Advertisement

JNU ನಲ್ಲಿ ಪದೇ ಪದೇ ದೇಶವಿರೋಧಿ ಘೋಷಣೆ ; ಪರಿಶೀಲಿಸಲು ಸಮಿತಿ ರಚನೆ

07:37 PM Oct 02, 2023 | Team Udayavani |

ಹೊಸದಿಲ್ಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ ಕ್ಯಾಂಪಸ್‌ನಲ್ಲಿ ಪದೇ ಪದೇ ದೇಶವಿರೋಧಿ ಘೋಷಣೆಗಳನ್ನು ಕೂಗುತ್ತಿರುವುದನ್ನು ಪರಿಶೀಲಿಸಲು ಸಮಿತಿಯನ್ನು ಆಡಳಿತ ಮಂಡಳಿಯು ಶೀಘ್ರದಲ್ಲೇ ರಚಿಸಲಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

Advertisement

“ಭಾರತೀಯ ಆಕ್ರಮಿತ ಕಾಶ್ಮೀರ”, “ಮುಕ್ತ ಕಾಶ್ಮೀರ” ಮತ್ತು “ಭಗವಾ ಜಲೇಗಾ” ಮುಂತಾದ ಘೋಷಣೆಗಳ ಚಿತ್ರಗಳು ಸ್ಕೂಲ್ ಆಫ್ ಲ್ಯಾಂಗ್ವೇಜಸ್ ಕಟ್ಟಡದ ಗೋಡೆಯ ಮೇಲೆ ಬರೆದುದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಆಡಳಿತ ಮಂಡಳಿ ಗೋಡೆಗಳಿಗೆ ಬಣ್ಣ ಬಳಿಯುವ ವ್ಯವಸ್ಥೆ ಮಾಡಿತ್ತು.

“ನಾವು ನಮ್ಮ ಮುಖ್ಯ ಭದ್ರತಾ ಅಧಿಕಾರಿಯಿಂದ ವರದಿಗಾಗಿ ಕಾಯುತ್ತಿದ್ದು, ಅವರ ಸಲಹೆಗಳ ಆಧಾರದ ಮೇಲೆ ಸಮಸ್ಯೆಯನ್ನು ಎದುರಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ವಿವಿ ಕ್ಯಾಂಪಸ್‌ನಲ್ಲಿ ಪದೇ ಪದೇ ದೇಶವಿರೋಧಿ ಘೋಷಣೆಗಳ ಘಟನೆಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಲು ಯೋಜಿಸಿದೆ ” ಎಂದು ಜೆಎನ್‌ಯು ರೆಕ್ಟರ್ ಸತೀಶ್ ಚಂದ್ರ ಗಾರ್ಕೋಟಿ ಪಿಟಿಐಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next