಿಮಾ ನಿರ್ದೇಶಕ ಸಿನಿಮಾ ಮಾಡುವ ಮೊದಲು ಆಯಾ ದೇಶದ ಸಾಮಾಜಿಕ ಸಂರಚನೆ ಮತ್ತು ರಾಜಕೀಯದ ನೆಲೆಯನ್ನೂ ತಿಳಿದಿರಬೇಕು. ಸಮಾಜದ ಕುರಿತು ಸಂವೇದನಾಶೀಲವಾಗಿರಬೇಕು. ನಿಮ್ಮ ಅಭಿಪ್ರಾಯವನ್ನು ಮತ್ತೊಬ್ಬರಿಗೆ ನೋವಾಗದಂತೆ, ಬೇಸರವಾಗದಂತೆ ಹೇಳುವುದನ್ನು ಕಲಿತಿರಬೇಕು ಎಂಬುದು ಜಾನ್‌ ಅಭಿಪ್ರಾಯ.

ಇದನ್ನೂ ಓದಿ: ಇಫಿ 2021: ಹೊಸ ಜಗತ್ತಿಗೆ ಮುಖ ಮಾಡಿದೆ; ನಟಿ ಗುಂಜಾಲಮ್ಮ ಮುಕ್ತ ಮಾತು

ಸರ್‌ಪೋಸ್‌ -2 ಕ್ಕೆ ನಾನು 5-6 ಬಾರಿ ಚಿತ್ರಕಥೆ ಬರೆದೆ. ನನ್ನ ಗೆಳೆಯರಲ್ಲಿ ತೋರಿಸಿದೆ. ಅವರ ಅಭಿಪ್ರಾಯ, ಟೀಕೆಗಳನ್ನು ಎದುರಿಸಿ ಮತ್ತೆ ತಿದ್ದಿ ಬರೆದೆ. ಕೊನೆಯದಾಗಿ ಐದನೇ ಬಾರಿ ತಿದ್ದಿದ ಚಿತ್ರಕಥೆಯನ್ನು ಸಿನಿಮಾ ಮಾಡಿದೆ. ಒಂದು ಒಳ್ಳೆಯ ಸಿನಿಮಾ ಮಾಡಲು ಒಂದಿಷ್ಟು ಮಂದಿ ಒಳ್ಳೆಯ ಗೆಳೆಯರನ್ನೂ ಹೊಂದಿರಬೇಕು’ ಎಂದು ಹೇಳಿದವರು ಜಾನ್‌ ಮ್ಯಾಥ್ಯೂ.

ಈ ಬಾರಿಯ ಇಂಡಿಯನ್‌ ಪನೋರಮಾ ಆಯ್ಕೆ ಕುರಿತು ವಿವರಿಸಿ, 180 ಚಲನಚಿತ್ರಗಳನ್ನು ನೋಡಿದೆ. ಭಾರತೀಯ ಭಾಷೆಗಳಲ್ಲಿ ಇರುವ ವೈವಿಧ್ಯತೆಯ ಅಗಾಧತೆ ಅರಿವಾಯಿತು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next