Advertisement
ಚೀನಾಮೇಲ್ನೋಟಕ್ಕೆ ಟ್ರಂಪ್ ನಿರ್ಗಮನವು ಚೀನಾಗೆ ಸಮಾಧಾನ ತಂದಿದೆ ಎಂದೇ ಎಲ್ಲರೂ ಭಾವಿಸಬಹುದು. ವ್ಯಾಪಾರ ಸಮರ, ಹಲವು ನಿರ್ಬಂಧ, ಕೊರೊನಾ ಸೋಂಕಿನ ಕಳಂಕವನ್ನು ಚೀನಾದ ಮೇಲೆ ಹೊರಿಸಿದ್ದ ಟ್ರಂಪ್‌ರಿಂದಾಗಿ ಚೀನಾ ಕೆಂಡವಾಗಿತ್ತು ನಿಜ. ಆದರೆ, ಅಂತಾರಾಷ್ಟ್ರೀಯ ವಿಶ್ಲೇಷಕರ ಪ್ರಕಾರ, ಟ್ರಂಪ್ ಸೋಲಿನಿಂದಾಗಿ ಚೀನಾಗೆ ಒಳಗೊಳಗೇ ನಿರಾಸೆಯಾಗಿದೆ.
Related Articles
Advertisement
ಭಾರತಕಮಲಾ ಹ್ಯಾರಿಸ್ ಮೂಲ ಭಾರತವಾಗಿರುವುದು ಭಾರತೀಯರಿಗೆ ಹೆಮ್ಮೆಯ ವಿಚಾರ. ಆದರೆ, ಪ್ರಧಾನಿ ಮೋದಿ ವಿಚಾರಕ್ಕೆ ಬಂದರೆ, ಬೈಡೆನ್ ಅವರ ಸ್ಪಂದನೆ ನೀರಸವಾಗಿರಬಹುದು ಎನ್ನುತ್ತಾರೆ ತಜ್ಞರು. ಭಾರತವು ದೀರ್ಘಕಾಲದಿಂದಲೂ ಅಮೆರಿಕಕ್ಕೆ ಅತ್ಯಂತ ಪ್ರಮುಖ ಪಾಲುದಾರ ರಾಷ್ಟ್ರ. ಹೀಗಾಗಿ, ಈ ಸಂಬಂಧ ಬೈಡೆನ್ ಅಧ್ಯಕ್ಷತೆಯಲ್ಲೂ ಮುಂದುವರಿಯುವುದು ಖಚಿತ. ಚೀನಾದ ಪ್ರಾಬಲ್ಯ ತಗ್ಗಿಸಲು ಮತ್ತು ಜಾಗತಿಕ ಭಯೋತ್ಪಾದನೆ ವಿರುದ್ಧ ಹೋರಾಡಲು ಅಮೆರಿಕಕ್ಕೆ ಸಾಥ್ ನೀಡುವ ದಕ್ಷಿಣ ಏಷ್ಯಾದ ಪ್ರಮುಖ ದೇಶವೂ ಭಾರತವಾಗಿದೆ. ಅಲ್ಲದೆ, ವ್ಯಾಪಾರ ಸೇರಿದಂತೆ ಎಲ್ಲ ವಿಚಾರದಲ್ಲೂ ಅಮೆರಿಕಕ್ಕೆ ಭಾರತ ಬೇಕು, ಭಾರತಕ್ಕೆ ಅಮೆರಿಕ ಬೇಕು. ಇನ್ನು, ಕಾಶ್ಮೀರ, ಸಿಎಎ, ಎನ್‌ಆರ್‌ಸಿ ವಿಚಾರದಲ್ಲಿ ಸ್ವಲ್ಪಮಟ್ಟಿಗಿನ ಭಿನ್ನ ಅಭಿಪ್ರಾಯ ಇರುವ ಕಾರಣ ವೈಯಕ್ತಿಕವಾಗಿ ಬೈಡೆನ್-ಮೋದಿ ಸಂಬಂಧ ಹೇಳಿಕೊಳ್ಳುವಂತೆ ಇರಲಿಕ್ಕಿಲ್ಲ. ಇದನ್ನೂ ಓದಿ:ಕೋವಿಡ್ ತಡೆಗಟ್ಟಲು ಬಿಸಿಜಿ ಲಸಿಕೆ ಪರಿಣಾಮಕಾರಿ ?: ಭಾರತೀಯ ವೈದ್ಯರಿಂದ ಹೊಸ ಅಧ್ಯಯನ ಉತ್ತರ ಕೊರಿಯಾ
ಉತ್ತರ ಕೊರಿಯಾವು ಈ ಹಿಂದೆ ಬೈಡೆನ್‌ನರನ್ನು “ರ್ಯಾಬಿಡ್ ಡಾಗ್’ ಎಂದು ಕರೆದಿದ್ದರು. ಆದರೆ, ಈಗ ಕಿಮ್ ಜಾಂಗ್ ಉನ್ ಬಹಳ ಎಚ್ಚರಿಕೆಯ ಹೆಜ್ಜೆಯಿಡುತ್ತಿದ್ದಾರೆ. ಕಿಮ್ ಅವರಿಗೂ ಟ್ರಂಪ್ ಇನ್ನೂ 4 ವರ್ಷ ಅಧಿಕಾರದಲ್ಲಿರುವುದೇ ಬೇಕಿತ್ತು ಎನ್ನುತ್ತಾರೆ ಸಿಯೋಲ್ ರಾಜಕೀಯ ವಿಶ್ಲೇಷಕರಾದ ಲಾರಾ ಬಿಕೆರ್. ಟ್ರಂಪ್- ಕಿಮ್ ಭೇಟಿಯು ಕೇವಲ ಫೋಟೋಗೆ ಸೀಮಿತವಾಯಿತೇ ಹೊರತು ಹೇಳಿಕೊಳ್ಳುವಂಥ ಬದಲಾವಣೆ ಉಂಟುಮಾಡಲಿಲ್ಲ. ಅತ್ತ ಕಿಮ್ ಅವರು ಅಣ್ವಸ್ತ್ರ ಕ್ರೋಡೀಕರಣವನ್ನು ಮುಂದುವರಿಸಿದರೆ, ಅಮೆರಿಕವು ನಿರ್ಬಂಧವನ್ನು ಮುಂದುವರಿಸಿತು. ಆದರೆ, “ಕಿಮ್ ಜೊತೆಗೆ ಯಾವುದೇ ಸಭೆ ನಡೆಸುವ ಮುನ್ನ, ಅಣ್ವಸ್ತ್ರಗಳಿಂದ ದೂರ ಸರಿಯುವ ಅವರ ಯೋಜನೆಯನ್ನು ನಮ್ಮ ಮುಂದಿಡಬೇಕು’ ಎಂಬ ಷರತ್ತನ್ನು ಜೋ ಬೈಡೆನ್ ವಿಧಿಸಿದ್ದಾರೆ. ಮುಂದೇನಾಗುತ್ತೋ ನೋಡಬೇಕು. ಯು.ಕೆ.
ಅಮೆರಿಕ ಮತ್ತು ಯು.ಕೆ. ನಡುವಿನ “ವಿಶೇಷ ಸಂಬಂಧ’ವು ಬೈಡೆನ್ ನಾಯಕತ್ವದಲ್ಲಿ ಸ್ವಲ್ಪಮಟ್ಟಿಗೆ ಕ್ಷೀಣಿಸುವ ಸಾಧ್ಯತೆಯಿದೆ. ಏಕೆಂದರೆ, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್ ನಡುವೆ ಬಹಳ ಸಾಮ್ಯತೆಯಿತ್ತು. ಒಂದು ಬಾರಿ ಟ್ರಂಪ್ ಅವರು ಬೋರಿಸ್‌ರನ್ನು “ಬ್ರಿಟನ್‌ನ ಟ್ರಂಪ್’ ಎಂದೇ ಸಂಭೋದಿಸಿದ್ದರು. ಅಲ್ಲದೆ, ಬ್ರೆಕ್ಸಿಟ್ ವಿಚಾರದಲ್ಲಿ ಬೋರಿಸ್ ನಿಲುವು ಕೂಡ ಡೆಮಾಕ್ರಾಟ್‌ಗಳಿಗೆ ರುಚಿಸಿರಲಿಲ್ಲ. ಹೀಗಾಗಿ ಬೋರಿಸ್-ಬೈಡೆನ್ ದೋಸ್ತಿ ಬೋರಿಸ್-ಟ್ರಂಪ್‌ರಂತೆ ಇರುವ ಸಾಧ್ಯತೆ ಕಡಿಮೆ. ಇರಾನ್
ಟ್ರಂಪ್ ಅವಧಿಯಲ್ಲಿ ಹಳಸಿರುವ ಅಮೆರಿಕ-ಇರಾನ್ ಸಂಬಂಧ ಮತ್ತೆ ಹಳಿಗೆ ಬರುವ ಸಾಧ್ಯತೆ ಇದೆ. ಟ್ರಂಪ್ ಆಡಳಿತಾವಧಿಯಲ್ಲಿ ಇರಾನ್ ಭಾರೀ ನಿರ್ಬಂಧವನ್ನು ಎದುರಿಸಿದ್ದಲ್ಲದೆ, ಆ ದೇಶದ ಆರ್ಥಿಕತೆ ನೆಲಕಚ್ಚಿತ್ತು. ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮನೈ ಅವರ ಆಪ್ತ ಸ್ನೇಹಿತ ಜನರಲ್ ಖಾಸಿಂ ಸೊಲೆಮನಿಯನ್ನು ಕೊಲ್ಲಲು ಟ್ರಂಪ್ ಆದೇಶಿಸಿದ್ದು ಇರಾನ್ ಅನ್ನು ಮತ್ತಷ್ಟು ಕೆರಳಿಸಿತ್ತು. ಹೀಗಾಗಿ ಟ್ರಂಪ್ ಮತ್ತು ಇರಾನ್ ಸಂಬಂಧ ಹಾವು-ಮುಂಗುಸಿಯಂತಾಯಿತು. ಆದರೆ, ಈಗ ಬೈಡೆನ್ ಅವರನ್ನು ಇರಾನ್ ಅನ್ನು ಮತ್ತೆ ಸಂಧಾನದ ಮೇಜಿಗೆ ಕರೆಯುವ ಸಾಧ್ಯತೆ ಅಧಿಕವಾಗಿದೆ. ರಷ್ಯಾ
ಇತ್ತೀಚೆಗಷ್ಟೇ ಬೈಡೆನ್ ಅವರು ರಷ್ಯಾವನ್ನು “ಅಮೆರಿಕಕ್ಕಿರುವ ಅತಿದೊಡ್ಡ ಬೆದರಿಕೆ’ ಎಂದು ಬಣ್ಣಿಸಿದ್ದರು. 2011ರಲ್ಲಿ ಉಪಾಧ್ಯಕ್ಷರಾಗಿದ್ದ ಬೈಡೆನ್ ರಷ್ಯಾ ಚುನಾವಣೆ ಕುರಿತು ಪ್ರಸ್ತಾಪಿಸಿ, “ನಾನೇನಾದರೂ ಪುಟಿನ್ ಆಗಿದ್ದರೆ, ಮತ್ತೂಂದು ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರಲಿಲ್ಲ’ ಎಂದಿದ್ದರು. ಇದನ್ನು ಪುಟಿನ್ ಮರೆತಿರಲಿಕ್ಕಿಲ್ಲ. ಅಲ್ಲದೆ, 2016ರ ಅಮೆರಿಕ ಚುನಾವಣೆಯ ಫಲಿತಾಂಶದಲ್ಲಿ ರಷ್ಯಾದ ಕೈವಾಡವಿತ್ತು ಎಂಬ ಆರೋಪವೂ ಡೆಮಾಕ್ರಾಟ್‌ಗಳನ್ನು ಕೆರಳಿಸಿತ್ತು. ಈಗ ಬೈಡೆನ್‌ಗೆ ನಾಯಕತ್ವ ಸಿಕ್ಕಿದರೆ, ತಮ್ಮ ಮೇಲೆ ಇನ್ನಷ್ಟು ಒತ್ತಡ, ಮತ್ತಷ್ಟು ನಿರ್ಬಂಧ ಖಚಿತ ಎಂದು ರಷ್ಯಾ ಭಾವಿಸಿದೆ.