Advertisement

ಅಮೇರಿಕದಲ್ಲಿ ಗುಂಡಿನ ದಾಳಿಗೆ ಬಲಿಯಾದ ಜಾನ್ ಡಯಾಸ್ ಪಾರ್ಥಿವ ಶರೀರ ಹುಟ್ಟೂರಿಗೆ

04:47 PM Apr 03, 2022 | Team Udayavani |

ಪಣಜಿ : ಅಮೇರಿಕದಲ್ಲಿ ಅಪರಿಚಿತ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದ ಯುವಕ ಜಾನ್ ಡಯಾಸ್ ರವರ ಪಾರ್ಥಿವ ಶರೀರ ಶನಿವಾರ ಗೋವಾಕ್ಕೆ ಬಂದು ತಲುಪಿದ್ದು ಅಂತಿಮ ದರ್ಶನದ ನಂತರ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

Advertisement

ಕಳೆದ 10 ದಿನಗಳಿಂದ ಎನ್‍ಆರ್ ಐ ಆಯೋಗವು ಗೋವಾ ಸರ್ಕಾರದೊಂದಿಗೆ ಜಾನ್ ಮೃತದೇಹವನ್ನು ಗೋವಾಕ್ಕೆ ತರಲು ಶ್ರಮಿಸಿತ್ತು. ಕೊನೆಗೂ ಸರ್ಕಾರದ ಪ್ರಯತ್ನ ಸಫಲವಾಗಿದೆ. ಏಪ್ರಿಲ್ 2 ರಂದು ಬೆಳಿಗ್ಗೆ 4 ಗಂಟೆಗೆ ಜಾನ್ ಮೃತದೇಹವು ಗೋವಾಕ್ಕೆ ಬಂದು ತಲುಪಿತ್ತು, ನಂತರ ಸಂಜೆ 4 ಗಂಟೆಗೆ ಅವರ ಹುಟ್ಟೂರಾದ ಮಡಗಾಂವ್ ಸಮೀಪದ ಚಾಂದರ್ ನಲ್ಲಿ ಕ್ರೈಸ್ತ ಧರ್ಮದ ವಿಧಿವಿಧಾನಗಳಂತೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಜಾನ್ ಹತ್ಯೆಗೈದವರ ಮಾಹಿತಿ ನೀಡಿದವರಿಗೆ ಅಮೇರಿಕಾ ಪೋಲಿಸರು 5,000 ಡಾಲರ್ ಬಹುಮಾನ ಘೋಷಿಸಿದ್ದಾರೆ.

ಜಾನ್ ಡಾಯಸ್ ಈತನು ಫುಟ್‍ಬಾಲ್ ಪಟುವಾಗಿದ್ದ. ದಕ್ಷಿಣ ಗೋವಾದ ಚಾಂದರ್ ಮತ್ತು ಗಿರ್ಡೋಲಿ ಕ್ಲಬ್‍ಗಳಿಗೆ ಗೋಲ್‍ಕೀಪರ್ ಆಗಿದ್ದರು. ಆದರೆ ಉದ್ಯೋಗದ ನಿಮಿತ್ತ ಇವರು ಕಳೆದ ಮೂರು ವರ್ಷಗಳ ಹಿಂದಷ್ಟೆ ಅಮೇರಿಕಕ್ಕೆ ಹೋಗಿದ್ದರು. ಅಲ್ಲಿಯೇ ಆತನ ಮೇಲೆ ಹಲ್ಲೆ ನಡೆದಿದೆ.

ಇದನ್ನೂ ಓದಿ : ಹಲಾಲ್- ಜಟ್ಕಾ ಕೆಲ ವ್ಯಕ್ತಿಗಳು ಆಡುತ್ತಿರುವ ಆಟ; ಇಲ್ಲಿ ನಾನು ರಾಜಕಾರಣ ಮಾಡಲ್ಲ- ಈಶ್ವರಪ್ಪ

Advertisement

ಅಮೇರಿಕದಲ್ಲಿ ಅಂಗಡಿಗೆ ಕಳ್ಳತನ ಮಾಡಲು ಬಂದಿದ್ದ ಮುಸುಕುಧಾರಿಯೊಬ್ಬ ಜಾನ್ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಗುಂಡಿನ ದಾಳಿ ನಡೆದ ಕೆಲವೇ ಹೊತ್ತಿನಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಆದರೆ ಅಷ್ಟುಹೊತ್ತಿನಲ್ಲಿ ದಾಳಿಕೋರ ಪರಾರಿಯಾಗಿದ್ದ. ದಾಳಿಯ ಕುರಿತಂತೆ ಪೋಲಿಸರು ತನಿಖೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯಾವಳಿಯ ಆಧಾರದ ಮೇಲೆ ಆರೋಪಿಯ ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next