Advertisement

ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಜೋ ರೂಟ್

02:18 PM Apr 15, 2022 | Team Udayavani |

ಲಂಡನ್: ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕನಾಗಿದ್ದ ಜೋ ರೂಟ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ.

Advertisement

2017ರಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡದ ಚುಕ್ಕಾಣಿ ಹಿಡಿದಿದ್ದ ರೂಟ್ 64 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು. ( ಇಂಗ್ಲೆಂಡ್ ಪರ ಅತೀ ಹೆಚ್ಚು). ಮತ್ತು ಇಂಗ್ಲೆಂಡ್ ನಾಯಕನಾಗಿ 27 ಟೆಸ್ಟ್ ಪಂದ್ಯಗಳಲ್ಲಿ ಜಯಿಸಿದ್ದರು.

ರೂಟ್ ನಾಯಕತ್ವದಲ್ಲಿ, ಇಂಗ್ಲೆಂಡ್ 2018 ರಲ್ಲಿ ತವರಿನಲ್ಲಿ ಭಾರತದ ವಿರುದ್ಧ 4-1 ಜಯ ಸಾಧಿಸಿತು ಮತ್ತು 2020 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ 3-1 ವಿಜಯವನ್ನು ದಾಖಲಿಸಿತು. 2018 ರಲ್ಲಿ, ಜೋ ರೂಟ್ 2001 ರ ಬಳಿಕ ಶ್ರೀಲಂಕಾದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದ ಮೊದಲ ಇಂಗ್ಲೆಂಡ್ ನಾಯಕರಾದರು. 2021ರಲ್ಲಿ ಮತ್ತೆ ಶ್ರೀಲಂಕಾದಲ್ಲಿ ಟೆಸ್ಟ್ ಸರಣಿ ಜಯಿಸಿದ್ದರು.

“ಕೆರಿಬಿಯನ್ ಪ್ರವಾಸದಿಂದ ಹಿಂದಿರುಗಿದ ನಂತರ ನಾನು ಇಂಗ್ಲೆಂಡ್ ಪುರುಷರ ಟೆಸ್ಟ್ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದೆ” ಎಂದು ರೂಟ್ ಹೇಳಿದರು. “ಇದು ನನ್ನ ವೃತ್ತಿಜೀವನದಲ್ಲಿ ಅತ್ಯಂತ ಸವಾಲಿನ ನಿರ್ಧಾರವಾಗಿದೆ, ಆದರೆ ಇದನ್ನು ನನ್ನ ಕುಟುಂಬ ಮತ್ತು ನನಗೆ ಹತ್ತಿರದವರೊಂದಿಗೆ ಚರ್ಚಿಸಿದ್ದೇನೆ; ಈ ನಿರ್ಧಾರಕ್ಕೆ ಇದು ಸಮಯ ಸರಿಯಾಗಿದೆ ಎಂದು ನನಗೆ ತಿಳಿದಿದೆ” ಎಂದು ರೂಟ್ ಹೇಳಿದ್ದಾರೆ.

ಇದನ್ನೂ ಓದಿ:ಚಹಾದೊಂದಿಗೆ ತಿಂಡಿ ನೀಡಿಲ್ಲವೆಂದು ಸೊಸೆಯ ಮೇಲೆ ಗುಂಡು ಹಾರಿಸಿದ ಮಾವ!

Advertisement

ನಾನು ಇಂಗ್ಲೆಂಡ್ ಜೆರ್ಸಿಯಲ್ಲಿ ಮುಂದೆಯೂ ಆಡಲು ಇಷ್ಟಪಡುತ್ತೇನೆ. ಮುಂದಿನ ನಾಯಕನಿಗೆ ಮತ್ತು ಕೋಚ್ ಗೆ ತನ್ನಿಂದಾದ ರೀತಿಯಲ್ಲಿ ಸಹಾಯ ಮಾಡಲು ಬಯಸುತ್ತೇನೆ ಎಂದು ಬಲಗೈ ಬ್ಯಾಟರ್ ಜೋ ರೂಟ್ ಹೇಳಿಕೊಂಡಿದ್ದಾರೆ.

ಭಾರತ ವಿರುದ್ಧದ ತವರಿನ ಸರಣಿಯಲ್ಲಿ ಹಿನ್ನಡೆ, ಆ್ಯಶಸ್ ಸರಣಿಯಲ್ಲಿ 4-0 ಅಂತರದ ಸೋಲು, ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ವೈಫಲ್ಯ ಮತ್ತು ಇತ್ತೀಚಿನ ಕೆರಿಬಿಯನ್ ಪ್ರವಾಸದಲ್ಲಿನ ಸೋಲು ಜೋ ರೂಟ್ ಗೆ ಸವಾಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next