Advertisement

ಆರ್ಚರ್ ಗೆ ನಾಲ್ಕು ವಾರಗಳ ವಿಶ್ರಾಂತಿ: ಇಂಗ್ಲೆಂಡ್ ಗೆ ಹಿನ್ನಡೆ

02:18 PM May 27, 2021 | Team Udayavani |

ಲಂಡನ್‌: ಬಲಗೈ ಮಣಿಗಂಟಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಇಂಗ್ಲೆಂಡಿನ ವೇಗಿ ಜೋಫ್ರಾ ಆರ್ಚರ್‌ ಅವರಿಗೆ ಕನಿಷ್ಠ 4 ವಾರಗಳ ವಿಶ್ರಾಂತಿ ಸೂಚಿಸಲಾಗಿದೆ.

Advertisement

ಹೀಗಾಗಿ ಅವರು ಜುಲೈಗಿಂತ ಮೊದಲು ಕ್ರಿಕೆಟ್‌ ಮೈದಾನಕ್ಕೆ ಇಳಿಯುವ ಸಾಧ್ಯತೆ ಇಲ್ಲ. ಇದರಿಂದ ತವರಿನ ಸರಣಿ ಆಡಲಿರುವ ಇಂಗ್ಲೆಂಡಿಗೆ ತುಸು ಹಿನ್ನಡೆಯಾಗಲಿದೆ.

ಇದನ್ನೂ ಓದಿ:ಕ್ಯಾನ್ಸರ್‌ ಗೆದ್ದ ನವಾರೊ ಫ್ರೆಂಚ್‌ ಕಣಕ್ಕೆ : ಕಳೆದ ತಿಂಗಳಷ್ಟೇ ಮುಗಿದಿತ್ತು ಚಿಕಿತ್ಸೆ

ಇಂಗ್ಲೆಂಡ್‌ ತಂಡವಿನ್ನು ಪ್ರವಾಸಿ ನ್ಯೂಜಿಲ್ಯಾಂಡ್‌ ವಿರುದ್ಧ ಜೂ. 2ರಿಂದ ಎರಡು ಪಂದ್ಯಗಳ ಟೆಸ್ಟ್‌ ಸರಣಿ, ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಟಿ20 ಹಾಗೂ ಏಕದಿನ ಸರಣಿಯನ್ನಾಡಲಿದೆ. ಲಂಕಾ ವಿರುದ್ಧದ ಟಿ20 ಸರಣಿ ಜೂ. 23ರಿಂದ ಆರಂಭವಾಗಲಿದೆ. ಅನಂತರ ಪಾಕಿಸ್ಥಾನ ವಿರುದ್ಧ ಜು. 8ರಿಂದ 3 ಪಂದ್ಯಗಳ ಏಕದಿನ ಸರಣಿಯಲ್ಲೂ ಇಂಗ್ಲೆಂಡ್‌ ಪಾಲ್ಗೊಳ್ಳಲಿದೆ

Advertisement

Udayavani is now on Telegram. Click here to join our channel and stay updated with the latest news.

Next