Advertisement

government ಉದ್ಯಮಗಳಲ್ಲಿ ಉದ್ಯೋಗ ಕಡಿತ: ರಾಹುಲ್‌ ಗಾಂಧಿ

12:36 AM Jun 19, 2023 | Team Udayavani |

ಹೊಸದಿಲ್ಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕೇಂದ್ರ ಸರಕಾರ‌ದ ವಿರುದ್ಧ ತೀವ್ರವಾಗಿ ವಾಗ್ಧಾಳಿ ನಡೆಸಿದ್ದಾರೆ. ಕೇಂದ್ರ ಸರಕಾರ‌ 2014ರ ಅನಂತರ ಸರಕಾರಿ ಉದ್ದಿಮೆಗಳಲ್ಲಿನ 2 ಲಕ್ಷ ಹುದ್ದೆಗಳನ್ನು ಕಡಿತಗೊಳಿಸಿದೆ. ಉದ್ಯೋಗಾಕಾಂಕ್ಷಿಗಳಾದ ಯುವಕರ ಉಸಿರುಗಟ್ಟಿಸುತ್ತಿದೆ ಎಂದು ರಾಹುಲ್‌ ಟ್ವೀಟ್‌ ಮಾಡಿದ್ದಾರೆ.

Advertisement

2014ರಲ್ಲಿ ಸರಕಾರಿ ಉದ್ದಿಮೆಗಳಲ್ಲಿ 16.9 ಲಕ್ಷ ಉದ್ಯೋಗಿಗಳಿದ್ದರು. ಈಗ ಆ ಸಂಖ್ಯೆ 14.6 ಲಕ್ಷಕ್ಕಿಳಿದಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ಉದ್ಯೋಗಿಗಳ ಸಂಖ್ಯೆ ಕುಸಿಯುತ್ತಾ? ಬಿಎಸ್‌ಎನ್‌ಎಲ್‌ನಲ್ಲಿ 1,81,127 ಉದ್ಯೋಗ ಕಡಿತವಾಗಿದೆ.

ಸೈಲ್‌ನಲ್ಲಿ 61,928, ಎಂಟಿಎನ್‌ಎಲ್‌ನಲ್ಲಿ 34,997, ಎಸ್‌ಇಸಿಎಲ್‌ನಲ್ಲಿ 29,140, ಎಫ್ಸಿಐನಲ್ಲಿ 28,063, ಒಎನ್‌ಜಿಸಿಯಲ್ಲಿ 21,120 ಉದ್ಯೋಗಿಗಳ ಸಂಖ್ಯೆ ಕಡಿತವಾಗಿದೆ. ಇದರ ಬದಲು ಗುತ್ತಿಗೆ ಆಧಾರದಲ್ಲಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಹೀಗೆ ಮಾಡುವುದು ಮೀಸಲಾತಿ ಹಕ್ಕನ್ನು ಕಸಿದುಕೊಂಡಂತೆ ಅಲ್ಲವೇ? ಪರೋಕ್ಷವಾಗಿ ಕಂಪೆನಿಗಳನ್ನು ಖಾಸಗೀಕರಣ ಮಾಡುವ ಹುನ್ನಾರವಲ್ಲವೇ ಇದು? ವಾರ್ಷಿಕವಾಗಿ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇ ನೆಂದಿದ್ದ ಬಿಜೆಪಿ ಈಗ ಉದ್ಯೋಗ ಕಸಿಯುತ್ತಿದೆ ಎಂದು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next