ವಾಷಿಂಗ್ಟನ್: ಇಸ್ರೇಲ್, ಪ್ಯಾಲೆಸ್ತೀನ್ ನಡುವಿನ ಕಾಳಗದಿಂದ ನಾಶವಾಗಿರುವ ಗಾಜಾ ಪಟ್ಟಣವನ್ನು ಪುನರುತ್ಥಾನ ಮಾಡುವುದಾಗಿ ಅಮೆರಿಕ ಘೋಷಿಸಿದೆ. ವಾಷಿಂಗ್ಟನ್‌ನಲ್ಲಿ ಶನಿವಾರ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್, “”ಗಾಜಾ ಪಟ್ಟಣವು ಇಬ್ಬರ ನಡುವಿನ ವಿರಸಕ್ಕೆ ಕಾರಣವಾಗಿದೆ. ಇವರಿಬ್ಬರ ದ್ವೇಷಕ್ಕೆ ಗಾಜಾ ನಗರದಲ್ಲಿರುವ ಅಮಾಯಕ ಜನ ಹಾಗೂ ಅಲ್ಲಿನ ಮೂಲಸೌಕರ್ಯಗಳೆಲ್ಲವೂ ನಾಶವಾಗಿವೆ. ಹಾಗಾಗಿ, ಅಮೆರಿಕವು ತನ್ನಂತೆಯೇ ಸಮಾನ ಮನಸ್ಕರಿರುವ ದೇಶಗಳ ಸಹಕಾರದೊಂದಿಗೆ ಗಾಜಾ ನಗರದ ಪುನರುತ್ಥಾನಕ್ಕಾಗಿ ಶ್ರಮಿಸಲಿದೆ” ಎಂದು ತಿಳಿಸಿದ್ದಾರೆ.
ಇನ್ನು ಮುಂದೆ ಅಮೆರಿಕ ಕೈಗೊಳ್ಳುವ ಪುನರುತ್ಥಾನ ಕಾರ್ಯವು, ಪ್ಯಾಲೆಸ್ತೀನ್ ಸರ್ಕಾರ ಹಾಗೂ ಹಮಾಸ್ ಉಗ್ರರ ಸಮಾಲೋಚನೆ – ಸಹಕಾರಗಳ ಮೇರೆಗೆ ಕಾರ್ಯಗತವಾಗಲಿದೆ. ಪ್ಯಾಲೆಸ್ತೀನಿಯನ್ನರಾಗಲೀ, ಹಮಾಸ್ ಉಗ್ರರಾಗಲೀ ಮತ್ತೆ ಶಸ್ತ್ರಾಸ್ತ್ರ ಎತ್ತದಂತೆ ಮಾಡುವುದೇ ಈ ಪುನರುತ್ಥಾನದ ಮೂಲ ಉದ್ದೇಶವಾಗಲಿದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ಇಸ್ರೇಲ್‌ನ ಹಿತಾಸಕ್ತಿ ಕಾಪಾಡಲು ಅಮೆರಿಕ ಯಾವತ್ತೂ ಬದ್ಧವಾಗಿರುತ್ತದೆ. ಈ ವಿಚಾರದಲ್ಲಿ ಯಾವತ್ತೂ ವಿಚಲಿತಗೊಳ್ಳುವ ಪ್ರಮೇಯವೇ ಇಲ್ಲ ಎಂದೂ ಬೈಡೆನ್ ಹೇಳಿದ್ದಾರೆ.
ಇದನ್ನೂ ಓದಿ :ಅಲೋಪತಿಗೆ ಅವಹೇಳನ: ಯೋಗಗುರು ಬಾಬಾ ರಾಮ್‌ದೇವ್ ವಿರುದ್ಧ ಕ್ರಮಕ್ಕೆ ಆಗ್ರಹ