Advertisement

ಅಟ್ಲಾಂಟಾ ಓಪನ್‌: ಸೆಮಿ ಪ್ರವೇಶಿಸಿದ ಜಾನ್‌ ಇಸ್ನರ್‌

12:10 PM Jul 29, 2018 | Team Udayavani |

ಲಾಸ್‌ ಏಂಜಲೀಸ್‌: ಜರ್ಮನಿಯ ಮಿಶಾ ಜ್ವೆರೇವ್‌ ಅವರನ್ನು 7-5, 4-6, 6-1 ಅಂತರದಿಂದ ಪರಾಭವಗೊಳಿಸಿದ ಅಮೆರಿಕದ ಜಾನ್‌ ಇಸ್ನರ್‌ “ಅಟ್ಲಾಂಟಾ ಓಪನ್‌’ ಟೆನಿಸ್‌ ಪಂದ್ಯಾವಳಿಯ ಸೆಮಿಫೈನಲ್‌ ತಲುಪಿದ್ದಾರೆ.  ಕಳೆದ ವರ್ಷ ಜ್ವೆರೇವ್‌ ವಿರುದ್ಧ ಆಡಿದ ಎಲ್ಲ 3 ಪಂದ್ಯಗಳಲ್ಲೂ ಜಾನ್‌ ಇಸ್ನರ್‌ ಪರಾಭವಗೊಂಡಿದ್ದರು. ಈ ಜಯದೊಂದಿಗೆ ಇವರಿಬ್ಬರ ಗೆಲುವು-ಸೋಲಿನ ದಾಖಲೆ 3-3ರಿಂದ ಸಮನಾಯಿತು.

Advertisement

ಕಳೆದ ವಿಂಬಲ್ಡನ್‌ನಲ್ಲಿ ಸೆಮಿಫೈನಲ್‌ ತನಕ ಸಾಗಿದ್ದ ಇಸ್ನರ್‌ ಅಟ್ಲಾಂಟಾ ಸೆಮಿ ಕಾಳಗದಲ್ಲಿ ಆಸ್ಟ್ರೇಲಿಯದ ಮ್ಯಾಥ್ಯೂ ಎಬೆxನ್‌ ವಿರುದ್ಧ ಸೆಣಸಲಿದ್ದಾರೆ. ಎಬೆನ್‌ ಸೈಪ್ರಸ್‌ನ ಮಾರ್ಕೋಸ್‌ ಬಗ್ಧಾಟಿಸ್‌ ಅವರನ್ನು 6-3, 6-2 ಅಂತರದಿಂದ ಪರಾಭವಗೊಳಿಸಿದರು. ಇದು ಪ್ರಸಕ್ತ ವರ್ಷ ಎಬೆನ್‌ ಕಾಣುತ್ತಿರುವ 2ನೇ ಸೆಮಿಫೈನಲ್‌. ಇನ್ನೊಂದು ಸೆಮಿಫೈನಲ್‌ ರಿಯಾನ್‌ ಹ್ಯಾರಿಸನ್‌ ಮತ್ತು ಕ್ಯಾಮರಾನ್‌ ನೋರಿಸ್‌ ನಡುವೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next