Advertisement
ಇಲ್ಲಿ ಕೆಎಸ್‌ಸಿಎ ಎಲೆವೆನ್ ಮತ್ತು ಸಸೆಕ್ಸ್ ಕೌಂಟಿ ನಡುವೆ ಅಭ್ಯಾಸ ಪಂದ್ಯವೊಂದು ನಡೆಯುತ್ತಿದೆ. ಇದರಲ್ಲಿ ಜೋಫ್ರಾ ಆರ್ಚರ್ ಕೆಎಸ್‌ಸಿಎ ಇಲೆವೆನ್ ತಂಡವನ್ನು ಪ್ರತಿನಿಧಿಸಿ ತಮ್ಮದೇ ಕೌಂಟಿ ವಿರುದ್ಧ 7 ಓವರ್‌ಗಳ ಸ್ಪೆಲ್ ಒಂದನ್ನು ನಡೆಸಿದರು. 22 ರನ್ನಿತ್ತು 2 ವಿಕೆಟ್ ಉಡಾಯಿಸಿದರು.
ಕೆಎಸ್‌ಸಿಎಯ 201ಕ್ಕೆ ಉತ್ತರವಾಗಿ ಸಸೆಕ್ಸ್ 365 ರನ್ ಪೇರಿಸಿತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕೆಎಸ್‌ಸಿಎ 4ಕ್ಕೆ 162 ರನ್ ಗಳಿಸುವುದರೊಂದಿಗೆ 2 ದಿನಗಳ ಪಂದ್ಯ ಡ್ರಾಗೊಂಡಿತು.