Advertisement

ಜೋಡುಪಾಲ ನಿರಾಶ್ರಿತರ ಬಸ್‌ ಪಾಸ್‌ ನವೀಕರಣ

09:24 AM Nov 12, 2018 | Team Udayavani |

ಅರಂತೋಡು: ಜೋಡುಪಾಲ ಪ್ರಕೃತಿ ವಿಕೋಪದಲ್ಲಿ ನಿರಾಶ್ರಿತರಾಗಿ ಸಂಪಾಜೆ ಮತ್ತು ಕಲ್ಲುಗುಂಡಿ  ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವವರಿಗೆ ನೀಡಿದ್ದ ಕೆಎಸ್ಸಾರ್ಟಿಸಿ ಬಸ್‌ ಪಾಸನ್ನು 15 ದಿವಸಗಳ ಬಳಿಕ ನವೀಕರಿಸಲಾಗಿದೆ.

Advertisement

ಎರಡು ತಿಂಗಳ ಹಿಂದೆ ಸಚಿವ ಯು.ಟಿ. ಖಾದರ್‌ ನಿರಾಶ್ರಿತರ ಶಿಬಿರಕ್ಕೆ ಆಗಮಿಸಿದ ಸಂದರ್ಭ ನಿರಾಶ್ರಿತರು ತಮಗೆ ಉಚಿತ ಪಾಸ್‌ ನೀಡಬೇಕೆಂದು ಆಗ್ರಹಿಸಿದ ಹಿನ್ನೆಲೆಯಲ್ಲಿ ಸಚಿವರು ಉಚಿತ ಪಾಸ್‌ ವ್ಯವಸ್ಥೆ ಕಲ್ಪಿಸಿದ್ದರು. ಒಂದು ತಿಂಗಳು ನಿರಾಶ್ರಿತರು ಉಚಿತವಾಗಿ ಬಸ್ಸಲ್ಲಿ ಪ್ರಯಾಣ ಮಾಡಿದ್ದರು. ಅವಧಿ ಮುಗಿದ ಬಳಿಕ ಪಾಸನ್ನು ನವೀಕರಿಸಬೇಕಿದ್ದರೂ  ಕೆಎಸ್ಸಾರ್ಟಿಸಿ ಅಧಿಕಾರಿಗಳು ನವೀಕರಿಸದೆ ಸತಾಯಿಸುತ್ತಿದ್ದರು.ವಿದ್ಯಾರ್ಥಿ ಗಳಿಗೆ ನೀಡಿದ್ದ ಬಸ್‌ ಪಾಸನ್ನೂ ನವೀಕರಿಸಿಲ್ಲ ಎಂದು ದೂರಲಾಗಿತ್ತು. ಈ ಕಾರಣದಿಂದ ನಿರಾಶ್ರಿತರ ಕೇಂದ್ರದಲ್ಲಿರುವ ಜನರು ತಮ್ಮ ಭೂಮಿ ಇರುವ ಜಾಗ ಜೋಡುಪಾಲ ಮತ್ತು ಮೊಣ್ಣಂಗೇರಿಗೆ ದಿನನಿತ್ಯ ಹೋಗಿ ಬರಲು ಹಾಗೂ ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಿಗೆ ತೆರಳಲು ಹಣ ನೀಡಬೇಕಾಗಿತ್ತು. ಈ ಬಗ್ಗೆ “ಉದಯವಾಣಿ‘ ವರದಿ ಪ್ರಕಟಿಸಿತ್ತು.

ಪಾಸ್‌ನ ಅವಧಿ ಒಂದು ತಿಂಗಳಿನದಾಗಿದ್ದು, ಅಗತ್ಯವಿದ್ದಲ್ಲಿ ಒಂದು ವರ್ಷ ಕಾಲ ಪ್ರತೀ ತಿಂಗಳು ನವೀಕರಿಸುತ್ತಿರಬಹುದಾಗಿದೆ. ಕೊಡಗು ಸಂಪಾಜೆ ಪರಿಹಾರ ಕೇಂದ್ರ ದಲ್ಲಿ ಈಗ 24 ಕುಟುಂಬಗಳ 73 ಜನರಿದ್ದಾರೆ. ಈ ಪೈಕಿ 13 ಮಂದಿ ವಿದ್ಯಾರ್ಥಿಗಳು. ದ.ಕ. ಸಂಪಾಜೆ ಕಲ್ಲುಗುಂಡಿ ಪರಿಹಾರ ಕೇಂದ್ರದಲ್ಲಿ 11 ಕುಟುಂಬಗಳಿದ್ದು, 9 ವಿದ್ಯಾರ್ಥಿಗಳ ಸಹಿತ 42 ಜನರಿದ್ದಾರೆ. ಒಬ್ಬರು ವೃದ್ಧೆಯೂ ಇದ್ದು, ಅನಾರೋಗ್ಯ ಪೀಡಿತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next