Advertisement

“ಪುಟ 109’ರಲ್ಲಿ ಜೆಕೆ ಸಿಕ್ಸ್ ಪ್ಯಾಕ್: Watch

03:50 PM Oct 10, 2018 | |

ನಿರ್ದೇಶಕ ದಯಾಳ್‌ ಪದ್ಮನಾಭ್‌ “ಕರಾಳ ರಾತ್ರಿ’ ಚಿತ್ರದ ನಂತರ ಆ್ಯಕ್ಷನ್ ಕಟ್‌ ಹೇಳಿರೋ “ಪುಟ 109′ ನಾಟಕಾಧಾರಿತ ಕ್ರೈಂ ಸಸ್ಪೆನ್ಸ್ ಕಥೆಯುಳ್ಳ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿ ಯೂಟ್ಯೂಬ್‌ನಲ್ಲಿ ಸದ್ದು ಮಾಡುತ್ತಿದ್ದರೆ, ಇತ್ತ ಚಿತ್ರತಂಡ ಚಿತ್ರದ ಟೈಟಲ್ ಸಾಂಗ್ ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ಜೆಕೆ‌ ಪೊಲೀಸ್ ಕಾಪ್ ಆಗಿ ಕಾಣಿಸಿಕೊಂಡಿದ್ದು, ಕ್ರಿಮಿನಲ್ಸ್​ಗಳನ್ನು ಮಟ್ಟ ಹಾಕುವ ಹಾಡು ಇದಾಗಿದೆ. ಹಾಡಿಗೆ ಪಣೇಶ್ ರಾಜ್​ರ ಸಾಹಿತ್ಯವಿದ್ದು, ರಂಜಿತ್ ದಿವ್ಯ ಧ್ವನಿಯಲ್ಲಿ ಹಾಡು ಮೂಡಿಬಂದಿದೆ.

Advertisement

ಅಲ್ಲದೇ ಈ ಹಾಡಿನಲ್ಲಿ ಜೆಕೆ ಕಟ್ಟು ಮಸ್ತಾದ ಸಿಕ್ಸ್ ಪ್ಯಾಕ್ ದೇಹವನ್ನ ಪ್ರದರ್ಶನ ಮಾಡಿದ್ದಾರೆ. “ಪುಟ 109′ ಚಿತ್ರದ ಹೆಸರೇ ಹೇಳೋ ಹಾಗೆ ಫೋರೆನ್ಸಿಕ್ ಅನ್ನೋ ಪುಸ್ತಕದಲ್ಲಿ ಕಾಣೆಯಾದ 109ನೇ ಪುಟದ ಸುತ್ತ ಕಥೆ ತಿರುಗುತ್ತೆ. ನಿಗೂಢ ಕೊಲೆಯೊಂದರ ಹಿಂದೆ ಬಿದ್ದ ಸ್ಮಾರ್ಟ್ ಅಂಡ್ ಇಂಟೆಲಿಜೆಂಟ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಜಯರಾಮ್ ಕಾರ್ತಿಕ್ (ಜೆ.ಕೆ) ಕಾಣಿಸಿಕೊಂಡರೆ, ನೆಗೆಟಿವ್ ಶೇಡ್ ಇರೋ ಬರಹಗಾರನ ಪಾತ್ರದಲ್ಲಿ ನವೀನ್‌ ಕೃಷ್ಣ ಕ್ಯೂರಿಯಾಸಿಟಿ ಹೆಚ್ಚಿಸುತ್ತಾರೆ. ನವೀನ್ ಕೃಷ್ಣ ಪತ್ನಿಯಾಗಿ ವೈಷ್ಣವಿ ಚಂದ್ರನ್ ನಟಿಸಿದ್ದಾರೆ.

ಇನ್ನು ಈ ಚಿತ್ರ ಒಂದು ಕ್ರೈಮ್‌ ಥ್ರಿಲ್ಲರ್‌ ಕಥಹಂದಾರವನ್ನೊಳಗೊಂಡಿದ್ದು, ಅರವಿಂದ್‌ ಅವರ ಕಥೆ, ದಯಾಳ್‌ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ನಿರ್ಮಾಣವೂ ಇವರದೇ. ಇವರ ಜೊತೆಗೆ ಅವಿನಾಶ್‌ ಯು ಶೆಟ್ಟಿ ನಿರ್ಮಾಣದಲ್ಲಿ ಸಾಥ್‌ ಕೊಟ್ಟಿದ್ದಾರೆ. ಚಿತ್ರದಲ್ಲಿ ವೈಷ್ಣವಿ, ಶ್ರೀ, ವಿಕ್ಟರಿ ವಾಸು ಇತರರು ನಟಿಸಿದ್ದಾರೆ. ಪಿಕೆಎಚ್‌ ದಾಸ್‌ ಛಾಯಾಗ್ರಹಣ, ಗಣೇಶ್‌ ನಾರಾಯಣ್‌ ಸಂಗೀತ ಸಂಯೋಜನೆ, ನವೀನ್ ಕೃಷ್ಣ ನಟನೆ ಜೊತೆಗೆ ಸಿನಿಮಾಕ್ಕೆ ಸಂಭಾಷಣೆಯನ್ನೂ ಬರೆದಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next