Advertisement
ದಕ್ಷಿಣ ಭಾರತದಲ್ಲಿಯೇ ಅತಿ ಎತ್ತರವಾದ ಮೇರುಶ್ರೀ ಚಕ್ರವನ್ನು ಹೊಂದಿರುವ ಕ್ಷೇತ್ರದಲ್ಲಿ ಸಂಪನ್ನಗೊಂಡ ಈ ಮಹಾನಯಾಗವು ಬಹು ಫಲಪ್ರದವಾದದು. ಸಹಸ್ರ ಸಹಸ್ರ ಸಂಖ್ಯೆಯ ಕದಳಿ ಹಣ್ಣನ್ನು ತ್ರಿಮಧುರಯುಕ್ತವಾಗಿ ಹೋಮಿಸಿ ಲಲಿತಾ ಸಹಸ್ರನಾಮದಿಂದ ಆಕೆಯನ್ನು ವಿಧ ವಿಧದ ಕುಸುಮಗಳಿಂದ ಅರ್ಜಿಸಿ ಬಗೆ ಬಗೆಯ ನೈವೇದ್ಯವನ್ನಿಟ್ಟು ಭೂಮಂಡಲದ ಒಡತಿಯಾದ ರಾಜರಾಜೇಶ್ವರಿಯ ಅನುಗ್ರಹವನ್ನು ಯಾಚಿಸುವ ಯಾಗವನ್ನು ಮುಂಬೈಯ ಖ್ಯಾತ ಜಿಮ್ ಟ್ರೈನರ್ ವಿನೋದ್ ಜನ್ನ ಹಾಗೂ ಪ್ರಜ್ಞಾ ಪ್ರಜ್ಞ ಆಂಗ್ಲ ಮಾಧ್ಯಮ ಶಾಲೆಯ ಪರವಾಗಿ ಸಮರ್ಪಿಸಲಾಯಿತು.
Related Articles
Advertisement
ಬ್ರಹ್ಮಾಂಡ ಪುರಾಣದ ಉತ್ತರಖಂಡದಲ್ಲಿ ಶ್ರೀ ಹಯಗ್ರೀವರು ಅಗಸ್ತ್ಯ ಋಷಿಯೊಂದಿಗೆ ನಡೆಸಿದ ಸಂವಾದವೇ ಶ್ರೀ ಲಲಿತಾ ಸಹಸ್ರನಾಮ. ಅತ್ಯಂತ ನಿಗೂಢವಾದ ಲಲಿತಾಂಬಿಕೆಗೆ ಈ ಮಂತ್ರವು ಅಕ್ಕರೆಯುಳ್ಳದ್ದಾಗಿದೆ. ಈ ಮಂತ್ರ ರಹಸ್ಯಾತ್ಮಕವಾದದ್ದು ಆದ್ದರಿಂದ ಇದಕ್ಕೆ ಸದೃಶವಾದ ಮಂತ್ರ ಹಿಂದೆಯೂ ಇರಲಿಲ್ಲ ಮುಂದೆಯೂ ಇರಲು ಸಾಧ್ಯವಿಲ್ಲ.. ಜೀವಿತಕಾಲದಲ್ಲಿ ಒಮ್ಮೆಯಾದರೂ ಲಲಿತಾರಾಧನೆ ಮಾಡಿದರೆ ಅದರ ಪುಣ್ಯ ವಿವರಿಸಲು ಶಿವನಿಂದಲೂ ಸಾಧ್ಯವಿಲ್ಲ. ಅಂತಹ ಪುಣ್ಯಪ್ರದವಾದ ಲಲಿತಾಂಬಿಕೆ ಮಂಗಳಕರವಾದ ಫಲವನ್ನು ನೀಡುವವಳು.ಶ್ರೀ ಕ್ಷೇತ್ರದಲ್ಲಿ ನಿರಂತರವಾಗಿ ಯಾಗ ಸಂಪನ್ನಗೊಳ್ಳುತ್ತಿದ್ದು ಶಕ್ತಿ ಕ್ಷೇತ್ರದಲ್ಲಿ ಮಿನಿ ಶ್ರೇಷ್ಠರಿಂದ ಶ್ರೀ ಚಕ್ರ ಆರಾಧನೆ ನೆರವೇರುತ್ತಿತ್ತು ಎನ್ನುವುದಕ್ಕೆ ಸಾಕ್ಷಿಯಾಗಿದೆ. ಯಾಗದಲ್ಲಿ ಪಾಲ್ಗೊಂಡ ಎಲ್ಲರಿಗೂ ಒಳ್ಳೆಯದಾಗಲಿ.
-ಶ್ರೀ ರಮಾನಂದ ಗುರೂಜಿ, ಧರ್ಮದರ್ಶಿ