Advertisement

ಜಮ್ಮು ಕಾಶ್ಮೀರ : ಕಾವಲು ಪೇದೆ ಕೈಯಿಂದ ಬಂದೂಕು ಕಸಿದ ಉಗ್ರರು

05:05 PM Oct 15, 2018 | udayavani editorial |

ಶ್ರೀನಗರ : ಜಮ್ಮು ಕಾಶ್ಮೀರದಲ್ಲಿ ಬಡಗಾಂವ್‌ ಜಿಲ್ಲೆಯಲ್ಲಿ ನಿವೃತ್ತ ಪೊಲೀಸ್‌ ಅಧಿಕಾರಿಯೋರ್ವರ ಮನೆ ಕಾವಲಿಗಿದ್ದ  ಪೊಲೀಸ್‌ ಸಿಬಂದಿಯ ಬಂದೂಕನ್ನು ಶಂಕಿತ ಉಗ್ರರು ಕಸಿದುಕೊಂಡು ಪರಾರಿಯಾಗಿರುವ ಘಟನೆ ವರದಿಯಾಗಿದೆ.

Advertisement

ನಿವೃತ್ತ ಪೊಲೀಸ್‌ ಅಧಿಕಾರಿ ಶೇಕ್‌ ಗುಲಾಮ್‌ ಮೊಹಮ್ಮದ್‌ ಅವರ ಮಧ್ಯ ಕಾಶ್ಮೀರದಲ್ಲಿನ ಛದೂರಾ ಪ್ರದೇಶದಲ್ಲಿರುವ ನಿವಾಸದ ಆವರಣವನ್ನು ನುಗ್ಗಿ ಬಂದ ವಂಕಿತ ಉಗ್ರರು ಕಾವಲು ಪೊಲೀಸ್‌ ಸಿಬಂದಿಯ ಬಂದೂಕನ್ನು ಕಸಿದು ಪರಾರಿಯಾದರು ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. 

ಇದೇ ವೇಳೆ ಶಂಕಿತ ಉಗ್ರರು ಎರಡು ಕಾರ್‌ಬೈನ್‌ ರೈಫ‌ಲ್‌ಗ‌ಲನ್ನು ಕೂಡ ಕಸಿದುಕೊಂಡಿದ್ದಾರೆ. 

ಪೊಲೀಸರೀಗ ಶಂಕಿತ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next