Advertisement
1956ರಲ್ಲಿ, ಕೊಲ್ಕತಾದಲ್ಲಿ ಜನಿಸಿ, ಡೆಲ್ಲಿ, ಲಂಡನ್ ಮತ್ತು ಅಲೆಕ್ಸಾಡ್ರಿಯಾದಲ್ಲಿ ಶಿಕ್ಷಣ ಪಡೆದು, ಸಾಮಾಜಿಕ ಮಾನವಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಗಳಿಸಿರುವ, ಹಾಗೂ ಅರಾಬಿಕ್-ಪರ್ಶಿಯನ್ ಭಾಷೆಗಳಲ್ಲಿ ಪಾಂಡಿತ್ಯವಿರುವ, ಸದ್ಯ ನ್ಯೂಯಾರ್ಕ್ ನಲ್ಲಿ ನೆಲೆಸಿರುವ ಅಮಿತಾವ್ ಘೋಷ್ ಅಪ್ರತಿಮ ಪ್ರತಿಭಾಶಾಲಿ. ಇವರ ಮೊದಲ ಕೃತಿ ದ ಸರ್ಕಲ್ ಆಫ್ ರೀಜ‚ನ್ 1986ರಲ್ಲಿ ಪ್ರಕಟವಾಯಿತು. ಅಂದಿನಿಂದ, ಕಳೆದ ಮೂರು ದಶಕಗಳಲ್ಲಿ ಅಮಿತಾವ್ ಎಂಟು ಕಾದಂಬರಿಗಳನ್ನು ಮತ್ತು ಆರು ವೈಚಾರಿಕ/ಸಂಶೋಧನಾತ್ಮಕ ಕೃತಿಗಳನ್ನು ರಚಿಸಿದ್ದಾರೆ. ಇವರ ಪ್ರಸಿದ್ಧ ಕೃತಿಗಳೆಂದರೆ ದ ಶಾಡೋ ಲೈನ್ಸ್ (1988), ದ ಗ್ಲಾಸ್ ಪ್ಯಾಲಿಸ್ (2000), ಇನ್ ಅನ್ ಆಂಟೀಕ್ ಲ್ಯಾಂಡ್ (1992), ದ ರಿವರ್ ಆಫ್ ಸ್ಮೋಕ್ (2011), ಇತ್ಯಾದಿ. ಇವರಿಗೆ ಸಂದಿರುವ ಪ್ರಮುಖ ಪ್ರಶಸ್ತಿಗಳೆಂದರೆ, ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ (ದ ಶಾಡೋ ಲೈನ್ಸ್), ಆರ್ಥರ್ ಸಿ. ಕ್ಲಾರ್ಕ್ ಪ್ರಶಸ್ತಿ (ದ ಕೊಲ್ಕತಾ ಕ್ರೋಮೋಜ‚ೋಮ್), ಒಟ್ಟು ಜೀವನ ಸಾಧನೆಗಾಗಿ ಟಾಟಾ ಪ್ರಶಸ್ತಿ ಮತ್ತು ಈ ವರ್ಷದ ಜ್ಞಾನಪೀಠ ಪ್ರಶಸ್ತಿ, ಕೇಂದ್ರ ಸರಕಾರದಿಂದ ಕೊಡಲ್ಪಡುವ ಪದ್ಮಶ್ರೀ ಪ್ರಶಸ್ತಿ… ಇತ್ಯಾದಿ.
Related Articles
.
1989ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಪಾತ್ರವಾದ ನೆರಳಿನ ರೇಖೆಗಳು- ದ ಶಾಡೋ ಲೈನ್ಸ್ ಎಂಬ ಕಾದಂಬರಿ ಅಮಿತಾವ್ ಘೋಷ್ ಅವರಿಗೆ ಅಭೂತಪೂರ್ವ ಕೀರ್ತಿಯನ್ನು ತಂದುಕೊಟ್ಟಿತು. (ಈ ಕಾದಂಬರಿಯನ್ನು ಎಂ. ಎಸ್. ರಘುನಾಥ್ ಕನ್ನಡಕ್ಕೆ ಅನುವಾದಿಸಿದ್ದಾರೆ.) ಭಿನ್ನ ರಾಷ್ಟ್ರಗಳಲ್ಲಿರುವ ಎರಡು ಕುಟುಂಬಗಳ ಸಂಬಂಧಗಳನ್ನು ಹಾಗೂ ಆಗು-ಹೋಗುಗಳನ್ನು ಚಿತ್ರಿಸುವ ಈ ಕಾದಂಬರಿ ಎರಡು ಭಾಗಗಳಲ್ಲಿದೆ. ಕೊಲ್ಕತಾದ ಜಸ್ಟಿಸ್ ದತ್ತಾ ಚೌಧುರಿ ಮತ್ತು ಲಂಡನ್ನಿನಲ್ಲಿರುವ ಲಯನೆಲ್ ಟ್ರೆಸಾಸೆನ್ ಲಂಡನ್ನಿನಲ್ಲಿ ಗೋಷ್ಠಿಗಳಲ್ಲಿ ಭೇಟಿಯಾಗಿ ಗಾಢ ಸ್ನೇಹಿತರಾಗುತ್ತಾರೆ. ಈ ಕುಟುಂಬಗಳ ಮೂರು ಪೀಳಿಗೆಗಳ ಕಥೆಯನ್ನು (ಹೆಸರಿಲ್ಲದ) ಮೂರನೆಯ ಪೀಳಿಗೆಯ ತರುಣನು ತನ್ನ ನೆನಪುಗಳ ಮೂಲಕ ನಿರೂಪಿಸುತ್ತಾನೆ. ಈ ಕಥೆಯ ಮುಖ್ಯಾಂಶಗಳನ್ನು ಗ್ರಹಿಸುವುದು ಕಷ್ಟ; ಕಾರಣ ನಿರೂಪಕನು ಕಾಲ-ದೇಶಗಳ ಸಂಬಂಧವಿಲ್ಲದ, ಒಂದರ ಮೇಲೊಂದು ಪೇರಿಸಲ್ಪಟ್ಟಿರುವ ನೆನಪುಗಳ ಮೂಲಕ ಉತ್ತಮ ಪುರುಷ ನಿರೂಪಣೆಯಲ್ಲಿ ಕಥಿಸುತ್ತಾನೆ. ಕಥೆಯು ಎರಡನೆಯ ಮಹಾಯುದ್ಧದ ಕಾಲದಿಂದ ಪ್ರಾರಂಭವಾಗಿ ಸ್ವಾತಂತ್ರ್ಯಾನಂತರದ ಕಾಲಘಟ್ಟದಲ್ಲಿ (ಸುಮಾರು 80ನೆಯ ದಶಕದಲ್ಲಿ) ಮುಗಿಯುತ್ತದೆ. ದತ್ತಾ ಚೌಧರಿಯವರ ಇಬ್ಬರು ಹೆಣ್ಣು ಮಕ್ಕಳು ನಿರೂಪಕನ ಅಜ್ಜಿ ಮತ್ತು ಮಾಯಾದೇವಿ (ಠಾಕುರ್‌ಮಾ). ಠಾಕುರ್‌ಮಾ ರಾಯಭಾರಿ ವೃತ್ತಿಯಲ್ಲಿರುವ ಶ್ರೀಮಂತ ಶಾಹೆಬ್ ಎಂಬುವವನನ್ನು ಮದುವೆಯಾಗುತ್ತಾಳೆ; ಅವರ ಮಗ ತ್ರಿದಿಬ್ ಹಾಗೂ ಮಗಳು ಇಳಾ. ಲಂಡನ್ನಿನ ಲಯನೆಲ್ ಟ್ರೆಸಾಸೆನ್‌ನ ಮಗ ಆಲನ್ ಟ್ರೆಸಾಸೆನ್ ಮತ್ತು ಅವನ ಮಗಳು ಮೇ. ಕಾದಂಬರಿ ಪ್ರಾರಂಭವಾಗುವ ಎರಡನೆಯ ಮಹಾಯುದ್ಧœದ ಆರಂಭದಲ್ಲಿ ಶಾಹೆಬ್‌ನ ಚಿಕಿತ್ಸೆಗಾಗಿ ಮಾಯಾದೇವಿ ಮತ್ತು ಶಾಹೆಬ್ ತಮ್ಮ ಮಕ್ಕಳೊಡನೆ ಲಂಡನ್‌ನಲ್ಲಿದ್ದ ಪ್ರ„ಸ್ ಕುಟುಂಬವನ್ನು ಸೇರುತ್ತಾರೆ. ಅಲ್ಲಿ ನಡೆದ ಆಗುಹೋಗುಗಳು ಮತ್ತು ಆ ಕಾಲದಲ್ಲಿ ಭಾರತದಲ್ಲಿದ್ದ ಚೌಧುರಿ ಕುಟುಂಬದ ಆಗುಹೋಗುಗಳು ಮೊದಲನೆಯ “ದೂರ ಹೋಗುವುದು’ ಎಂಬ ಭಾಗದಲ್ಲಿವೆ. ಲಂಡನ್ ಮೇಲಾಗುವ ಬಾಂಬ್ ಧಾಳಿಯಲ್ಲಿ ಆಲನ್ ಪ್ರ„ಸ್ ಸಾವಿಗೆ ತುತ್ತಾದ ನಂತರ ಶಾಹೆಬ್-ಮಾಯಾ ಕುಟುಂಬ ಭಾರತಕ್ಕೆ ಹಿಂತಿರುಗುತ್ತದೆ; ಅನಂತರದ ಕಥೆ “ಮನೆಗೆ ಹಿಂತಿರುಗುವುದು’ ಎಂಬ ಎರಡನೆಯ ಭಾಗದಲ್ಲಿದೆ. ತ್ರಿದಿಬ್ ಮೇಯನ್ನು ಪ್ರೀತಿಸುತ್ತಾನೆ; ನಿರೂಪಕನು ಇಳಾಳನ್ನು ಪ್ರೀತಿಸಿದರೂ ಅವಳಿಗೆ ತನ್ನ ಪ್ರೇಮವನ್ನು ಹೇಳಿಕೊಳ್ಳಲಾಗದೆ ಮನಸ್ಸಿನಲ್ಲಿಯೇ ಕೊರಗುತ್ತಾನೆ. ಒಮ್ಮೆ (1964ರಲ್ಲಿ) ತ್ರಿದಿಬ್, ಮೇ, ಮತ್ತು ನಿರೂಪಕನ ಅಜ್ಜಿ ಢಾಕಾಕ್ಕೆ ತಮ್ಮ ಹಳೆಯ ಮನೆಯನ್ನು ನೋಡಲು ಹೋದಾಗ, ಅಲ್ಲಿ ಭುಗಿಲೆದ್ದ ಮತೀಯ ಗಲಭೆಯಲ್ಲಿ ಮೇಯನ್ನು ರಕ್ಷಿಸಲು ಹೋಗಿ ತ್ರಿದಿಬ್, ಅಲ್ಲಿದ್ದ ಜೆತಾಮೋಷಾಯ್ ಮತ್ತು ಅವರ ರಿûಾ ಚಾಲಕ ಖಲೀಲ್ ಈ ಮೂವರೂ ಸಾಯುತ್ತಾರೆ. ಇಳಾ ಆಲನ್ ಪ್ರ„ಸ್‌ನ ಮಗ ನಿಕ್‌ನನ್ನು ಮದುವೆಯಾಗಿ, ಅವನೊಡನೆ ಇರಲಾಗದೆ ಬೇರೆಯಾಗುತ್ತಾಳೆ ಮತ್ತು ಮೇ ಲಂಡನ್‌ಗೆ ಹಿಂತಿರುಗಿ ಸಮಾಜಸೇವೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾಳೆ.
Advertisement
ಅನೇಕಾನೇಕ ಘಟನೆಗಳಿಂದ ಕಿಕ್ಕಿರಿದಿರುವ ಈ ಕಾದಂಬರಿ ಪ್ರಬುದ್ಧನಾಗುವ ಪ್ರಕ್ರಿಯೆ (ಎrಟಡಿಜಿnಜ ಖೀಟ), ವಾಸ್ತವ-ಕಲ್ಪನೆ ಇವೆರಡರ ನಡುವೆ ಇಲ್ಲದಿರುವ ವ್ಯತ್ಯಾಸ, ಪಾರಂಪರಿಕ ಹಿಂದೂ ಅವಿಭಕ್ತ ಕುಟುಂಬಗಳಲ್ಲಿ ಮಹಿಳೆಗೆ ಇರುವ ಪ್ರಾಬಲ್ಯ ಇತ್ಯಾದಿ ಅನೇಕ ಆಶಯಗಳಿಂದ ಹೆಣೆಯಲ್ಪಟ್ಟಿದೆ. ಇವುಗಳಲ್ಲಿ ಅತಿ ಮುಖ್ಯವಾದುದೆಂದರೆ ಎಲ್ಲ ನೆಲೆಗಳಲ್ಲಿಯೂ ಇರುವ ಗಡಿಗಳ ಕೃತ್ರಿಮ ಪರಿಕಲ್ಪನೆ. ವೈಯಕ್ತಿಕ ನೆಲೆಯಲ್ಲಿ, ತ್ರಿದಿಬ್ ಒಮ್ಮೆ ಅನಿರೀಕ್ಷಿತವಾಗಿ ಇಬ್ಬರು ಅಪರಿಚಿತ ಸ್ತ್ರೀ-ಪುರುಷರು ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದನ್ನು ನೋಡುತ್ತಾನೆ; ಆಗ ಅವನಿಗೆ ಈ ಬಗೆಯ ಮುಕ್ತ ಲೈಂಗಿಕ ಕ್ರಿಯೆ ವ್ಯಕ್ತಿಗಳು ತಮ್ಮ ತಮ್ಮ ಅಹಂನ ಗಡಿಯನ್ನು ಮೀರುವ ಕ್ರಿಯೆ ಎಂದು ಅರಿವಾಗುತ್ತದೆ. ಢಾಕಾದಲ್ಲಿಯೇ ಹುಟ್ಟಿ ಬೆಳೆದ ನಿರೂಪಕನ ಅಜ್ಜಿ ಸ್ವಾತಂತ್ರ್ಯಾನಂತರ ಮತ್ತೂಮ್ಮೆ ಢಾಕಾಕ್ಕೆ ಹೋದಾಗ ತಾನು ಅಲ್ಲಿ ಪರದೇಶಿ, ಅದು ತನ್ನ ನಾಡಲ್ಲ ಎಂಬುದನ್ನು ಅರಗಿಸಿಕೊಳ್ಳಲು ಸಾಧ್ಯವೇ ಆಗುವುದಿಲ್ಲ. ವಿಮಾನದಲ್ಲಿ ಬರುವಾಗ “ಭಾರತದ ಗಡಿರೇಖೆಗಳು ಎಲ್ಲಿವೆ?’ ಎಂದು ಅವಳು ಹುಡುಕುತ್ತಾಳೆ; ಅವಳಿಗೆ ಯಾವ ಮೂರ್ತ ಗಡಿಗಳೂ ಕಾಣುವುದಿಲ್ಲ. “ರಾಷ್ಟ್ರಗಳನ್ನು ಬೇರ್ಪಡಿಸುವ ಗಡಿರೇಖೆಗಳೇ ಹಿಂಸೆಗೆ ಜನ್ಮ ಕೊಡುತ್ತವೆ’ ಎಂದು ಮತ್ತೂಂದು ಸಂದರ್ಭದಲ್ಲಿ ಅಮಿತಾವ್ ಘೋಷ್ ನೋವಿನಿಂದ ಹೇಳುತ್ತಾರೆ.
ಸಾಹಿತ್ಯ ಅಕಾಡೆಮಿಯು ತನ್ನ ಪ್ರಶಸ್ತಿಪತ್ರದಲ್ಲಿ ದಾಖಲಿಸಿರುವಂತೆ, ಈ ಕಾದಂಬರಿಯು “ಮತೀಯ ಹಿಂಸೆಯೆಂಬ ಸಂಗತಿಯ ಮೇಲೆ ಮತ್ತು ಹೇಗೆ ಆ ಮತೀಯ ಹಿಂಸೆಯು ಭಾರತ ಉಪಖಂಡದ ಸಾಮೂಹಿಕ ಮನಸ್ಸಿನಲ್ಲಿ ಆಳವಾಗಿ ಹಾಗೂ ವ್ಯಾಪಕವಾಗಿ ಬೇರು ಬಿಟ್ಟಿದೆ ಎಂಬುದರ ಮೇಲೆ, ಪ್ರಖರ ಬೆಳಕು ಬೀರುತ್ತದೆ’.
ಸಿ. ಎನ್. ರಾಮಚಂದ್ರನ್